ಸಹಕಾರಿ ಸಂಸ್ಥೆಗಳ ಬೆಳೆ ಸಾಲ ಮನ್ನಾ: ಗೊಂದಲದಲ್ಲಿ ರೈತರು
Team Udayavani, May 26, 2018, 5:05 AM IST
ಬಂಟ್ವಾಳ : ಸಹಕಾರಿ ಸಂಸ್ಥೆಗಳಿಂದ ರೈತರು ಬೆಳೆ ಉದ್ದೇಶಕ್ಕೆ ಪಡೆದ ಸಾಲವನ್ನು ಮರುಪಾವತಿಸುವಂತೆ ಸಹಕಾರಿ ಸಂಸ್ಥೆಗಳಿಂದ ರೈತರಿಗೆ ಸೂಚನ ಪತ್ರಗಳು ಬಂದಿವೆ. ಅದರಲ್ಲಿ 50 ಸಾವಿರ ರೂ. ಮನ್ನಾ ಆಗಿದೆ ಎಂದು ತಿಳಿಸಿದ್ದು, ಉಳಿದ ಸಾಲದ ಮೊತ್ತವನ್ನು ಪಾವಸಿತುವಂತೆ ಸೂಚಿಸಿದ್ದಾರೆ. ಹೊಸ ಸರಕಾರ ಆಡಳಿತಕ್ಕೆ ಬಂದಿರುವ ಈ ಸಂದರ್ಭದಲ್ಲಿ ಪೂರ್ಣ ಸಾಲ ಮನ್ನಾ ಘೋಷಣೆಯ ಹೊಸ್ತಿಲಲ್ಲಿ ಇಂತಹ ಪತ್ರಗಳಿಂದ ರೈತರು ಸಾಲ ಪಾವತಿ ಮಾಡಿ ಇರುವ ಸೌಲಭ್ಯ ಪಡೆಯುವುದೇ ಅಥವಾ ಮರುಪಾವತಿ ಮಾಡದೆ ಮುಂದಿನ ಬೆಳವಣಿಗೆಯನ್ನು ಕಾಯುವುದೇ ಎಂಬ ಗೊಂದಲ ವ್ಯಕ್ತವಾಗಿದೆ. ನೂತನ ಸರಕಾರ ಅಸ್ತಿತ್ವಕ್ಕೆ ಬರುತ್ತಿರುವ ಈ ಸಂದರ್ಭದಲ್ಲಿ ಪ್ರಸ್ತುತ ಇರುವ ಮನ್ನಾ ಅವಕಾಶ ಮುಂದಿನ ಘೋಷಿತ ಬೆಳೆ ಸಾಲ ಮನ್ನಾಗೂ ಅನ್ವಯಿಸುವುದೇ ಎಂಬುದಾಗಿ ಅನೇಕ ರೈತರು ಪ್ರಶ್ನಿಸಿದ್ದು, ಸಾಲ ಪಾವತಿ ಮಾಡಬೇಕೆ ಬೇಡವೆ ಎಂಬ ಗೊಂದಲ ಪರಿಹಾರ ಆದಂತೆ ಕಾಣುತ್ತಿಲ್ಲ.
ಸಹಕಾರಿ ಸಂಸ್ಥೆಗಳಲ್ಲಿ ಈ ಬಗ್ಗೆ ಪ್ರಶ್ನಿಸಿದರೆ, ನಮಗೂ ಹೆಚ್ಚಿನ ವಿಚಾರ ಗೊತ್ತಿಲ್ಲ ಎನ್ನುತ್ತಾರೆ. 2017 ಜೂನ್ 19ಕ್ಕೆ ಒಬ್ಬರು ರೈತ ಒಂದು ಲಕ್ಷ ಸಾಲ ಹೊಂದಿದ್ದರೆ. ಪ್ರಸ್ತುತ ಅವಧಿಯಲ್ಲಿ 50 ಸಾವಿರ ರೂ.ಗಳನ್ನು ಸಂಸ್ಥೆಗೆ ಪಾವತಿಸಿದರೆ, ಅವರಿಗೆ 50 ಸಾವಿರ ರೂ. ಮನ್ನಾ ಆಗುವುದು. ಜೊತೆಗೆ ಶೂನ್ಯ ಬಡ್ಡಿ ಸೌಲಭ್ಯವೂ ದೊರೆಯುವುದು ಎಂಬುದಾಗಿ ಇಲ್ಲಿ ವಿಷಯ ಪ್ರಸ್ತಾವ ಆಗಿದೆ.
