ದ. ಕ. ಜಿಲ್ಲೆ: ವಾರದಲ್ಲಿ ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ
Team Udayavani, Dec 5, 2021, 6:49 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ವಾರಗಳಿಂದ ಲಸಿಕೆ ಅಭಿಯಾನಕ್ಕೆ ವೇಗ ದೊರೆತಿದೆ. ಸರಕಾರಿ ಕಚೇರಿಗಳಲ್ಲಿಯೂ ಅಭಿಯಾನ ನಡೆಸಲಾಗುತ್ತಿದ್ದು, ಲಸಿಕೆ ಪಡೆಯುವವರ ಸಂಖ್ಯೆ ಎರಡು ಪಟ್ಟು ಹೆಚ್ಚಳವಾಗಿದೆ.
ಕೆಲವು ವಾರಗಳ ಹಿಂದೆ ಪ್ರತೀ ದಿನ ಸರಾಸರಿ 5ರಿಂದ 6 ಸಾವಿರ ಮಂದಿ ಲಸಿಕೆ ಪಡೆಯುತ್ತಿದ್ದರು. ಸದ್ಯ ಅದು 15ರಿಂದ 20 ಸಾವಿರ ಮಂದಿಗೆ ಏರಿದೆ. ಈ ಹಿಂದೆ ಮಂಗಳೂರಿನಲ್ಲಿ ಆಸ್ಪತ್ರೆಗಳಲ್ಲಿ ಹೆಚ್ಚಾಗಿ ಲಸಿಕೆ ಅಭಿಯಾನ ನಡೆಯುತ್ತಿದ್ದರೆ ಸದ್ಯ ಜಿಲ್ಲಾಧಿಕಾರಿ ಕಚೇರಿ, ಮಾಲ್‌ಗಳು ಸೇರಿದಂತೆ ಅತೀ ಹೆಚ್ಚು ಸಾರ್ವಜನಿಕ ಸಂಪರ್ಕ ಇರುವ ಸರಕಾರಿ ಕಚೇರಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಅಭಿಯಾನ ನಡೆಸಲಾಗುತ್ತಿದೆ. ಮೊಬೈಲ್ ಲಸಿಕೆ ವ್ಯಾನ್ ಮೂಲಕ ನಗರದ ಅಲ್ಲಲ್ಲಿ ಲಸಿಕೆ ನೀಡಲಾಗುತ್ತಿದೆ. ಪರಿಣಾಮವಾಗಿ 10 ದಿನಗಳಲ್ಲಿ ಜಿಲ್ಲೆಯ 1,77,347 ಮಂದಿ ಲಸಿಕೆ ಪಡೆದಿದ್ದಾರೆ.
ಹೆಚ್ಚಿನ ಕಚೇರಿಗಳ ಪ್ರವೇಶಕ್ಕೆ ಎರಡೂ ಡೋಸ್ ಪಡೆದಿರುವುದು ಕಡ್ಡಾಯ ಮಾಡಿರುವುದರಿಂದ ಅನೇಕ ಮಂದಿ ಲಸಿಕೆ ಪಡೆದುಕೊಳ್ಳಲು ಮುಂದೆ ಬರುತ್ತಿದ್ದಾರೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
ಶೇ. 74ರಷ್ಟು ಮಂದಿಗೆ ಎರಡೂ ಡೋಸ್ ಪೂರ್ಣ:
ದ.ಕ. ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ಶೇ. 74.18ರಷ್ಟು ಮಂದಿ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ. ಎರಡನೇ ಡೋಸ್ ಪಡೆಯಲು ಆರೋಗ್ಯ ಇಲಾಖೆ ಒಟ್ಟು 15,48,320 ಮಂದಿಯ ಗುರಿ ಇರಿಸಿದ್ದು, ಸದ್ಯ 11,48,602 ಮಂದಿ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ. ಶೇ. 90.06ರಷ್ಟು ಮಂದಿ ಮೊದಲನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 17,19,113 ಮಂದಿಯ ಗುರಿಯ ಪೈಕಿ 15,48,320 ಮಂದಿ ಲಸಿಕೆ ಪಡೆದಿದ್ದಾರೆ. ನವೆಂಬರ್ ಒಂದೇ ತಿಂಗಳಿನಲ್ಲಿ ಜಿಲ್ಲೆಯ 2,81,975 ಮಂದಿಗೆ ಲಸಿಕೆ ನೀಡಲಾಗಿದೆ. 27,762 ಮಂದಿಗೆ ಮೊದಲನೇ ಡೋಸ್, 2,54,213 ಮಂದಿಗೆ ಎರಡನೇ ಡೋಸ್ ನೀಡಲಾಗಿದೆ.
ಉಡುಪಿ ಜಿಲ್ಲೆ: ಶೇ.94.4 ಪ್ರಥಮ ಡೋಸ್:
ಉಡುಪಿ: ಉಡುಪಿ ಜಿಲ್ಲೆಯ 9.99 ಲಕ್ಷ ಗುರಿಯಲ್ಲಿ 9,43,089 ಮಂದಿ ಪ್ರಥಮ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಇದರ ಪ್ರಮಾಣ ಶೇ. 94.4. ಎರಡನೆಯ ಡೋಸ್ ಲಸಿಕೆಯನ್ನು 7,43,484 ಮಂದಿ ಪಡೆದಿದ್ದು ಶೇ.74.42 ಸಾಧನೆಯಾಗಿದೆ.
“ಲಸಿಕೆ ಮಿತ್ರ’ ಅಭಿಯಾನ ಯಶಸ್ವಿ :
ಜಿಲ್ಲೆಯಲ್ಲಿ ಲಸಿಕೆ ಅಭಿಯಾನಕ್ಕೆ ಚುರುಕು ನೀಡುವ ಉದ್ದೇಶದಿಂದ “ಲಸಿಕೆ ಮಿತ್ರ’ ಅಭಿಯಾನ ಆರಂಭಿಸಲಾಗಿದೆ. ಅಂಗನವಾಡಿ- ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬಂದಿ, ವಿವಿಧ ಕಾಲೇಜುಗಳ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಮನೆ ಮನೆಗೆ ಭೇಟಿ ನೀಡಿ ಲಸಿಕೆ ಪಡೆಯಲು ಅರಿವು ಮೂಡಿಸುತ್ತಿದ್ದಾರೆ.
10 ದಿನಗಳಲ್ಲಿ ಲಸಿಕೆ ಪಡೆದವರು:
ದಿನಾಂಕ ದ.ಕ. ಉಡುಪಿ
ನ. 27 40,601 9,055
ನ. 28 6,281 4,180
ನ. 29 15,657 14,723
ನ. 30 12,661 11,866
ಡಿ. 1 24,652 16,476
ಡಿ. 2 11,870 8,349
ಡಿ. 3 15,821 10,089
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.