ಕೋವಿಡ್‌ 19 ಆತಂಕ: ಲಾಕ್‌ಡೌನ್‌ ಅರಗಿಸಿಕೊಳ್ಳುತ್ತಿರುವ ಜನತೆ


Team Udayavani, Mar 28, 2020, 5:26 AM IST

ಕೋವಿಡ್‌ 19 ಆತಂಕ: ಲಾಕ್‌ಡೌನ್‌ ಅರಗಿಸಿಕೊಳ್ಳುತ್ತಿರುವ ಜನತೆ

ಮಂಗಳೂರು/ ಮಣಿಪಾಲ: ಕೋವಿಡ್‌ 19 ಆತಂಕದ ಹಿನ್ನೆಲೆಯಲ್ಲಿ ದೇಶದಲ್ಲಿ ಜಾರಿಯಾಗಿರುವ ಲಾಕ್‌ಡೌನ್‌ಗೆ ಈಗ ನಿಧಾನವಾಗಿ ಜನತೆ ಹೊಂದಿಕೊಳ್ಳುತ್ತಿದ್ದಾರೆ.

ಪುತ್ತೂರಿನಂತಹ ಕೆಲವೇ ಕಡೆಗಳಲ್ಲಿ ಮಾತ್ರ ಆದೇಶ ಉಲ್ಲಂ ಸಿ ಅನಗತ್ಯ ತಿರುಗಾಟ ನಡೆಸುತ್ತಿದ್ದವರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.

ಲಾಕ್‌ಡೌನ್‌ನ ಎರಡು ದಿನಗಳಲ್ಲಿ ಜನತೆ ಅದನ್ನು ಅರಗಿಸಿಕೊಳ್ಳಲು ಪ್ರಯಾಸ ಪಟ್ಟಿದ್ದರು. ಮನೆಯಿಂದ ಹೊರಬರಲು ಇರುವ ನಿರ್ಬಂಧಕ್ಕೆ ಸಾರ್ವಜನಿಕರು ಅಷ್ಟೊಂದು ಉತ್ತಮವಾಗಿ ಸ್ಪಂದಿಸಿರಲಿಲ್ಲ. ಈಗ ಲಾಕ್‌ಡೌನ್‌ ಆದ ಮೂರನೇ ದಿನ ಮಂಗಳೂರು ನಗರ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಬೆಳ್ಳಾರೆ, ಬಿ.ಸಿ. ರೋಡ್‌, ಕಲ್ಲಡ್ಕ ದಂತಹ ಪಟ್ಟಣಗಳಲ್ಲಿಯೂ ಜಿಲ್ಲೆಯ ಗ್ರಾಮಾಂತರ ಪ್ರದೇಶ, ಕಾಸರಗೋಡಿನಲ್ಲಿಯೂ ಸಾರ್ವಜನಿಕರು ಲಾಕ್‌ಡೌನ್‌ ಆದೇಶವನ್ನು ಮನ್ನಿಸಿ ಮನೆಯೊಳಗೆ ಇರುವುದು ಹೆಚ್ಚು ಕಂಡು ಬಂದಿದೆ. ಆವಶ್ಯಕ ವಸ್ತುಗಳನ್ನು ಕೊಳ್ಳಲು ಮೀಸಲಾಗಿದ್ದ ಸಮಯದಲ್ಲಿ ಪೇಟೆಯ ಕಡೆಗೆ ಬಂದವರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿರುವುದು ಗಮನಾರ್ಹ ವಾಗಿದೆ. ಜತೆಗೆ, ಮಾಸ್ಕ್ ಧರಿಸುವ ಮೂಲಕ ವೈಯಕ್ತಿಕ ಮುನ್ನೆಚ್ಚರಿಕೆಯನ್ನು ಪಾಲಿಸುವವರ ಸಂಖ್ಯೆಯೂ ಹೆಚ್ಚಿದೆ.

