ಕಾಂಗ್ರೆಸ್ ಜನರ ಮನ್ ಕೀ ಬಾತ್ ಆಲಿಸಿ ಸಮಸ್ಯೆ ಪರಿಹರಿಸುತ್ತಿದೆ: ರೈ
Team Udayavani, Apr 11, 2018, 9:17 AM IST
ಮಂಗಳೂರು: ಜನರ ಮತೀಯ ಭಾವನೆ ಕೆರಳಿಸಿ ಮತ ಪಡೆಯುವುದೇ ಬಿಜೆಪಿಯ ಚುನಾವಣಾ ಅಸ್ತ್ರ. ಆದರೆ ಕಾಂಗ್ರೆಸ್ ಜನರ ಮನ್ ಕೀ ಬಾತ್ ಆಲಿಸಿ ಅದನ್ನು ಪರಿಹರಿಸುವ ಕಾರ್ಯ ಮಾಡುತ್ತಿದೆ. ಹೀಗಾಗಿ ಈ ಬಾರಿ ಜಿಲ್ಲೆಯ 8 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲಿದೆ ಎಂದು ಸಚಿವ ಬಿ. ರಮಾನಾಥ ರೈ ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ತಮ್ಮ ತಮ್ಮ ಕ್ಷೇತ್ರ ಗಳಲ್ಲಿ ನಡೆಸಿರುವ ಅಭಿವೃದ್ಧಿ ಕಾರ್ಯಗಳೇ ಪಕ್ಷಕ್ಕೆ ಶ್ರೀರಕ್ಷೆ ಯಾಗಲಿವೆ ಎಂದರು.
ಕಪ್ಪು ಹಣ – ಈಗೇಕೆ ಮೌನ?
ಕೇಂದ್ರ ಸರಕಾರ ತಾನು ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಹೇಳಿದ ಎಲ್ಲ ಮಾತುಗಳಿಗೂ ಈ ಯೂಟರ್ನ್ ಹೊಡೆದಿದೆ. ಇಂಧನದ ಬೆಲೆ ಬ್ಯಾರಲ್‌ಗೆ 40 ಡಾಲರ್‌ಗೆ ಇಳಿದರೂ ಪೆಟ್ರೋಲ್-ಡೀಸೆಲ್ ದರ ಗಗನ ಕ್ಕೇರಿದೆ. ಅಡುಗೆ ಅನಿಲ ದರ ದುಪ್ಪಟ್ಟಾಗಿದೆ. ಕಪ್ಪು ಹಣ ತರುವುದಾಗಿ ಹೇಳಿ ದವರು ಈಗ ಆ ಕುರಿತು ಮಾತನಾಡುತ್ತಿಲ್ಲ ಎಂದು ರೈ ಆರೋಪಿಸಿದರು.
ರಾಜ್ಯ ಸರಕಾರ ಅನ್ನಭಾಗ್ಯ, ಕ್ಷೀರಭಾಗ್ಯ, ಸಾಲಮನ್ನಾ ದಂಥ ಯೋಜನೆ ನೀಡಿದೆ. ಆದರೆ ಕೇಂದ್ರ ಕೈಗಾರಿಕೋದ್ಯಮಿಗಳ ಸಾಲಮನ್ನಾ ಮಾಡುತ್ತಿದೆ. ಸಿಬಿಎಸ್‌ಇ ಪ್ರಶ್ನೆಪತ್ರಿಕೆ, ಫೇಸ್ ಬುಕ್ ವಿವರ, ಆಧಾರ್, ಚುನಾವಣೆ ದಿನಾಂಕ ಸೋರಿಕೆ ಕೇಂದ್ರದ ಸಾಧನೆ. ನೋಟು ರದ್ದತಿ ವಿಚಾರವೂ ಬಹಿರಂಗ ವಾಗಿತ್ತು ಎಂದು ನಮ್ಮ ಗಮನಕ್ಕೆ ಬಂದಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್‌ಕುಮಾರ್; ಧನಂಜಯ ಅಡ³ಂಗಾಯ, ಡಿ.ಎಸ್. ಮಮತಾ ಗಟ್ಟಿ, ಎಂ. ಶಶಿಧರ ಹೆಗ್ಡೆ, ದೀಪಕ್ ಪೂಜಾರಿ, ರಾಜಶೇಖರ್ ನಾಯಕ್, ಪದ್ಮನಾಭ ನರಿಂಗಾನ, ಸಂತೋಷ್‌ಕುಮಾರ್, ವಿಶ್ವಾಸ್‌ಕುಮಾರ್‌ದಾಸ್, ನವೀನ್ ಡಿ’ಸೋಜಾ, ನಝೀರ್ ಬಜಾಲ್ ಉಪಸ್ಥಿತರಿದ್ದರು.
ಅಸ್ತಿತ್ವವನ್ನು ಪ್ರಶ್ನಿಸಿದ್ದಾರೆ
ಕಲ್ಲಡ್ಕ ಡಾ| ಪ್ರಭಾಕರ ಭಟ್ ಅವರು ದೈವಾ ರಾಧನೆಯ ಕುರಿತು ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ. ಓಟಿಗಾಗಿ ಪ್ರಚೋದನಕಾರಿಯಾಗಿ ಮಾತ ನಾಡು ತ್ತಿದ್ದಾರೆ ಎಂದು ರೈ ಆರೋಪಿಸಿದರು.
ಬಿಜೆಪಿಯ ಟಿಕೆಟ್ ಆಯ್ಕೆಯಲ್ಲಿ ಅತೃಪ್ತ ಕಾರ್ಯ ಕರ್ತರು ನಮ್ಮ ಸಂಪರ್ಕ ದಲ್ಲಿದ್ದಾರೆ. ತಾನು ನಿರಂತರ ವಾಗಿ ಜನ ಸಂಪರ್ಕ ಇಟ್ಟುಕೊಂಡವನು. ಈ ಕುರಿತು ನನಗೆ ತೃಪ್ತಿ ಇದೆ ಎಂದು ಸಚಿವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.