ಗುತ್ತಿಗಾರು ಮಾದರಿ ಹಿ.ಪ್ರಾ. ಶಾಲೆಯಲ್ಲಿಲ್ಲ ಸುಸಜ್ಜಿತ ಶೌಚಾಲಯ
Team Udayavani, Jun 9, 2019, 6:10 AM IST
ಗುತ್ತಿಗಾರು: ಎಲ್ಲೆಡೆ ಸ್ವಚ್ಛತೆಗೆ ಆದ್ಯತೆ ನೀಡುತ್ತಾ ಹೊಸ ಶೌಚಾಲಯಗಳ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುತ್ತಿದ್ದರೂ ಇಲ್ಲಿನ ಶಾಲೆಯಲ್ಲಿ ಹೊಸ ಶೌಚಾಲಯದ ರಚನೆ ಕಡತದಲ್ಲಿಯೇ ಬಾಕಿಯಾಗಿದೆ. ತಾಲೂಕಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಗುತ್ತಿಗಾರಿನ ಸರಕಾರಿ ಮಾದರಿ ಹಿ.ಪ್ರಾ. ಶಾಲೆಯಲ್ಲಿ ಸರಿಯಾದ ಶೌಚಾಲಯ ವ್ಯವಸ್ಥೆಯಿಲ್ಲದೆ ಮಕ್ಕಳು ಬವಣೆಪಡುತ್ತಿದ್ದಾರೆ.
ಶತಮಾನ ಕಂಡ ಗುತ್ತಿಗಾರಿನ ಈ ಶಾಲೆಯಲ್ಲಿ 2019-20ನೇ ಸಾಲಿನಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದಾರೆ. ಆದರೆ ಇಷ್ಟು ಮಕ್ಕಳಿಗೆ ಬಹುಮುಖ್ಯವಾಗಿ ಬೇಕಾಗಿರುವ ಶೌಚಾಲಯದ ಸೌಲಭ್ಯ ಇಲ್ಲಿಲ್ಲ. ಇರುವ ಮುರುಕಲು ಶೌಚಾಲಯದ ಪೈಪ್ ಹಾಗೂ ಗುಂಡಿ ಬ್ಲಾಕ್ ಆಗಿದೆ. ಸರಿಯಾಗಿ ನೀರು ಹರಿಯದೇ ಮೂಗು ಮುಚ್ಚಿಕೊಂಡೇ ಮಕ್ಕಳು ದೇಹಬಾಧೆ ತೀರಿಸಿಕೊಳ್ಳುತ್ತಿದ್ದಾರೆ.
ಹೆಣ್ಮಕ್ಕಳಿಗೆ ಹೆಚ್ಚಿನ ಸಮಸ್ಯೆ
ಬಹುತೇಕ ಹೆಣ್ಣು ಮಕ್ಕಳೇ ಇರುವ ಈ ಶಾಲೆಯಲ್ಲಿ ಅಗತ್ಯ ಮೂಲಸೌಕರ್ಯ ಇಲ್ಲ. ಹೆಣ್ಣು ಮಕ್ಕಳಿಗೆ ಬಹಳ ತೊಂದರೆಯಾಗುತ್ತಿದೆ. ಇಲ್ಲಿ ಕೆ.ಜಿ. ತರಗತಿ ಮಕ್ಕಳೂ ಸಮಸ್ಯೆಗೆ ಒಳಗಾಗಿದ್ದಾರೆ. ಸಮಸ್ಯೆಯ ತಾತ್ಕಾಲಿಕ ಪರಿಹಾರಕ್ಕಾಗಿ ಶಿಕ್ಷಕರಿಗೆ ಮೀಸಲಾಗಿಟ್ಟಿರುವ ಎರಡು ಪ್ರತ್ಯೇಕ ಶೌಚಾಲಯಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಅನುದಾನ ಕಡತದಲ್ಲೇ ಬಾಕಿ
ಸುಸಜ್ಜಿತ ಶೌಚಾಲಯ ನಿರ್ಮಾಣಕ್ಕಾಗಿ ಗುತ್ತಿಗಾರು ಗ್ರಾ.ಪಂ. 2 ಲಕ್ಷ ರೂ. ಅನುದಾನವನ್ನು ಮೀಸಲಿಟ್ಟಿದ್ದರೂ ಅದು ಕಡತದಲ್ಲಿಯೇ ಬಾಕಿಯಾಗಿದೆ. ಶೌಚಾಲಯ ನಿರ್ಮಾಣಕ್ಕಾಗಿ ಜಿ.ಪಂ. ಉಪವಿಭಾಗದ ಎಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ ಅಂದಾಜು ಪಟ್ಟಿ, ಕಾಮಗಾರಿ ತಾಂತ್ರಿಕ ಮಂಜೂರಾತಿ ಮೊದಲಾದ ಪ್ರಕ್ರಿಯೆಗಳು ನಡೆಯದೇ ಕಾಮಗಾರಿ ನನೆಗುದಿಗೆ ಬಿದ್ದಿದೆ.
ಗುತ್ತಿಗೆದಾರರೂ ಸಿಗುತ್ತಿಲ್ಲ
ಕಾಮಗಾರಿ ಪ್ರಾರಂಭಿಸಲು ಗುತ್ತಿಗೆದಾರರೂ ಸಿಗುತ್ತಿಲ್ಲ ಎಂದೂ ಹೇಳಲಾಗುತ್ತಿದೆ. ಹೊರನೋಟಕ್ಕೆ ಶಾಲೆ ಸುಣ್ಣ-ಬಣ್ಣ ಬಳಿದು ಸಿಂಗಾರಗೊಂಡಿದ್ದರೂ ಒಳಗಿನ ಅವ್ಯವಸ್ಥೆ ಮಾರಕವಾಗಿದೆ.
– ಕೃಷ್ಣಪ್ರಸಾದ್ ಕೋಲ್ಚಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್ ಕಾಳಿಂಗ’:ಅಧಿಕೃತವಾಗಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.