ಬಿಜೆಪಿಯದ್ದೇ ತಾಲಿಬಾನ್ ಸಂಸ್ಕೃತಿ: ಕಾಂಗ್ರೆಸ್ ತಿರುಗೇಟು
Team Udayavani, Oct 1, 2021, 6:53 AM IST
ಮಂಗಳೂರು: ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರದ್ದು ತಾಲಿಬಾನ್ ಸಂಸ್ಕೃತಿ ಎಂದು ಟೀಕೆ ಮಾಡುತ್ತಿರುವ ಬಿಜೆಪಿಯದ್ದೇ ತಾಲಿಬಾನ್ ಸಂಸ್ಕೃತಿಯಾಗಿದೆ. ಅವರು ನಡೆಸಿರುವ ಕೃತ್ಯಗಳೇ ಇದನ್ನು ಸಾಬೀತುಪಡಿಸಿವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹಾಗೂ ಶಾಸಕ ಯು.ಟಿ. ಖಾದರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿರುಗೇಟು ನೀಡಿದ್ದಾರೆ.
ದೇವರ ಗುಡಿಯನ್ನೇ ಒಡೆಯುವುದು ತಾಲಿಬಾನ್ ಸಂಸ್ಕೃತಿ ಅಲ್ಲವೇ ಎಂದು ಪ್ರಶ್ನಿಸಿದ ಹರೀಶ್ ಕುಮಾರ್ ಅವರು ಚರ್ಚ್, ಪಬ್ ದಾಳಿಗಳು, ಅನೈತಿಕ ಪೊಲೀಸಿಂಗ್ ಪ್ರಕರಣಗಳನ್ನು ನಡೆಸಿದ್ದು ಭಯೋತ್ಪಾದನಾ ಸಂಸ್ಕೃತಿ ಅಲ್ವ? ರಾಜ್ಯದಲ್ಲಿ ನಡೆದ ಅನೇಕ ಹತ್ಯೆ ಪ್ರಕರಣಗಳಲ್ಲಿ ಬಿಜೆಪಿ ಪರಿವಾರ ಸಂಘಟನೆಗಳ ಅನೇಕರು ಈಗಲೂ ಜೈಲಿನಲ್ಲಿದ್ದಾರೆ. ಆದರೆ ಯಾವುದೇ ಕೊಲೆಯಲ್ಲಿ ಕಾಂಗ್ರೆಸಿಗರು ಜೈಲಿಗೆ ಹೋಗಿಲ್ಲ. ಸಾವಿನಲ್ಲೂ ಮತ ಪಡೆದವರಿಗೆ ಕಾಂಗ್ರೆಸ್ನ್ನು ಟೀಕಿಸುವ ನೈತಿಕತೆ ಇಲ್ಲ ಎಂದರು.
ಶಾಸಕ ಯು.ಟಿ. ಖಾದರ್ ಮಾತನಾಡಿ, ಮುಖ್ಯಮಂತ್ರಿ ಯಾಗಿದ್ದ ಯಡಿಯೂರಪ್ಪ ಅವರ ಕಣ್ಣೀರು ಬರಿಸಿದ್ದು ತಾಲಿಬಾನ್ ಸಂಸ್ಕೃತಿ. ಯಾರಧ್ದೋ ಮಕ್ಕಳನ್ನು ಹೊಡೆಯಲು ಇವರು ಯಾರು? ಇದು ಯಾವ ಸಂಸ್ಕೃತಿ? ಇಂತಹ ಕೃತ್ಯ ಎಸಗುವ ಯಾರೇ ಆಗಲಿ ಅವರ ವಿರುದ್ದ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ವಿಶ್ವಾಸ್ದಾಸ್, ಶುಭೋದಯ ಆಳ್ವ, ಮುಹಮ್ಮದ್ ಮೋನು, ನೀರಜ್ಪಾಲ್, ಟಿ. ಕೆ. ಸುಧೀರ್, ನಝೀರ್ ಬಜಾಲ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.