ಆಪ್ತ ಸಲಹೆ ಎಲ್ಲರಿಗೂ ಅಗತ್ಯ: ವಿವೇಕ್ ಆಳ್ವ
Team Udayavani, Oct 11, 2017, 2:05 PM IST
ಮೂಡಬಿದಿರೆ: ಈಗಿನ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರಿಗೂ ಆಪ್ತಸಲಹೆ ಅಗತ್ಯವಿದ್ದು, ಈ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಆಳ್ವಾಸ್ ಕಾಲೇಜಿನ ಮನಃ ಶಾಸ್ತ್ರ ವಿಭಾಗ ಹಮ್ಮಿಕೊಂಡಿದ್ದ ವಸ್ತು
ಪ್ರದರ್ಶನ ಹಾಗೂ ಬಹುಮಾನ ವಿತರಣ ಸಮಾರಂಭದಲ್ಲಿ ಮಾತನಾಡಿದರು.
ಆಪ್ತ ಸಲಹಾ ಕೇಂದ್ರಗಳು ಜನರ ಸಮಸ್ಯೆಗಳನ್ನು ಆಲಿಸಿ, ಸಲಹೆ ನೀಡುವ ಕೆಲಸ ಮಾಡಬೇಕು. ಸೆಲ್ಫಿ, ಬ್ಲೂ ವೇಲ್
ಆಟಗಳ ದುಷ್ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದರು.
ಮಾನಸಿಕ ಸ್ವಾಸ್ಥ್ಯದ ಕುರಿತು ಅರಿವು ಮೂಡಿಸಲು ವಿಭಾಗವು ಮೈಮ್‌ಶೋ, ನೃತ್ಯ- ನಾಟಕ, ಚರ್ಚಾ ಸ್ಪರ್ಧೆ, ಪೋಸ್ಟರ್ ಮೇಕಿಂಗ್, ಸಾಮೂಹಿಕ ಗಾಯನ ಸ್ಪರ್ಧೆಗಳನ್ನು ಆಯೋಜಿಸಿತ್ತು. ಪ್ರಾಂಶುಪಾಲ ಡಾ| ಕುರಿಯನ್
ಅಧ್ಯಕ್ಷತೆ ವಹಿಸಿ ಮಾತನಾಡಿ, ಪರರು ನಮ್ಮ ಬಗ್ಗೆ ಏನೆಂದುಕೊಳ್ಳತ್ತಾರೆ ಎನ್ನುವುದರ ಬಗ್ಗೆ ಚಿಂತಿಸದೆ, ನಮ್ಮ ನಿರ್ಧಾರಗಳನ್ನು ನಾವೇ ತೆಗೆದುಕೊಂಡು, ನಮ್ಮನ್ನು ನಾವೇ ನಿಯಂತ್ರಿಸಿಕೊಳ್ಳಬೇಕು ಎಂದರು. ವಿಭಾಗದ ಮುಖ್ಯಸ್ಥೆ ದೀಪಾ ಕೊಠಾರಿ ಪ್ರಸ್ತಾವಿಸಿ, ಸೋನಿಯಾ ನಿರೂಪಿಸಿದರು.
ಫಲಿತಾಂಶ
ಡಿಬೇಟ್‌ನಲ್ಲಿ ಅಶ್ವಿನಿ ಜೈನ್ ಮತ್ತು ಆಶಿಫಾ ಮಡಿಕೇರಿ ಪ್ರಥಮ, ರಾಹುಲ್ ಮತ್ತು ಪ್ರಕಾಶ್ ದ್ವಿತೀಯ, ಪೋಸ್ಟರ್
ಮೇಕಿಂಗ್‌ನಲ್ಲಿ ದರ್ಶನ್ ಹಾಗೂ ಮನೋಜ್ ಪ್ರಥಮ, ನಮಿತಾ ಹಾಗೂ ಟೆಸ್ವಿನ್ ದ್ವಿತೀಯ, ಜಾಗೃತಿ ಗೀತೆಯಲ್ಲಿ
ಸುದರ್ಶನ ಹಾಗೂ ತಂಡ ಪ್ರಥಮ, ಸ್ತುತಿ ಹಾಗೂ ತಂಡ ದ್ವಿತೀಯ, ಡ್ಯಾನ್ಸ್ ಡ್ರಾಮದಲ್ಲಿ ಗ್ರೀಷ್ಮಾ ಹಾಗೂ ತಂಡ ಪ್ರಥಮ, ರೋಶನಿ ಹಾಗೂ ತಂಡ ಮತ್ತು ಅಶ್ರುತಾಹಾಗೂ ತಂಡ ದ್ವಿತೀಯ ಬಹುಮಾನ ಪಡೆಯಿತು. ಮೈಮ್ ಶೋನಲ್ಲಿ ರಾಕೇಶ್ ಹಾಗೂ ತಂಡ ಬಹುಮಾನ ಪಡೆಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.