ಎಂಡೋಸಲ್ಫಾನ್ ಪೀಡಿತರು, ಅಶಕ್ತರಿಗೆ ಮನೆಯಲ್ಲೇ ಲಸಿಕೆ
Team Udayavani, Sep 21, 2021, 6:33 AM IST
ಮಂಗಳೂರು: ಕೊರೊನಾ ನಿರೋಧಕ ಲಸಿಕೆ ಅಭಿಯಾನದಡಿ ಸೋಮವಾರ ಬೆಳ್ತಂಗಡಿ ತಾಲೂಕಿನ ಕಣಿಯೂರು ಪ್ರಾಥಮಿಕ ಆರೋಗ್ಯ
ಕೇಂದ್ರ ವ್ಯಾಪ್ತಿಯ 12 ಗ್ರಾಮಗ ಳಲ್ಲಿ ಹಾಸಿಗೆ ಹಿಡಿದಿರುವ, ಎಂಡೋಸಲ್ಫಾನ್ ಸಂತ್ರಸ್ತರಿಗೆ, ಲಸಿಕಾ ಕೇಂದ್ರ ಗಳಿಗೆ ತೆರಳಲು ಅಸಾಧ್ಯವಾಗಿರುವ ಅಶಕ್ತ ಫಲಾನುಭವಿಗಳಿಗೆ ಹಾಗೂ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದ ಮನೆ ಮನೆಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬಂದಿ ಭೇಟಿ ನೀಡಿ ಒಟ್ಟು 87 ಮಂದಿಗೆ ಲಸಿಕೆ ನೀಡಿದರು.
ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 10 ಉಪ ಕೇಂದ್ರಗಳಲ್ಲಿ 5 ಜನ ಕಿರಿಯ ಆರೋಗ್ಯ ಸುರಕ್ಷಾಧಿಕಾರಿಗಳು ಹಾಗೂ ಓರ್ವ ವೈದ್ಯಾಧಿಕಾರಿ (ಆಯುಷ್ ಗುತ್ತಿಗೆ ಆಧಾರದಲ್ಲಿ) ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದುವರೆಗೆ 18-45 ವರ್ಷದೊಳ ಗಿನ 15,133 ಫಲಾನುಭವಿಗಳಿದ್ದು, ಈ ಪೈಕಿ 12,503 ಮಂದಿಗೆ ಪ್ರಥಮ ಡೋಸ್ ಹಾಗೂ 2,414 ಮಂದಿಗೆ ದ್ವಿತೀಯ ಡೋಸ್ ಲಸಿಕೆ ನೀಡಲಾಗಿದೆ. 45- 59 ವರ್ಷ ವಯೋಮಿತಿಯ 7,971 ಮಂದಿ ಇದ್ದು, ಅವರಲ್ಲಿ 2,759 ಜನರಿಗೆ ಪ್ರಥಮ ಡೋಸ್ ಹಾಗೂ 60 ವರ್ಷ ಮೇಲ್ಪಟ್ಟ 4,579 ಜನರಲ್ಲಿ 2,848 ಮಂದಿಗೆ ಪ್ರಥಮ ಡೋಸ್ ಹಾಗೂ 2,469 ಮಂದಿಗೆ ದ್ವಿತೀಯ ಡೋಸ್ ಲಸಿಕೆ ನೀಡಲಾಗಿದೆ.
ದ.ಕ.: 11,400 ಮಂದಿಗೆ ಲಸಿಕೆ:
ಮಂಗಳೂರು/ಉಡುಪಿ, ಸೆ. 20: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 11,400 ಮಂದಿಗೆ ಕೊರೊನಾ ನಿರೋಧಕ ಲಸಿಕೆ ನೀಡಲಾಗಿದೆ.
ಮಂಗಳೂರು ತಾಲೂಕಿನಲ್ಲಿ 6,545 ಮಂದಿಗೆ, ಬಂಟ್ವಾಳದಲ್ಲಿ 2,488, ಬೆಳ್ತಂಗಡಿಯಲ್ಲಿ 1,020, ಪುತ್ತೂರಿನಲ್ಲಿ 831 ಹಾಗೂ ಸುಳ್ಯ ತಾಲೂಕಿನಲ್ಲಿ 516 ಮಂದಿಗೆ ಲಸಿಕೆ ಕೊಡಲಾಗಿದೆ.
ಉಡುಪಿ: 5,777 ಮಂದಿಗೆ ಲಸಿಕೆ:
ಉಡುಪಿ ಜಿಲ್ಲೆಯಲ್ಲಿ 2,509 ಮಂದಿ ಪ್ರಥಮ, 3,268 ಮಂದಿ ದ್ವಿತೀಯ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.