ಮಂಗಳೂರು ವರದಿ
ಕಳೆದ ಒಂದೆರಡು ದಿನಗಳಿಗೆ ಹೋಲಿಸಿದರೆ ಶುಕ್ರವಾರ ಮಂಗಳೂರು ನಗರದಲ್ಲಿ ಜನಸಂಚಾರ ವಿರಳವಾಗಿತ್ತು. ವಾಹನ ಸಂಚಾರವೂ ಕಡಿಮೆ ಇತ್ತು. ಬೆಳಗ್ಗೆ 10 ಗಂಟೆಯ ವರೆಗೆ ನಗರದಲ್ಲಿ ತುಸು ಜನ, ವಾಹನ ಸಂಚಾರ ಇತ್ತಾದರೂ ಬಳಿಕ ಕಡಿಮೆಯಾಗತೊಡಗಿತ್ತು. ಸಾರ್ವಜನಿಕರು ನಗರದ ವಿವಿಧ ಅಂಗಡಿಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕಾದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು. ಮಧ್ಯಾಹ್ನ 12 ಗಂಟೆಯ ಅನಂತರ ಎಲ್ಲಿಯೂ ರಸ್ತೆಗಳಲ್ಲಿ ಜನರು ಓಡಾಡು ತ್ತಿದ್ದದ್ದು ಅಷ್ಟಾಗಿ ಕಾಣಿಸುತ್ತಿರಲಿಲ್ಲ. ತುಂಬಾ ಅನಿವಾರ್ಯವಿದ್ದವರಷ್ಟೇ ಹೊರ ಬರುತ್ತಿದ್ದರು. ಜನತೆ ಈಗ ಲಾಕ್‌ಡೌನ್‌ ನಿಯಮವನ್ನು ಸಮ ರ್ಪಕವಾಗಿ ಪಾಲಿಸುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಗೆ ಮಹತ್ವ ನೀಡುತ್ತಿರುವುದು ಶ್ಲಾಘನೀಯ.

ಸಾಮಾಜಿಕ ಅಂತರ ಕಾಪಾಡಿಕೊಳ್ಳು ವುದಕ್ಕಾಗಿ ನಗರದ ಹೆಚ್ಚಿನ ಅಂಗಡಿಗಳಲ್ಲಿ ಮುಂದೆ ಈಗಾಗಲೇ ಮಾರ್ಕ್‌ ಮಾಡಲಾಗಿದ್ದು, “ಸಾಲಾಗಿ ಬನ್ನಿ’,”ಸಾಮಾಜಿಕ ಅಂತರ ಕಾಪಾಡಿ’ ಎಂದು ಬರೆಯಲಾಗಿದೆ. ಸರತಿ ಸಾಲು ತಪ್ಪಿಗೆ ಬರುವ ಸಾರ್ವಜನಿಕರನ್ನು ಅಂಗಡಿ ಮಾಲಕರು ಎಚ್ಚರಿಸುತ್ತಿದ್ದರು.ಧಾರ್ಮಿಕ ಕ್ಷೇತ್ರಗಳ ಗೇಟ್‌ ಮುಚ್ಚಲಾ ಗಿತ್ತು. ಹೆಚ್ಚಿನ ಸಂಖ್ಯೆಯ ನಿರ್ಗತಿಕರು ನಗರದ ರಸ್ತೆ ಬದಿಗಳಲ್ಲಿ ಸಾಲಾಗಿ ಕೂತಿದ್ದ ದೃಶ್ಯ ಕಂಡುಬಂತು. ಕೆಲವು ಸಂಘಟನೆಗಳು ಉಚಿತವಾಗಿ ಆಹಾರ ನೀಡುತ್ತಿದ್ದರು. ನಗರ ದಲ್ಲಿ ಮೆಡಿಕಲ್‌ ಅಂಗಡಿಗಳು ತೆರೆದಿದ್ದವು. ಕೆಲವು ಬ್ಯಾಂಕ್‌ ಶಾಖೆಗಳು, ಅಂಚೆ ಕಚೇರಿಗಳು ತೆರೆದಿದ್ದವಾದರೂ ಗ್ರಾಹಕರ ಸಂಖ್ಯೆ ವಿರಳವಾಗಿತ್ತು. ಸರಕಾರಿ ಕಚೇರಿಗಳಲ್ಲಿ ಸಿಬಂದಿ ಕೊರತೆ ಕಂಡುಬಂತು.

