ಕೋವಿಡ್ 19 ಕ್ವಾರಂಟೈನ್ ಮಾಹಿತಿಗೆ ಜಿಪಿಎಸ್ ಆಧಾರಿತ ಆ್ಯಪ್ ಅಭಿವೃದ್ಧಿ

ಬೆಳ್ತಂಗಡಿಯಲ್ಲಿ ದೇಶದಲ್ಲೆ ಮೊದಲ ಆ್ಯಪ್ ಬಿಡುಗಡೆಗೊಳಿಸಿದ ಶಾಸಕ ಹರೀಶ್ ಪೂಂಜ

Team Udayavani, Mar 30, 2020, 10:32 AM IST

ಕೋವಿಡ್ 19 ಕ್ವಾರಂಟೈನ್ ಮಾಹಿತಿಗೆ ಜಿಪಿಎಸ್ ಆಧಾರಿತ ಆ್ಯಪ್ ಅಭಿವೃದ್ಧಿ

ಬೆಳ್ತಂಗಡಿ: ಕೋವಿಡ್ 19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಕೇಂದ್ರ, ರಾಜ್ಯ ಸರಕಾರಗಳು ಆತಂಕಕ್ಕೆ ಒಳಗಾಗಿವೆ. ಈ ನಿಟ್ಡಿನಲ್ಲಿ ಸಾವಿರಾರು ಮಂದಿ ಹೋಮ್ ಕ್ವಾರಂಟೈನ್ ಅಂದರೆ ಮನೆಯಲ್ಲೇ ನಿಗಾ ವ್ಯವಸ್ಥೆ ಮೂಲಕ ಇದ್ದಾರೆ. ಆದರೆ ಇತ್ತೀಚಿನ ಕೆಲವು ದಿನಗಳಿಂದ ಹೀಗೆ ಹೋಮ್ ಕ್ವಾರಂಟೈನ್ ಆಗಿರುವ ಕೆಲವು ಮಂದಿ ಸ್ಟ್ಯಾಂಪ್ ಹಾಕಿದ್ದರೂ ಬೇಕಾಬಿಟ್ಟಿ ಓಡಾಟ ನಡೆಸುವ ಮೂಲಕ ಜನರಲ್ಲಿ ಆತಂಕ ಸೃಷ್ಟಿಸುತ್ತಿದ್ದಾರೆ.

ಇವರ ಮೇಲೆ ನಿಗಾ ವಹಿಸಲು ಸುಧಾರಿತ ಆ್ಯಪ್ ನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ರವಿವಾರ ಮಿನಿವಿಧಾನ ಸೌಧದಲ್ಲಿರುವ ವಾರ್ ರೂಮ್ ನಲ್ಲಿ ಬಿಡುಗಡೆ ಗೊಳಿಸಿದರು.

ಕ್ವಾರಂಟೈನ್ ಗಳನ್ನು ಮನೆಯಲ್ಲೇ ನಿಗಾ ಇರಿಸಲು ಕುಟುಂಬ, ಪೊಲೀಸರು, ಆಶಾ ಕಾರ್ಯಕರ್ತರು, ವೈದ್ಯರು ಹರಸಾಹಸ ಪಡುತ್ತಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕು ಆಡಳಿತ, ಶ್ರಮಿಕ ಬೆಳ್ತಂಗಡಿ ಶಾಸಕರ ಕಚೇರಿ ಹಾಗೂ ಐ-ಸರ್ಚ್ ಕಂಪೆನಿಯ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಜಿಪಿಎಸ್ ಆಧಾರಿತ ಆ್ಯಪ್ Covid 19 home quarantine beat tracker ಬಳಸಿ ನಿಗಾ ವಹಿಸುವ ಕಾರ್ಯಕ್ಕೆ ಮುಂದಾಗಿದೆ. ಇದು ತಾಲೂಕಿನಲ್ಲಿ ಮಾತ್ರವಲ್ಲದೆ ದೇಶದಲ್ಲೇ ಮೊದಲ ಪ್ರಯತ್ನ ಇದಾಗಿದೆ.

ಈಗಾಗಲೇ ಇದರ ಪೂರ್ವ ಸಿದ್ಧತೆ ಮುಗಿದಿದ್ದು ತಾಲೂಕಿನಲ್ಲಿ ಒಂದು ಕೋವಿಡ್- 19 ಪ್ರಕರಣ ಬೆಳಕಿಗೆ ಬಂದ ಬಳಿಕ ಹೋಮ್ ಕ್ವಾರಂಟೈನ್ ಆಗಿರುವವರ ಮೇಲೆ ನಿಗಾ ಇರಿಸಲು ಈ ವ್ಯವಸ್ಥೆ ನೆರವಾಗಲಿದೆ. ಜಿಪಿಎಸ್ ಆಧಾರಿತ ಆಪ್ ಮೂಲಕ ವಾರ್ ರೂಮಲ್ಲಿ ಕೂತು ಹೋಮ್ ಕ್ವಾರಂಟೈನ್ ಆಗಿರುವವರು ಎಲ್ಲಿದ್ದಾರೆ ಹೇಗಿದ್ದಾರೆ ಮತ್ತು ಅವರ ಭಾವಚಿತ್ರ ಸಹಿತ ಮಾಹಿತಿಯನ್ನು ಇದರಿಂದ ಪಡೆಯಬಹುದಾಗಿದೆ. ಸದ್ಯ ಇದನ್ನು ಬೆಳ್ತಂಗಡಿ ತಾಲೂಕಿನಲ್ಲಿ ಜಾರಿಗೆ ತರಲಾಗಿದ್ದು ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಜಾರಿಗೆ ತರಲು ಚಿಂತಿಸಲಾಗಿದೆ.

