‘ಕಾಂಗ್ರೆಸ್‌ನಿಂದ ಗೂಂಡಾ ರಾಜ್ಯವಾದ ಕರ್ನಾಟಕ’
Team Udayavani, Oct 7, 2017, 11:15 AM IST
ಉಳ್ಳಾಲ: ರಾಜ್ಯದಲ್ಲಿ ಬಿಹಾರ ಮಾದರಿಯಲ್ಲಿ ಗೂಂಡಾ ರಾಜ್ಯ ಸೃಷ್ಟಿಯಾಗುತ್ತಿದ್ದು, ಜಿಲ್ಲೆಯಲ್ಲಿ ಕೇರಳ ಮಾದರಿಯ ರಾಜಕೀಯ ಹತ್ಯೆ ನಡೆಯುತ್ತಿದೆ. ಇದರ ವಿರುದ್ಧ ಉಗ್ರ ಹೋರಾಟ ಆಗಬೇಕು ಎಂದು ಬಿಜೆಪಿ ರಾಜ್ಯ ಸಹ ವಕ್ತಾರೆ ಸುಲೋಚನಾ ಭಟ್ ಅಭಿಪ್ರಾಯಪಟ್ಟರು.
ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಕಾಂಗ್ರೆಸ್‌ನ ದುರಾಡಳಿತ, ಸಚಿವ ಖಾದರ್ ಅವರ ಅಸಮರ್ಥತನದ ವಿರುದ್ಧ ಬಿಜೆಪಿ ಕಾರ್ಯಕರ್ತ ಜುಬೇರ್ ಹತ್ಯೆ ವಿರೋಧಿಸಿ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಗಾಂಜಾ ವಿರುದ್ಧ, ಸಮಾಜದ ಪರವಾಗಿ ಕೆಲಸ ಮಾಡಿದ ಜುಬೇರ್ ಕೊಲೆಯನ್ನು ಕಾಂಗ್ರೆಸ್ ಪ್ರೇರಿತ ಗೂಂಡಾಗಳು ನಡೆಸುತ್ತಿದ್ದು, ಜಿಲ್ಲೆಯಲ್ಲಿ ರಾಜಕೀಯ ಹತ್ಯೆಗಳು ನಡೆಯುತ್ತಿದೆ. ಇಲ್ಲಿನ ಸಚಿವರಿಂದ ಪೊಲೀಸರು ಸರಿಯಾಗಿ ಕರ್ತವ್ಯ ನಡೆಸಲು ಸಾಧ್ಯವಾಗುತ್ತಿಲ್ಲ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿ, ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಅನಂತರ ಜಿಲ್ಲೆಯ ಕೋಮು ಸೌಹಾರ್ದತೆ ಕದಡಿದೆ. ಇದರಿಂದ ಜಿಲ್ಲೆಯ ಅಲ್ಲಲ್ಲಿ ಚೂರಿ ಇರಿತ, ಕೊಲೆಗಳಾಗುತ್ತಿವೆ ಎಂದರು.
ಬಿಜೆಪಿ ಅಲ್ಪಸಂಖ್ಯಾಕ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ್ ಮಾತನಾಡಿ, ಜುಬೇರ್ ಒಬ್ಬ ಸಾಮಾಜಿಕ ವ್ಯಕ್ತಿಯಾಗಿದ್ದು, ಇವರನ್ನು ಕಾಂಗ್ರೆಸ್‌ನ ಮುಖಂಡರೊಬ್ಬರು ಝುಬೇರ್ ರೌಡಿ ಶೀಟರ್ ಎನ್ನುವ ಪಟ್ಟ ನೀಡುತ್ತಾರೆ. ಮಂಗಳೂರು ಕ್ಷೇತ್ರದಲ್ಲಿ ಓಟಿಗಾಗಿ ಗಾಂಜಾ ವ್ಯವಸನಿಗಳನ್ನು ಪೋಷಿಸಲಾಗುತ್ತಿದೆ ಎಂದು ಆರೋಪಿಸಿದರು.
ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ, ಯು.ಟಿ.ಖಾದರ್ ಸಚಿವರಾದ ಬಳಿಕ ಚೂರಿ ಭಾಗ್ಯಗಳೇ ಹೆಚ್ಚಾಗುತ್ತಿದೆ ಎಂದರು.
ಮಂಗಳೂರು ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಮಾಜಿ ಅಧ್ಯಕ್ಷ ಚಂದ್ರ ಶೇಖರ್ ಉಚ್ಚಿಲ್, ಹಿರಿಯ ಮುಖಂಡ ಟಿ.ಜಿ.ರಾಜಾರಾಮ್ ಭಟ್, ಜಿ.ಪಂ. ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಉಪಾಧ್ಯಕ್ಷ ನಿತಿನ್ ಕುಮಾರ್, ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿ.ಪಂ. ಸದಸ್ಯೆ ಧನಲಕ್ಷ್ಮೀ ಗಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ರಾಮಚಂದ್ರ ಕುಂಪಲ, ರವಿಶಂಕರ್, ನವೀನ್ ಪಾದಲ್ಪಾಡಿ, ಅಲ್ಪ ಸಂಖ್ಯಾಕ ಜಿಲ್ಲಾ ಅಧ್ಯಕ್ಷ ಜಾಯ್ಲೆಸ್ ಡಿ’ಸೋಜಾ, ಕ್ಷೇತ್ರಾಧ್ಯಕ್ಷ ಅಶ್ರಫ್ ಹರೇಕಳ, ಜಿಲ್ಲಾ ಉಪಾಧ್ಯಕ್ಷ ಉಸ್ಮಾನ್ ಬಂಟ್ವಾಳ, ಪ್ರ.ಕಾರ್ಯದರ್ಶಿಗಳಾದ ಮುನೀರ್ ಬಾವಾ, ಅಝೀಝ್ ಫ್ಯಾನ್ಸಿ, ಮುಖಂಡರಾದ ಸಂಜೀವ ಶೆಟ್ಟಿ ಅಂಬ್ಲಿಮೊಗರು, ಬಾಬು ಬಂಗೇರ, ಲಲಿತಾಸುಂದರ್, ಯಶವಂತ ಅಮೀನ್, ಮಹಾಲಕ್ಷ್ಮೀ, ಭಗವಾನ್ ದಾಸ್, ನಿತಿನ್ ಗಟ್ಟಿ ಕುರ್ನಾಡು, ಜಗದೀಶ್ ಆಲ್ವ ಕುವೆತ್ತಬೈಲು, ರಾಜೇಶ್ ಶೆಟ್ಟಿ ಪಜೀರು ರಮಣಿ ಸೋಮೇಶ್ವರ, ಮೋಹನ್ ರಾಜ್ ಕನೀರ್ ತೋಟ, ಮಹಮ್ಮದ್ ಅಸ್ಗರ್, ಸಚಿನ್ ಶೆಟ್ಟಿ ಸಾಂತ್ಯ, ಸುರೇಶ್ ಆಳ್ವ, ಇಸ್ಮಾಯಿಲ್ ಪೂಮಣ್ಣು, ಫಾರೂಕ್ ತಲಪಾಡಿ, ಪೊಡಿಮೋನು, ಆನಂದ ಶೆಟ್ಟಿ, ನಮಿತಾ ಶ್ಯಾಂ, ಮುನೀರ್ ಮಾಸ್ಟರ್, ಗೀತಾ ಬಾೖ, ಜೀವನ್ ತೊಕ್ಕೊಟ್ಟು, ಜಯಶ್ರೀ ಕರ್ಕೇರ, ಗೋಪಿನಾಥ್ ಬಗಂಬಿಲ, ಹರೀಶ್ ಅಂಬ್ಲಿಮೊಗರು ಅಜಿತ್ ತೊಕ್ಕೊಟ್ಟು, ಪ್ರಕಾಶ್ ಸಿಂಪೋನಿ, ಫಝಲ್ ಅಸೈಗೋಳಿ ಉಪಸ್ಥಿತರಿದ್ದರು.ಕ್ಷೇತ್ರ ಪ್ರ. ಕಾರ್ಯದರ್ಶಿ ಮೋಹನ್ ರಾಜ್ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.