ಕೋವಿಡ್- 19 ಆತಂಕ: ಲಕ್ಷದ್ವೀಪಕ್ಕೆ ಅಗತ್ಯ ವಸ್ತುಗಳ ಕೊರತೆ ಕಾಡುವ ಭೀತಿ
Team Udayavani, Mar 22, 2020, 12:09 AM IST
ಇತ್ತೀಚೆಗೆ ಹಳೆಬಂದರಿಗೆ ಆಗಮಿಸಿದ್ದ ಲಕ್ಷದ್ವೀಪದ ನೌಕೆ.
ಮಹಾನಗರ: ಜಗತ್ತನ್ನೇ ಆತಂಕಕ್ಕೆ ದೂಡಿರುವ ಕೊರೊನಾ ಸೋಂಕು ದ್ವೀಪ ಪ್ರದೇಶಗಳ ಆತಂಕವನ್ನು ಇಮ್ಮಡಿಗೊಳಿಸಿದೆ. ಕೇಂದ್ರಾಡಳಿತ ಪ್ರದೇಶವಾಗಿರುವ ಲಕ್ಷದ್ವೀಪಕ್ಕೆ ಕೊರೊನಾ ಸೋಂಕಿನ ಭಯದ ಜತೆಗೆ ಜೀವನಾವಶ್ಯಕ ವಸ್ತುಗಳ ಕೊರತೆಯ ಭೀತಿ ಉಂಟಾಗಿದೆ.
ಆಹಾರವೂ ಸಹಿತ ದಿನಬಳಕೆಯ ಸಾಮಗ್ರಿಗಳಿಗೆ ಮಂಗಳೂರು ಮತ್ತು ಕೇರಳ ವನ್ನು ಅವಲಂಬಿಸಿರುವ ಲಕ್ಷದ್ವೀಪ ಕೇವಲ ಮಂಗಳೂರಿನಿಂದ ವರ್ಷಕ್ಕೆ ಸರಿಸುಮಾರು 6,652 ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನೇ ಪಡೆದು ಕೊಳ್ಳುತ್ತಿದೆ. ತೆಂಗಿನಕಾಯಿ ಮತ್ತು ಮೀನು ಹೊರತುಪಡಿಸಿದರೆ ಉಳಿದೆಲ್ಲ ಅಗತ್ಯ ಪರಿಕರಗಳು ಮಂಗಳೂರು, ಕಲ್ಲಿ ಕೋಟೆ ಮೂಲಕ ಈ ದ್ವೀಪ ಪ್ರದೇಶಕ್ಕೆ ರವಾನೆ ಯಾಗುತ್ತದೆ. ಇದೀಗ ಕೇರಳದಲ್ಲಿ ಕೋವಿಡ್- 19 ದೃಢಪಟ್ಟಿರುವುದರಿಂದ ಅಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಸೋಂಕು ನಿಯಂತ್ರಿ ಸಲು ಕಠಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಬಂದರುಗಳಲ್ಲಿಯೂ ತೀವ್ರ ತಪಾಸಣೆ ನಡೆಯುತ್ತಿದೆ. ಇತ್ತ ಮಂಗಳೂರಿ ನಲ್ಲಿಯೂ ತಪಾಸಣೆ ನಡೆಯುತ್ತಿದೆ. ಒಂದು ವೇಳೆ ಸ್ಥಿತಿ ಹೀಗೆಯೇ ಮುಂದುವರಿದರೆ ಜಲಮಾರ್ಗಗಳನ್ನು ಕೂಡ ಮುಚ್ಚುವ ಸಾಧ್ಯತೆಗಳು ಹೆಚ್ಚಾಗಿದ್ದು, ಅಗತ್ಯ ಸಾಮಗ್ರಿ ಗಳ ಪೂರೈಕೆ ಸವಾಲಾಗಲಿದೆ.
