ಮನೆಯೊಳಗೇ ಜಿಹಾದಿ ಶಕ್ತಿಗಳನ್ನು ಕಂಡು ಕೈ ನಾಯಕರು ಮೂಕಪ್ರೇಕ್ಷಕರಾಗಿದ್ದಾರೆ: ಡಾ.ಭರತ್ ಶೆಟ್ಟಿ
ಕಾಂಗ್ರೆಸ್ ತನ್ನ ನಿಲುವೇನು ಎಂಬುದನ್ನು ಜನತೆಯ ಮುಂದೆ ಸ್ಪಷ್ಟ ಪಡಿಸಬೇಕಿದೆ
Team Udayavani, Jan 6, 2023, 9:35 PM IST
ಮಂಗಳೂರು: ಸದಾ ಹಿಂದುತ್ವನ್ನು ದೂಷಿತ್ತಾ ಬಂದಿರುವ ಕಾಂಗ್ರೆಸ್ ನಾಯಕರು, ಇದೀಗ ಜಿಹಾದಿಗಳಾಗಿ ಬದಲಾಗಿರುವ ಕಾಂಗ್ರೆಸ್ ನಾಯಕರ ಮಕ್ಕಳೇ ಜೈಲು ಪಾಲಾಗುತ್ತಿದ್ದರೂ,ಖಂಡಿಸದೆ ಕಣ್ಮುಚ್ಚಿ ಕುಳಿತಿರುವುದು ಅದರ ಹಿಂದೂ ವಿರೋದಿ ಅಜೆಂಡಾ ಬಯಲಿಗೆ ಬಂದಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಕ್ಜರ್ ಬಾಂಬ್ ಸ್ಫೋಟದ ಬಗ್ಗೆ ಕಪೋಲಕಲ್ಪಿತವಾಗಿ ಬಿಜೆಪಿಯನ್ನು ದೂಷಿಸಿದ ಕಾಂಗ್ರೆಸ್ ನಾಯಕರು ಪಕ್ಷದ ನಾಯಕರ ಮಕ್ಕಳೇ ಜೆಹಾದಿ ಚಟುವಟಿಕೆಗಳನ್ನು ಮಾಡಿ ಸಿಕ್ಕಿಬಿದ್ದರೂ ಇದುವರೆಗೂ ಖಂಡಿಸಿಲ್ಲ.ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ಹಿಂದುತ್ವದ ಪರವಾಗಿ ನಿಂತಿರುವ ಬಿಜೆಪಿ ಪಕ್ಷವನ್ನು ಪದೇ ಪದೇ ಕೋಮುವಾದಿ ಎಂದು ದೂಷಿಸುವ ಮೂಲಕ ಹಿಂದೂ ಸಮಾಜಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರ ಮನೆಯೊಳಗೆ ದೇಶ ವಿರೋಧಿ ಶಕ್ತಿಗಳು ಇರುವುದು ತಿಳಿದರೂ ದೂಷಿಸುವ ಧೈರ್ಯವಿಲ್ಲ.ಹಿಂದೂ ಸಂಸ್ಕೃತಿ ಆಚಾರ ವಿಚಾರ, ಹಿಂದೂ ಸಮುದಾಯದ ಒಳಿತಿಗಾಗಿ ಬಿಜೆಪಿ ಸದಾ ಕೆಲಸ ಮಾಡುತ್ತಾ ಬಂದಿದೆ.ಇದಕ್ಕಾಗಿ ನಮಗೆ ಹೆಮ್ನೆಯಿದೆ.ಆದರೆ ಕಾಂಗ್ರೆಸ್ ವೋಟ್ ಬ್ಯಾಂಕ್ ಗಾಗಿ ಒಂದು ಸಮುದಾಯವನ್ನು ತುಷ್ಟಿಕರಣ ಮಾಡುತ್ತಾ ಬಂದ ಪರಿಣಾಮ ಕಾಂಗ್ರೆಸ್ ಮುಖಂಡರ ಪುತ್ರನೊಬ್ಬ ದೇಶದ ವಿರುದ್ಧ ಕೆಲಸ ಮಾಡಿದ ಆಪಾದನೆಗೆ ಒಳಗಾಗಿ ಜೈಲು ಸೇರುವಂತಾಗಿದೆ . ಜಿಹಾದಿ ಉಗ್ರವಾದ ಬಗ್ಗೆ ಕಾಂಗ್ರೆಸ್ ತನ್ನ ನಿಲುವೇನು ಎಂಬುದನ್ನು ಜನತೆಯ ಮುಂದೆ ಸ್ಪಷ್ಟ ಪಡಿಸಬೇಕಿದೆ ಎಂದು ಡಾ.ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.