ವಿದೇಶಿ ವಿದ್ಯಾರ್ಥಿಗಳೊಂದಿಗೆ ಸಂವಾದ
Team Udayavani, Jan 8, 2018, 11:21 AM IST
ಹಳೆಯಂಗಡಿ: ಪಡು ಪಣಂಬೂರು ವ್ಯವಸಾಯಿಕ ಬ್ಯಾಂಕ್‌ನ ಶ್ರೀ ನಾರಾಯಣ ಸನಿಲ್ ಸಭಾಂಗಣದಲ್ಲಿ ದೇಶಿ ಮಹಿಳೆಯರ ಹಾಗೂ ವಿದೇಶಿ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅ ಧೀನದ ನವೋದಯ ಸ್ವ ಸಹಾಯ ಗುಂಪಿನ ಬಗ್ಗೆ ವಿಶೇಷವಾಗಿ ಅಧ್ಯಯನ ನಡೆಸಲು ಬಂದ ಅಮೇರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ತಮ್ಮ ಕುತೂಹಲವನ್ನು ಅಮೃತಬಿಂದು ನವೋದಯ ಸ್ವ ಸಹಾಯ ಸಂಘಗಳ ಒಕ್ಕೂಟದ ಮಹಿಳೆಯರೊಂದಿಗೆ ಮುಕ್ತವಾಗಿ ಮಾತುಕತೆ ನಡೆಸಿದರು. ಪಡುಪಣಂಬೂರು ವ್ಯವಸಾಯಿಕ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಮೊದಲಾದವರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ವಿದ್ಯಾರ್ಥಿನಿ ರೆಬೆಕೋ ನೆರೆದ ಮಹಿಳೆಯರಿಗೆ ತಮ್ಮ ದೇಶೀಯ ಭಾಷೆಯಲ್ಲಿ ನೃತ್ಯದ ಸಾಲೊಂದನ್ನು ಗುನುಗಿಸಿದರು. ಎಲ್ಲ ವಿದ್ಯಾರ್ಥಿಗಳು ಅಮೇರಿಕಾದ ವಿಶೇಷ ಗೀತೆ ಹಾಡಿದರೇ ಒಕ್ಕೂಟದ ಅಧ್ಯಕ್ಷೆ ಸುಲೋಚನಾ ಅವರು ತುಳು ಹಾಡೊಂದನ್ನು ಹಾಡಿ ಸಂಸ್ಕೃತಿಯನ್ನು ಅನಾವರಣಗೊಳಿಸಿದರು. ಮಕ್ಕಳ ಕೌಶಲ್ಯಕ್ಕೆ ವಿದೇಶಿ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ತನ್ವಿ ಎನ್. ಶೆಟ್ಟಿ, ನಿಕ್ಷಿತಾ ಸಿ., ಪಲ್ಲವಿ, ಗೌರಿ ಪಿ. ಶೆಟ್ಟಿ, ಜಾನ್ಹವಿ ಶೆಟ್ಟಿ, ಜಯರಾಂ ಪಿ.ಡಿ., ವಿಜ್ಞೇಶ್ ಜಿ. ಮಲ್ಯ, ಹರ್ಷಿತಾ, ವಿಜಯಾ ಕಿಣಿ, ಉಷಾ ಕೆರೆಕಾಡು ಸಹಕರಿಸಿದರು.
ಪೆನ್ಸಿಲ್ವೇನಿಯಾ ವಿ.ವಿ.ಯ ವಿದ್ಯಾರ್ಥಿಗಳಾದ ಅಲಿಸನ್, ನಿಕೋಲ್, ರೋನಿಕ, ಅಂಬೆರ್, ರೆಬೆಕ್ಕಾ, ಮಾರ್ಟಿಸ್,
ಜಾಕ್ವೆಲಿನ್ ಇವರಿಗೆ ಸುಲಭವಾಗಿ ಅರ್ಥೈಸಿಕೊಳ್ಳಲು ಏಳು ವರ್ಷಗಳಿಂದ ಸಮನ್ವಯಕಾರರಾಗಿರುವ ವಿನೋದ್
ದೀಕ್ಷಿತ್ ತುಳು ಹಾಗೂ ಕನ್ನಡವನ್ನು ತರ್ಜುಮೆಗೊಳಿಸಿ ಆಂಗ್ಲ ಭಾಷೆಯಲ್ಲಿ ಅಷ್ಟೇ ಸೊಗಸಾಗಿ ನಿರೂಪಿಸಿದ್ದರಿಂದ
ಅವರನ್ನು ಸಹ ವಿಶೇಷವಾಗಿ ಗೌರವಿಸಲಾಯಿತು.
ಮಕ್ಕಳಿಂದ ನೈಸರ್ಗಿಕ ದ್ರಾವಣದ ಪ್ರಾತ್ಯಕ್ಷಿಕೆ
ನಿಟ್ಟೆ ವಿದ್ಯಾ ಸಂಸ್ಥೆಯ ತೋಕೂರು ತಪೋವನದ ಡಾ| ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಇಂಟರ್ಯಾಕ್ಟ್ ವಿದ್ಯಾರ್ಥಿಗಳು, ರಾಸಾಯನಿಕ ವಸ್ತುಗಳ ರಹಿತವಾಗಿ ಹಣ್ಣುಗಳ ಸಿಪ್ಪೆಗಳಿಂದ ಮನೆಯಲ್ಲಿಯೇ ತಯಾರಿಸಬಹುದಾದ ನೈಸರ್ಗಿಕ ದ್ರಾವಣಗಳನ್ನು ಸ್ಥಳದಲ್ಲಿಯೇ ತಯಾರಿಸಿ ಅದರ ಬಗ್ಗೆ ವಿವರಣೆ ನೀಡಿದರು.
ನಾವು ಅಮೆರಿಕಕ್ಕೆ ಬರಬಹುದೇ..?
ನವೋದಯದ ಸದಸ್ಯೆಯಾಗಿರುವ ಹಿತಾಕ್ಷಿ ಅವರು ನೀವು ನಮ್ಮ ದೇಶಕ್ಕೆ ಬಂದಿದ್ದೀರಿ. ನಾವು ನಿಮ್ಮೊಂದಿಗೆ
ಅಮೆರಿಕಕ್ಕೆ ಬರಬಹುದೇ ಎಂದು ಆಂಗ್ಲ ಭಾಷೆಯಲ್ಲಿಯೇ ಕೇಳಿಕೊಂದರು. ಇದಕ್ಕೆ ಪ್ರೊ| ಫೆಮಿದಾ ಹಾಂಡಿ
ಪ್ರತಿಕ್ರಿಯಿಸಿ ಇನ್ನು ಮೂರು ವರ್ಷ ಕಷ್ಟವಿದೆ. ಅಮೆರಿಕದ ನೂತನ ಅಧ್ಯಕ್ಷರು ಕಡಿವಾಣ ಹಾಕಿದ್ದಾರೆ. ಅನಂತರ
ನಿಮ್ಮನ್ನು ನಾನೇ ಕರೆದುಕೊಂಡು ಹೋಗುತ್ತೇನೆ ಎಂದಾಗ ಸಭಾಂಗಣದಲ್ಲಿದ್ದ ಮಹಿಳೆಯರಿಂದ ಚಪ್ಪಾಳೆಯ ಸುರಿಮಳೆ ಸ್ವಾಗತ ದೊರೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pushpa 2: ಖಾಕಿಗೆ ಸವಾಲು ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.