ಪ್ರಯಾಣಿಕ ನೌಕೆಗೆ ನಿರ್ಬಂಧ
ಮಂಗಳೂರು ಹಳೆ ಬಂದರಿಗೆ ಲಕ್ಷದ್ವೀಪದಿಂದ ಪ್ರಯಾಣಿಕ ನೌಕೆ ಕೂಡ ಸಾಮಾನ್ಯವಾಗಿ ವಾರಕ್ಕೊಮ್ಮೆ ಬರುತ್ತದೆ. ಅದರಲ್ಲಿ ಬರುವ ಅಲ್ಲಿನ ಪ್ರಯಾಣಿಕರು ತಮಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿ ಹೋಗುತ್ತಿದ್ದರು. ಮಾ. 13ರಂದು ಆಗಮಿ ಸಿದ್ದ ಪ್ರಯಾಣಿಕ ನೌಕೆಯಲ್ಲಿದ್ದ ಸಿಬಂದಿ, ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಇದೀಗ ಪ್ರಯಾಣಿಕ ನೌಕೆಗಳನ್ನು ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದರೆ ಸರಕು ನೌಕೆಗಳಿಗೆ ಅವಕಾಶವಿದೆ. ಮುಂದೆ ಸರಕು ನೌಕೆಗಳನ್ನು ಕೂಡ ನಿರ್ಬಂಧಿಸಿದರೆ ದ್ವೀಪ ಪ್ರದೇಶದ ಜನತೆ ತೊಂದರೆಗೀಡಾಗಬಹುದು.
ಮುಂಜಾಗ್ರತೆಗೆ ಸೂಚನೆ
ಲಕ್ಷದ್ವೀಪ ಕರ್ನಾಟಕ, ಕೇರಳ, ಕೊಚ್ಚಿ ಬಂದರುಗಳ ಮೂಲಕ ಅಗತ್ಯ ವಸ್ತುಗಳನ್ನು ತರಿಸಿ ಕೊಳ್ಳುತ್ತಿದೆ. ಸದ್ಯಕ್ಕೆ ಯಾವುದೇ ತೊಂದರೆ ಯಾಗಿಲ್ಲ. ಆದಾಗ್ಯೂ ಇಲ್ಲಿನ ಹೋಲ್ ಸೇಲ್ ಏಜೆನ್ಸಿ, ಕೋ-ಆಪರೇಟಿವ್ ಮಾರ್ಕೆ ಟಿಂಗ್ ಫೆಡರೇಷನ್‌ಗೆ ಅಗತ್ಯ ಮುನ್ನೆ ಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಲಕ್ಷದ್ವೀಪ ದಲ್ಲಿ ಇದುವರೆಗೆ ಯಾವುದೇ ಕೋವಿಡ್- 19 ದೃಢವಾಗಿಲ್ಲ. 8 ಮಂದಿಯನ್ನು ಕ್ವಾರಂಟೈನ್‌ನಲ್ಲಿಟ್ಟು ನಿಗಾ ವಹಿಸಲಾಗಿದ್ದು. ಪರಿಸ್ಥಿತಿಯ ಅರಿವಿದೆ. ಅಗತ್ಯ ವಸ್ತುಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳುತ್ತಿದ್ದೇವೆ.
- ಮಹಮ್ಮದ್ ಫೈಝಲ್, ಸಂಸದರು, ಲಕ್ಷದ್ವೀಪ
ಕಾರ್ಮಿಕರ ಬಗ್ಗೆ ಹೆಚ್ಚಿನ ಕಾಳಜಿ
ಲಕ್ಷದ್ವೀಪಕ್ಕೆ ಅಗತ್ಯವಸ್ತುಗಳನ್ನು ಕಳುಹಿಸಿ ಕೊಡುವುದಕ್ಕೆ ಸದ್ಯಕ್ಕೆ ನಿಬಂìಧವಿಲ್ಲ. ಮಂಗಳೂರು ಮತ್ತು ಲಕ್ಷದ್ವೀಪ ಎರಡೂ ಕಡೆ ವಿಶೇಷ ತಪಾಸಣೆ ನಡೆಸಲಾಗುತ್ತಿದೆ. ಲಕ್ಷದ್ವೀಪದಲ್ಲಿ ಕೂಡ ಪರೀಕ್ಷಾ ವರದಿಯನ್ನು ನೋಡಿಯೇ ಪ್ರವೇಶ ನೀಡಲಾಗುತ್ತಿದೆ. ಇಲ್ಲಿನ ಕಾರ್ಮಿಕರ ಬಗ್ಗೆ ನಾವು ಹೆಚ್ಚಿನ ಕಾಳಜಿ ವಹಿಸುತ್ತಿದ್ದೇವೆ.
- ಉಸ್ಮಾನ್ ಮಂಗಳೂರು, ಅಗತ್ಯ ವಸ್ತುಗಳ ಪೂರೈಕೆದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
ವಿದ್ಯುತ್ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ
Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.