Ullal ಗುತ್ತಿಗೆದಾರನ ದರೋಡೆಗೆ ವಿಫಲ ಯತ್ನ; ಆರೋಪಿ ಸೆರೆ
ಇನ್ನಿಬ್ಬರಿಗೆ ಮುಂದುವರಿದ ಶೋಧ
Team Udayavani, Oct 21, 2023, 10:03 PM IST
ಉಳ್ಳಾಲ:ಚೂರಿಯಿಂದ ಇರಿದು ಗುತ್ತಿಗೆದಾರನ ದರೋಡೆ ನಡೆಸಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ಬಕ್ಕ ವೃತ್ತದ ಬಳಿ ನಡೆದಿದ್ದು, ಘಟನೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಉಳ್ಳಾಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ಇನ್ನಿಬ್ಬರಿಗೆ ಶೋಧ ಕಾರ್ಯ ಮುಂದುವರೆದಿದೆ.
ಉಳ್ಳಾಲ ದರ್ಗಾದಲ್ಲಿ ನಮಾಝ್ ಮುಗಿಸಿ ಸ್ವಿಫ್ಟ್ ಕಾರಲ್ಲಿ ತೆರಳುತ್ತಿದ್ದಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಶಮೀರ್(33) ಚೂರಿ ಇರಿತಕ್ಕೀಡಾದ ವ್ಯಕ್ತಿ.
ಘಟನೆಗೆ ಸಂಬಂಧಿಸಿದಂತೆ ರೌಡಿಶೀಟರ್ ಉಳ್ಳಾಲ ಸುಂದರಿ ಭಾಗ್ ನಿವಾಸಿ ಹಸೈನಾರ್‌ನನ್ನು ಉಳ್ಳಾಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಉಳ್ಳಾಲ ದರ್ಗಾದಲ್ಲಿ ನಮಾಝ್ ಮುಗಿಸಿ ವಾಪಾಸ್ಸಾಗುತ್ತಿದ್ದ ಶಮೀರ್‌ನಲ್ಲಿ ಕಟ್ಟಡವೊಂದರ ಗುತ್ತಿಗೆಯ ವಿಚಾರದಲ್ಲಿ ಆರೋಪಿ ಹಸೈನಾರ್ ಶಮೀರ್‌ನ ಕಾರಿನಲ್ಲಿ ಅಬ್ಬಕ್ಕ ಸರ್ಕಲ್‌ವರೆಗೆ ತೆರಳಿ ಆಲ್ಲಿ ತನ್ನಿಬ್ಬರು ಸಹಚರರಾದ ಉಮರ್ ನವಾಬ್ ಮತ್ತು ಅಕ್ಬರ್ ಉಳ್ಳಾಲ್ ಎಂಬಿಬ್ಬರು ಕಾರು ಹತ್ತಿಸಿದ್ದಾನೆ. ಉಳ್ಳಾಲದ ಬಸ್ತಿ ಪಡ್ಪುಎಂಬಲ್ಲಿ ಕಾರು ತಲುಪುತ್ತಿದ್ದಂತೆ ಶಮೀರ್ ಕಾಲಿಗೆ ಆರೋಪಿಗಳು ಚಾಕುವಿನಿಂದ ಇರಿದು ಹಲ್ಲೆಗೈದು ಹಣ ಸಿಗದಾಗ ಕಾರು,ಲ್ಯಾಪ್ ಟಾಪನ್ನು ದರೋಡೆಗೈದಿದ್ದಾರೆ.ರೌಡಿಗಳಿಂದ ತಪ್ಪಿಸಿದ ಶಮೀರ್ ಉಳ್ಳಾಲ ಠಾಣೆಗೆ ಬಂದು ದೂರು ನೀಡಿದ್ದಾರೆ.
ಎಸಿಪಿ ಧನ್ಯಾ ನಾಯಕ್ ನಿರ್ದೇಶನದಂತೆ ಉಳ್ಳಾಲ ಪೊಲೀಸ್ ಇನ್ಸ್ ಪೆಕ್ಟರ್ ಬಾಲಕೃಷ್ಣ ನೇತೃತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ರೌಡಿ ಹಸೈನಾರ್‌ನನ್ನು ವಶಕ್ಕೆ ತೆಗೆದುಕೊಂಡಿದ್ದು, ದರೋಡೆ ಮಾಡಿದ ಕಾರು,ಲ್ಯಾಪ್‌ಟಾಪ್,ಕೃತ್ಯಕ್ಕೆ ಬಳಸಲಾದ ಚೂರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ತಲೆಮರೆಸಿ ಕೊಂಡಿರುವ ರೌಡಿ ಶೀಟರ್ ಉಮರ್ ನವಾಬ್ ಮತ್ತು ಅಕ್ಬರ್ ಉಳ್ಳಾಲ್ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.