ಕೋವಿಡ್-19 ಕ್ವಾರಂಟೈನ್ ಟ್ರ್ಯಾಕರ್ ಆ್ಯಪ್
ಜಿಪಿಎಸ್ ಆಧಾರಿತ ಮೊಬೈಲ್ ಆ್ಯಪ್ ಆಗಿದ್ದು ತಾಲೂಕು ಆರೋಗ್ಯಧಿಕಾರಿ, ತಹಶೀಲ್ದಾರ್, ವೃತ್ತ ನಿರೀಕ್ಷಕರು ಇದರ ಮೇಲುಸ್ತುವಾರಿ ವಹಸಲಿದ್ದಾರೆ.

ಬೀಟ್ ಪೊಲೀಸ್ ಅವರ ಸ್ಮಾರ್ಟ್ ಫೋನ್ ಗಳಿಗೆ ಆ್ಯಪ್ ಅಳವಡಿಕೆ ಮಾಡಲಾಗುತ್ತದೆ. ಸ್ಥಳಕ್ಕೆ ಭೇಟಿ ನೀಡುವ ಬೀಟ್ ಪೊಲೀಸರು ಮನೆ ಮತ್ತು ಶಂಕಿತನ ಭಾವಚಿತ್ರ ಪಡೆದು ಅಪ್ ಡೇಟ್ ಮಾಡಬೇಕಿದೆ. ಆಕಾಸ್ ಮಾತ್ ಸ್ಥಳದಲ್ಲಿ ನೆಟ್ವರ್ಕ್ ಸಮಸ್ಯೆ ಇದ್ದಲ್ಲಿ ನೆಟ್ವರ್ಕ್ ಬಂದ ಬಳಿಕ ಅಪ್ಡೇಟ್ ಆಗಲಿದೆ.

ಇದರಿಂದ ಹೋಮ್ ಕ್ವಾರಂಟೈನ್ ಸಂಪೂರ್ಣ ಚಿತ್ರಣ ಲಭ್ಯವಾಗಲಿದ್ದು ಪ್ರತಿ ದಿನ ಪೊಲೀಸ್ ಭೇಟಿ ನೀಡಿರುವ ಕುರಿತು ಮಾಹಿತಿ ಲಭ್ಯವಾಗಲಿದೆ. ಕ್ವಾರಂಟೈನ್, ಪಾಸಿಟಿವ್, ನೆಗೆಟಿವ್, 14 ದಿನಗಳ ಬಳಿಕದ ವರದಿ ಮನೆಯಲ್ಲಿ ಇಲ್ಲದಿದ್ದರೆ, ಅವರೊಂದಿಗೆ ಜಾಸ್ತಿ ಜನ ಸಂಪರ್ಕದಲ್ಲಿದ್ದರೆ ಹೈ ಅಲರ್ಟ್ ಎಂದು ವರದಿ ನೀಡಿದರೆ ಮೇಲುಸ್ತುವಾರಿಗಳ ದೂರವಾಣಿ ಸಂಖ್ಯೆಗೆ ತಕ್ಷಣ ಸಂದೇಶ ರವಾನೆಯಾಗಲಿದೆ. ತಕ್ಷಣ ಜಾಗೃತರಾಗಬಹುದಾಗಿದೆ.

ಪಬ್ಲಿಕ್ ಗಳಿಗೆ ಅವರ ಏರಿಯಾದವರಲ್ಲಿ ಇದ್ದವರ ಮಾಹಿತಿಯೂ ಇದೇ ಆ್ಯಪ್ ನಿಂದ ಪಡೆಯಬಹುದು. ಒಟ್ಟು 81 ಗ್ರಾಮದ ಡೇಟಾ ಸಿಗಲಿದ್ದು, ಇದರಿಂದ ಸ್ಥಳೀಯರು ಸೋಂಕಿತನ ಮೇಲೆ ನಿಗಾದಲ್ಲಿರಿಸಬಹುದಾಗಿದೆ.
ಕಿಯೋನಿಕ್ಸ್ ನ ಆ್ಯಪ್ ಅಭಿವೃದ್ಧಿ ಸಂಯೋಜಕರಾದ ಅರವಿಂದ್ ಭಟ್ ಮತ್ತು ಬಾಲಕೃಷ್ಣ ಶೆಟ್ಟಿ ಹೊಸ ಆ್ಯಪ್ ಅಭಿವೃದ್ಧಿ ಪ್ರಡಿಸಿದ್ದಾರೆ.

ಕೋವಿಡ್ 19 ಗೃಹ ಪರಿವೀಕ್ಷಣಾ ( ಕ್ವಾರಂಟೈನ್ ) ಆಗಿರುವಂತವರ ವರದಿ ಪಡೆಯಬಹುದಾದ ಆ್ಯಪ್ ಲೋಕಾರ್ಪಣೆಗೊಂಡಿದೆ. ತಾಲೂಕಿನ 220 ಮಂದಿಯ ಮೇಲೆ ನಿಗಾ ಇಡಲು ಸಹಕಾರಿಯಾಗಲಿದೆ. ಇದು ದೇಶದಲ್ಲೆ ಮೊದಲಬಾರಿಗೆ ಪರಿಚಯಿಸಿದ್ದು. ದೇಶದೆಲ್ಲೆಡೆ ಈ ಆ್ಯಪ್ ಬಳಸುವ ಮೂಲಕ ಕೋವಿಡ್ 19 ಶಂಕಿತರ ಮೇಲೆ ನಿಗಾ ಇಟ್ಟು ಕೋವಿಡ್ 19 ಮುಕ್ತ ದೇಶವಾಗಿಸಲು ಸಹಕಾರಿಯಾಗಲಿದೆ.
– ಹರೀಶ್ ಪೂಂಜ, ಶಾಸಕ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.