ಆವಶ್ಯಕ ಸಾಮಗ್ರಿ ಖರೀದಿ
ಮಂಗಳೂರು ನಗರದ ಸೆಂಟ್ರಲ್‌ ಮಾರುಕಟ್ಟೆಯಲ್ಲಿ ಬೆಳಗ್ಗೆ ಸಾರ್ವಜನಿಕರಿದ್ದರು. ದಿನಸಿ, ತರಕಾರಿ, ಹಣ್ಣು ಹಂಪಲುಗಳ ಖರೀದಿ ಕಂಡುಬಂತು. ಮಧ್ಯಾಹ್ನ 12 ಗಂಟೆಯ ವೇಳೆಗೆ ಬಹುತೇಕ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಕೆಲವು ಕಡೆಗಳಲ್ಲಿ ಬಾಗಿಲು ತೆರೆದ ಅಂಗಡಿಗಳನ್ನು ಪೊಲೀಸರು, ಮನಪಾ ಟಾಸ್ಕ್ಪೋರ್ಸ್‌ ತಂಡ ಮುಚ್ಚಿಸುತ್ತಿದ್ದ ದೃಶ್ಯ ನಗರದಲ್ಲಿ ಕಂಡುಬಂತು.

ಅನಗತ್ಯ ವಾಹನ ಸಂಚಾರ ನಿಷೇಧ
ನಗರದಲ್ಲಿ ಅನಗತ್ಯವಾಗಿ ವಾಹನಗಳಲ್ಲಿ ಸಂಚರಿಸಬೇಡಿ. ಕೋವಿಡ್‌ 19 ಬಗ್ಗೆ ಜಾಗ್ರತೆ ವಹಿಸಿ ಎಂಬ ಬರಹವಿರುವ ಬ್ಯಾನರ್‌ ಅನ್ನು ನಗರದ ವಿವಿಧ ಕಡೆಗಳಲ್ಲಿ ಅಳವಡಿಸಲಾಗಿದೆ. ಸೆಂಟ್ರಲ್‌ ಮಾರುಕಟ್ಟೆಗೆ ಸರಕು ತುಂಬಿದ ಗೂಡ್ಸ್‌ ವಾಹನಗಳಿಗೆ ಮಾತ್ರ ಅವಕಾಶ ಎಂಬ ಬ್ಯಾನರ್‌ ಕೂಡ ಹಾಕಲಾಗಿದೆ.

ಟಾಪ್ ನ್ಯೂಸ್

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

Dinesh-Gundurao

Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrest

Mangaluru: ಮದ್ಯ ಅಕ್ರಮ ದಾಸ್ತಾನು: ಮನೆ ಮೇಲೆ ಅಬಕಾರಿ ದಾಳಿ; ಮದ್ಯ ಸಹಿತ ಇಬ್ಬರು ವಶಕ್ಕೆ

2

Mulki: ವ್ಯಕ್ತಿ ನಾಪತ್ತೆ; ಸೂಚನೆ; ದೂರು ದಾಖಲು

missing

Mangaluru: ಎಂಜಿನಿಯರಿಂಗ್‌ ವಿದ್ಯಾರ್ಥಿನಿ ನಾಪತ್ತೆ

15

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಆಮಿಷ; 21 ಲ.ರೂ. ವಂಚನೆ

2

Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

udupi

udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ

Dinesh-Gundurao

Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್‌

CN-Manjunath

Mysuru: ಕೋವಿಡ್‌ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್‌.ಮಂಜುನಾಥ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.