ಕೂಳೂರು: ಸರ್ವಿಸ್ ರಸ್ತೆ ಹುಡುಕಿ ಕೊಡಿ!
Team Udayavani, Sep 26, 2017, 3:11 PM IST
ಕೂಳೂರು : ಮಂಗಳೂರು ಉಡುಪಿ ನಡುವಿನ ಸಂಪರ್ಕ ಕೊಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ 66 ಮಳೆಗಾಲದ ಆರಂಭದಲ್ಲೇ ಹೊಂಡ ಬಿದ್ದರೂ ಇದುವರೆಗೂ ದುರಸ್ತಿ ಆರಂಭವಾಗಿಲ್ಲ. ಇತ್ತ ಕೂಳೂರು ಕಾವೂರು ಸಂಪರ್ಕ ಕೊಂಡಿಯಂತಿರುವ ಸರ್ವಿಸ್ ರಸ್ತೆ ಸಂಪೂರ್ಣ ಮಾಯವಾಗಿದೆ.
ಡಾಮರು ಕಾಣದೆ ಮಣ್ಣಿನ ರಸ್ತೆಯಂತೆ ಭಾಸವಾಗುತ್ತಿದೆ. ರಸ್ತೆ ನಿರ್ವಹಣೆ ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಬೇಕಾಗಿರುವುದರಿಂದ ಹೆಜಮಾಡಿ ಬಳಿಕದ ರಾ.ಹೆ. ನಿರ್ವಹಣೆಗೂ ಇತ್ತ ಹೆದ್ದಾರಿ ಇಲಾಖೆ ನಿರ್ಮಿಸಿದ ರಸ್ತೆಗಳ ನಿರ್ವಹಣೆಗೂ ಅಜಗಜಾಂತರ ವ್ಯತ್ಯಾಸ ಎದ್ದು ಕಾಣುತ್ತಿದೆ.
ಕೂಳೂರು -ಕಾವೂರು ತಿರುವಲ್ಲೇ ಗುಂಡಿ!
ಈ ಹಿಂದೆ ಹೆದ್ದಾರಿಯಿಂದ ಕಾವೂರು ಕಡೆ ಹೋಗುವ ರಸ್ತೆಯನ್ನು ಕಾಂಕ್ರೀಟ್ ಹಾಕಲಾಗಿತ್ತು. ಆದರೆ ಒಳಚರಂಡಿ ಅವೈಜ್ಞಾನಿಕವಾಗಿ ನಿರ್ಮಿಸಿದ ಕಾರಣ ಈ ವೃತ್ತದಲ್ಲಿ ಮಳೆಗಾಲದಲ್ಲಿ ಕೆರೆಯೇ ನಿರ್ಮಾಣವಾಗುತ್ತಿತ್ತು. ಈ ಸಮಸ್ಯೆ ನಿವಾರಿಸಲು ಕಾಂಕ್ರೀಟ್ ಅಗೆದು ಗುಂಡಿ ತೋಡಲಾಗಿದ್ದು, ಒಂದು ವರ್ಷದಿಂದ ಇದುವರೆಗೂ ಸರಿಪಡಿಸಲಾಗಿಲ್ಲ. ಬೃಹತ್ ಗುಂಡಿಗೆ ಸುತ್ತಲೂ ಬ್ಯಾರಿಕೇಡ್ ಅಳವಡಿಸಲಾಗಿದ್ದು, ತಾತ್ಕಾಲಿಕ ದುರಸ್ತಿ ಇದೇ ಆಗಿದೆ!
ಕೂಳೂರು ಕಾವೂರು ವೃತ್ತ ಸುತ್ತಮುತ್ತ ಸರ್ವಿಸ್ ರಸ್ತೆಯ ಜಾಗವಿದ್ದು, ಕೇಂದ್ರದ ಆಡಳಿತಕ್ಕೊಳಪಟ್ಟ ಹೆದ್ದಾರಿ ಇಲಾಖೆಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ ಇದನ್ನು ದುರಸ್ತಿ ಪಡಿಸಲು ಮಹಾನಗರ ಪಾಲಿಕೆಗೆ ಯಾವುದೇ ಅಧಿಕಾರವಿಲ್ಲ. ಇದರ ದುರಸ್ತಿಗೆ ಹೆದ್ದಾರಿ ಇಲಾಖೆಯನ್ನೇ ಅವಲಂಬಿಸಬೇಕಾಗಿದೆ.