ಸರಕಾರ ಹೊಸದಾಗಿ ಮನ್ನಾ ಘೋಷಿಸಿದರೆ ಪೂರ್ಣ ಮನ್ನಾ ಆಗುವುದೇ? ಸಾಲ ಮರುಪಾವತಿ ಮಾಡಿದ ರೈತನಿಗೆ ಉಳಿಕೆ 50 ಸಾವಿರ ರೂ. ಮನ್ನಾ ಸೌಲಭ್ಯವು ಪುನಃ ದೊರೆಯುವುದೇ ಎಂಬಿತ್ಯಾದಿ ಪ್ರಶ್ನೆಗಳು ರೈತರಲ್ಲಿವೆ. ಅನೇಕ ರೈತರು ಸಾಲ ಪಾವತಿ ಬಗ್ಗೆ ತಮ್ಮ ಗೊಂದಲಗಳನ್ನು ಹೇಳಿಕೊಂಡಿದ್ದು, ರಾಜಕೀಯ ಮುಖಂಡರ ಹೇಳಿಕೆಯಂತೆ ಸಾಲ ನವೀಕರಿಸಿದರೆ ಮನ್ನಾಕ್ಕೆ ಅರ್ಹರಾಗುವುದಿಲ್ಲ ಎಂಬ ಭಯ ಮೂಡಿದೆ. ಈ ಬಗ್ಗೆ ಸರಕಾರದಿಂದ ಸ್ಪಷ್ಟ ಮಾಹಿತಿ ಪ್ರಕಟಿಸಿದ್ದಲ್ಲಿ ರೈತರ ಸಂಕಷ್ಟಕ್ಕೆ ಪರಿಹಾರ ಸಿಗಬಹುದು.
ಹೊಸ ಪ್ರಸ್ತಾಪವಲ್ಲ
ಪ್ರಸ್ತುತ ಸಹಕಾರ ಸಂಸ್ಥೆಗಳು ನೀಡುವ 50 ಸಾವಿರ ರೂ. ಸಾಲಮನ್ನಾ ಹೊಸ ಸರಕಾರದ ಮನ್ನಾ ವಿಚಾರಕ್ಕೆ ಸಂಬಂಧಿಸಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ರೈತರ ಸಹಕಾರಿ ಬ್ಯಾಂಕ್‌ಗಳ 50 ಸಾವಿರ ರೂ. ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಅಧಿಕೃತ ಆದೇಶವನ್ನು ಅವರು ಅಧಿಕಾರದಲ್ಲಿ ಇರುವಾಗಲೇ ಹೊರಡಿಸಿದ್ದರು. ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಒಟ್ಟು 14 ಷರತ್ತುಗಳನ್ನು ವಿಧಿಸಿದ್ದರು. ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ, ಪಶು ಭಾಗ್ಯ ಸಾಲ, ಕೃಷಿಯೇತರ ಸಾಲಗಳು, ಮಧ್ಯಮಾವಧಿ, ದೀರ್ಘಾವಧಿ ಸಾಲಗಳು ಮನ್ನಾ ಇಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು. ಸುತ್ತೋಲೆಯ ಪ್ರಮುಖ ಷರತ್ತುಗಳಂತೆ 50 ಸಾವಿರ ರೂ.ಗಳಿಗಿಂತ ಹೆಚ್ಚು ಅಲ್ಪಾವಧಿ ಸಾಲ ಪಡೆದವರು 2018 ಜೂನ್ ಒಳಗೆ ಅಸಲು ಪಾವತಿಸಿದರೆ ಮಾತ್ರ 50 ಸಾವಿರ ರೂ. ಸಾಲ ಮನ್ನಾ ದೊರೆಯುವುದು.
ಅಲ್ಪಾವಧಿಯ ಸಾಲದಲ್ಲಿ ಸುಸ್ತಿ ಬಾಕಿ ಹೊಂದಿರುವ ರೈತರು 2017 ಡಿ. 31ರೊಳಗಾಗಿ ಮರುಪಾವತಿ ಮಾಡಿದರೆ ಮಾತ್ರ 50 ಸಾವಿರ ರೂ. ಸಾಲ ಮನ್ನಾ, ಅಸಲು ಮತ್ತು ಬಡ್ಡಿ ಸಹಿತ ಸಾಲ ಮನ್ನಾ, ಗಡುವಿನ ಬಳಿಕವಷ್ಟೇ ಸಾಲ ಮನ್ನಾ ಸೌಲಭ್ಯ ಪಡೆದವರಿಗೆ ಮತ್ತೆ ಸಾಲ ಕೊಡುವುದು ಎಂಬುದಾಗಿ ಸ್ಪಷ್ಟಪಡಿಸಿದೆ. ಒಂದಕ್ಕಿಂತ ಹೆಚ್ಚು ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದರೂ ಒಂದು ಕಡೆ ಮಾತ್ರ ಸಾಲ ಮನ್ನಾ ಸೌಲಭ್ಯ ಪಡೆಯಬಹುದು. ಸಾಲ ಪಡೆದ ರೈತ ಮೃತಪಟ್ಟಿದ್ದಲ್ಲಿ ವಾರಸುದಾರರು ಸಾಲ ಕಟ್ಟಿದರೆ ಮಾತ್ರ ಮನ್ನಾ ಎಂಬುದಾಗಿ ಸ್ಪಷ್ಟಪಡಿಸಿದೆ.
