ಕೇಂದ್ರ ಸರಕಾರಕ್ಕೆ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲ: ಲೋಬೋ
Team Udayavani, Nov 3, 2018, 9:52 AM IST
ಮಹಾನಗರ: ಸಿಬಿಐ ಮೇಲೆ ಕೇಂದ್ರ ಸರಕಾರ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಮಂಗಳೂರು ದಕ್ಷಿಣ ಹಾಗೂ ಉತ್ತರ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಾಜಿ ಶಾಸಕ ಜೆ.ಆರ್. ಲೋಬೋ ಮಾತನಾಡಿ, ಕೇಂದ್ರ ಸರಕಾರಕ್ಕೆ ದೇಶದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲ ಎಂಬುದಕ್ಕೆ ಹಲವು ನಿದರ್ಶನಗಳು ಕಾಣಸಿಗುತ್ತಿವೆ. ಪ್ರಧಾನಿ ಮೋದಿ ನಿರಂತರವಾಗಿ ಸಿಬಿಐ, ಚುನಾವಣ ಆಯೋಗದ ಮೇಲೆ ತನ್ನ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ. ರಫೇಲ್ ಹಗರಣದ ಬಗ್ಗೆ ಸಿಬಿಐ ಹೆಚ್ಚು ಆಸಕ್ತಿ ವಹಿಸಿ ತನಿಖೆ ನಡೆಸಲಾರಂಭಿಸಿದಂತೆ ತಮ್ಮ ಬಂಡವಾಳ ಬಯಲಾಗುವ ಭಯದಿಂದ ಸಿಬಿಐ ನಿರ್ದೇಶಕ ಆಲೋಕ್ ವರ್ಮಾ ಅವರನ್ನು ಅವರ ಸ್ಥಾನದಿಂದ ತೆರವುಗೊಳಿಸಲಾಯಿತು. ಬದಲಿಗೆ ಅವರಿಗೆ ಬೇಕಾದ ವ್ಯಕ್ತಿಗಳನ್ನು ನಿರ್ದೇಶಕರಾಗಿ ನೇಮಕ ಮಾಡಿದ್ದಾರೆ. ಬಿಜೆಪಿಯು ಸಿಬಿಐ ಮೇಲೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದರು.
ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಇಬ್ರಾಹಿಂ ಕೋಡಿಜಾಲ್, ಮಹಮ್ಮದ್ ಮೋನು, ಮಹಾಬಲ ಮಾರ್ಲ, ಸುರೇಶ್ ಬಲ್ಲಾಳ್, ಎಂ.ಎಸ್. ಮಹಮ್ಮದ್, ಕಾರ್ಪೊರೇಟರ್ ಎ.ಸಿ. ವಿನಯ್‌ರಾಜ್, ಕಳ್ಳಿಗೆ ತಾರಾನಾಥ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಮಮತಾ ಗಟ್ಟಿ, ಮರಿಯಮ್ಮ ಥೋಮಸ್, ವಿಶ್ವಾಸ್ ದಾಸ್, ಅಬ್ದುಲ್ ಸಲೀಂ, ಪ್ರವೀಳಾ ಆಳ್ವ, ಮೇರಿಲ್ ರೇಗೋ, ನೀರಜ್ ಪಾಲ್, ಖಲೀದ್ ಉಜಿರೆ, ನಮಿತಾ ರಾವ್, ಲ್ಯಾನ್ಸಿ ಲಾಟ್ ಪಿಂಟೋ, ರಾಧಾಕೃಷ್ಣ, ಅಪ್ಪಿ, ರಮಾನಂದ ಪೂಜಾರಿ, ಬಿ.ಎಂ. ಭರತ್, ಪ್ರಕಾಶ್ ಸಾಲ್ಯಾನ್, ಜೆಸಿಂತಾ ಆಲ್ಫ್ರೆಡ್ ಡಿ’ಸೋಜಾ, ಪದ್ಮನಾಭ ನರಿಂಗಾನ, ಪ್ರೇಮ್ ಬಲ್ಲಾಳ್‌ಬಾಗ್, ಸುರೇಶ್ ಶೆಟ್ಟಿ,ಅಬ್ದುಲ್ ರವೂಫ್ ಉಪಸ್ಥಿತರಿದ್ದರು.
ಜನವಿರೋಧಿ ಕೇಂದ್ರ ಸರಕಾರ
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಮೋದಿ ನೇತೃತ್ವದ ಕೇಂದ್ರ ಸರಕಾರ ರೈತರಿಗೆ ಸಾಲ ನೀಡುವ ಬದಲಾಗಿ ಉದ್ಯಮಿಗಳಿಗೆ ನೆರವು ನೀಡುವ ಕೆಲಸ ಮಾಡುತ್ತಿದೆ ನೀರವ್ ಮೋದಿ, ಮೆಹುಲ್ ಚೋಕ್ಸಿ, ವಿಜಯ್ ಮಲ್ಯರಂತಹ ಉದ್ಯಮಿಗಳು ದೇಶಕ್ಕೆ ಕೋಟ್ಯಂತರ ರೂ. ವಂಚಿಸಿದರೂ ಇವರಿಗೆ ಚಿಂತೆ ಇಲ್ಲ. ಕೇಂದ್ರ ಸರಕಾರ ಬಡ ಸಾಮಾನ್ಯ ಜನರ ಮೇಲೆ ಹೊರೆ ಹಾಕುವ ಯೋಜನೆಗಳನ್ನು ಮಾಡುತ್ತಿದ್ದಾರೆ. ಉದ್ಯಮಿಗಳನ್ನು ಓಲೈಕೆ ಮಾಡುವ ಭರದಲ್ಲಿ ಕೇಂದ್ರ ಸರಕಾರ ಜನಸಾಮಾನ್ಯರ ಜೀವ ಹಿಂಡುತ್ತಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.