ಪರ್ಯಾಯ ಮಾರ್ಗವೂ ಇಲ್ಲ
ಕಾವೂರು, ಕೂಳೂರು ಮೂಲಕ ಕೊಟ್ಟಾರ ಚೌಕಿ ತಲುಪುವ ಸರ್ವಿಸ್ ರಸ್ತೆ ನೋಡಿದರೆ ಯಾವುದೋ ಕುಗ್ರಾಮದ ರಸ್ತೆಯಲ್ಲಿ ಬಸ್ಸುಗಳು ಸಂಚರಿಸುವಂತೆ ಭಾಸವಾಗುತ್ತದೆ. ನೃತ್ಯ ಮಾಡುತ್ತಾ ಬಸ್ಸುಗಳು ಸಂಚರಿಸಿದರೆ ದ್ವಿಚಕ್ರ ಸವಾರರು ಹೊಂಡ ತಪ್ಪಿಸಲು ಹರ ಸಾಹಸ ಪಡುತ್ತಾರೆ. ನಿತ್ಯ ಈ ರಸ್ತೆಯಲ್ಲಿ 40ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಸಂಚರಿಸಿದರೆ ಸಾವಿರಾರು ಖಾಸಗಿ ಬೈಕ್, ಕಾರುಗಳು ಸಂಚರಿಸುತ್ತವೆ. ಒಂದೆಡೆ ಮೇಲ್ಸೇತುವೆ ಇರುವುದರಿಂದ ಪರ್ಯಾಯ ಮಾರ್ಗದಲ್ಲೂ ಸಂಚಾರಕ್ಕೆ ಇಲ್ಲಿ ರಸ್ತೆಯಿಲ್ಲ.
10 ಲಕ್ಷ ರೂ. ನಷ್ಟ
ಕೂಳೂರು ಮಂಗಳೂರಿನಿಂದ ಕೆಲವೇ ಕಿ.ಮೀ.ಗಳ ಅಂತರದಲ್ಲಿದೆ. ವಿಮಾನ ನಿಲ್ದಾಣ ರಸ್ತೆಯೂ ಆಗಿದೆ. ಹೀಗಾಗಿ ಈ ಪ್ರಮುಖ ಭಾಗವನ್ನು ಹೆದ್ದಾರಿ ಇಲಾಖೆ ನಿರ್ಲಕ್ಷ್ಯ ಮಾಡಿದೆ. ಒಂದೆರಡು ವರ್ಷಗಳಿಂದ ಸರ್ವಿಸ್ ರಸ್ತೆಯನ್ನು ದುರಸ್ತಿ ಮಾಡದೆ ಡಾಮರನ್ನು ಹುಡುಕುವಂತಾಗಿದೆ. ಮಂಗಳೂರು ಪಾಲಿಕೆಗೆ ಕಾವೂರು ತಿರುವು ವೃತ್ತವನ್ನು ಬಿಟ್ಟು ಕೊಡಿ ನಾವು ದುರಸ್ತಿ ಮಾಡುತ್ತೇವೆ ಎಂದು ಹೇಳಿದರೂ ಬಿಟ್ಟು ಕೊಡುತ್ತಿಲ್ಲ. ಸಾರ್ವಜನಿಕರು ಪಾಲಿಕೆಗೆ, ಪಾಲಿಕೆ ಸದಸ್ಯರಿಗೆ ಹಿಡಿ ಶಾಪ ಹಾಕುವಂತೆ ಆಗಿದೆ. ಕೂಳೂರು ಚರ್ಚ್‌ನ ಕೆಳಭಾಗದಲ್ಲಿ ಅಯ್ಯಪ್ಪ ಗುಡಿ ಮುಂಭಾಗ ನಿರ್ಮಿಸಿದ ಒಳಚರಂಡಿ ವ್ಯವಸ್ಥೆಯೂ ವಿಫಲವಾಗಿ ಸುಮಾರು 10 ಲಕ್ಷ ರೂ. ನಷ್ಟವಾಗಿದೆ.
ದಯಾನಂದ ಶೆಟ್ಟಿ, ಪಾಲಿಕೆ ಸದಸ್ಯ,ಪಂಜಿಮೊಗರು-ಕೂಳೂರು ವಾರ್ಡ್
ಲಕ್ಷ್ಮೀನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.