ಶೇ. 14 ಬಡ್ಡಿ
ಈ 50 ಸಾವಿರ ರೂ. ಮನ್ನಾ ಯಾವ ಸರಕಾರ ಮಾಡಿದ್ದು ಎಂಬುದು ಅನೇಕ ರೈತರಿಗೆ ಸ್ಪಷ್ಟವಿಲ್ಲ. ನಿರ್ದಿಷ್ಟ ಅವಧಿಯಲ್ಲಿ ಉಳಿಕೆ ಪಾವತಿ ಮಾಡದೆ ಅವಧಿ ಮೀರಿದ ಸಂದರ್ಭದಲ್ಲಿ ಸರಕಾರದಿಂದ ಸಿಗಬೇಕಾದ ಶೂನ್ಯ ಬಡ್ಡಿ ಸೌಲಭ್ಯವು ರೈತರಿಗೆ ಸಿಗುವುದಿಲ್ಲ. ಪ್ರತೀ ಸಾಲಕ್ಕೆ ಶೇ. 14ರಂತೆ ಬಡ್ಡಿ ಪಾವತಿಸಬೇಕಾಗುವುದು ಎಂಬ ಒಕ್ಕಣೆಯೂ ರೈತರಿಗೆ ಬಂದಿರುವ ಪತ್ರದಲ್ಲಿದೆ.
ಮರುಪಾವತಿ ವೇಳೆ ಸೌಲಭ್ಯ
ಕಳೆದ ವರ್ಷ 2017 ಜೂನ್ 19ರ ವರೆಗೆ ಯಾರೆಲ್ಲ ರೈತರು ಕೃಷಿ ಉದ್ದೇಶದ ಬೆಳೆ ಸಾಲವನ್ನು ಹೊಂದಿದ್ದರೋ ಅವರಿಗೆ ಪ್ರಸ್ತುತ ಅವಧಿಯಲ್ಲಿ ಸಾಲ ಮರುಪಾವತಿ ಸಂದಾಯದ ಸಂದರ್ಭ 50 ಸಾವಿರ ರೂ. ಮನ್ನಾ ಅವಕಾಶವಿದೆ. ರೈತರು ಪ್ರಸ್ತುತ ಅವಧಿಯಲ್ಲಿ 3 ಲಕ್ಷರೂ. ತನಕ ಬೆಳೆ ಸಾಲದ ಶೂನ್ಯಬಡ್ಡಿ ಸೌಕರ್ಯವನ್ನು ಪಡೆಯಲು ಅರ್ಹರಾಗುತ್ತಾರೆ.
– ಎ. ಜಯಶಂಕರ ಬಾಸ್ರಿತ್ತಾಯ, ಅಧ್ಯಕ್ಷರು, ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘ
— ರಾಜಾ ಬಂಟ್ವಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady: ತ್ಯಾಜ್ಯ ಸರಿಯಾಗಿ ವಿಂಗಡಿಸಿ ಕೊಡದಿದ್ದರೆ ಕ್ರಮಕ್ಕೆ ಸದಸ್ಯರ ಸಲಹೆ
Bantwal: ಪ್ರವಾಸಕ್ಕೆ ತೆರಳಿದ್ದ ಬಸ್ ಅಪಘಾತ; ಗಾಯಗೊಂಡಿದ್ದ ಮಹಿಳೆ ಮೃ*ತ್ಯು
Bantwal: ಅಭಿವೃದ್ಧಿ ಕಾರ್ಯಕ್ಕಿಂತಲೂ ಸಮಸ್ಯೆಗಳ ಸರಮಾಲೆ ಪ್ರಸ್ತಾವಿಸಿದ ಸಾರ್ವಜನಿಕರು
Puttur: ಮುಖ್ಯ ರಸ್ತೆಯ ಚರಂಡಿ ಮೇಲಿನ ಪೈಪ್‌ನಲ್ಲಿ ಸಿಲುಕಿದ ಮಹಿಳೆ!
Puttur: ಎಸೆಸೆಲ್ಸಿ ವಿದ್ಯಾರ್ಥಿನಿ ಆತ್ಮಹ*ತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.