ಗೋಕಳ್ಳರಿಗೆ ಕಠಿನ ಶಿಕ್ಷೆಯಾಗಲಿ: ಶರಣ್ ಪಂಪ್‌ವೆಲ್
Team Udayavani, Apr 7, 2018, 10:56 AM IST
ಉಳ್ಳಾಲ : ಜಿಲ್ಲೆಯಲ್ಲಿ ಗೋಕಳ್ಳತನ ನಿಲ್ಲಬೇಕು. ಅಮೃತಧಾರ ಗೋಶಾಲೆಯ ಗೋಕಳವು ಮಾಡಿದ ಗೋಕಳ್ಳರಿಗೆ ಕಠಿನ ಶಿಕ್ಷೆಯಾಗಬೇಕು ಈ ನಿಟ್ಟಿನಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಸಹ ಸಂಘಟನೆಗಳ ಸಹಯೋಗದೊಂದಿಗೆ ಸಾಮೂಹಿಕ ಪ್ರಾರ್ಥನೆಯನ್ನು ಉಳ್ಳಾಲ ವ್ಯಾಪ್ತಿಯ ಎಲ್ಲ ದೇವಸ್ಥಾನ, ದೈವಸ್ಥಾನ ಮತ್ತು ಮಂದಿರಗಳಲ್ಲಿ ಯಶಸ್ವಿಯಾಗಿದೆ ಎಂದು ವಿಶ್ವಹಿಂದೂ ಪರಿಷತ್‌ನ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ತಿಳಿಸಿದರು.
ಪುಣ್ಯಕೋಟಿ ಅಮೃತಾಗೋಶಾಲೆಯ ಗೋಕಳ್ಳತನಕ್ಕೆ ಸಂಬಂಧಿಸಿದಂತೆ ಆರು ದಿನಗಳಿಂದ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಮತ್ತು ನಾಡಿನಾದ್ಯಂತ ಗೋರಕ್ಷಣೆಗಾಗಿ ಶುಕ್ರವಾರ ಸೋಮೇಶ್ವರ ಶ್ರಿ ಸೋಮನಾಥ ದೇವಸ್ಥಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯ ಬಳಿಕ ಮಾತನಾಡಿದರು. ಜಿಲ್ಲಾ ಕಾರ್ಯಾದ್ಯಕ್ಷ ಗೋಪಾಲ ಕುತ್ತಾರ್ ಮಾತನಾಡಿ, ಅಮೃತಧಾರಗೋಶಾಲೆಯಲ್ಲಿ ಕಳವು ನಡೆಸಿ ಎಂಟು ದಿನಗಳಾದರೂ ಕಳ್ಳರನ್ನು ಬಂಧಿಸಲು ಸಾಧ್ಯವಾಗಿಲ್ಲ. ಗೋಕಳ್ಳರನ್ನು ಬಂಧಿಸಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಟಿ.ಜಿ.ರಾಜಾರಾ ಭಟ್ ಅವರಿಗೆ ನ್ಯಾಯ ಒದಗಿಸಿಕೊಡಬೇಕು. ಈ ನಿಟ್ಟಿನಲ್ಲಿ ಗೋಸಂರಕ್ಷಣೆಯ ನಿಟ್ಟಿನಲ್ಲಿ ದೇವರಲ್ಲಿ ಶಕ್ತಿ ಕೊಡುವಂತೆ ಸಾಮೂಹಿ ಪ್ರಾರ್ಥನೆಯನ್ನು ಕೈಗೊಂಡಿದೆ ಎಂದರು.
ಉಳ್ಳಾಲ ವ್ಯಾಪ್ತಿಯ 27 ಗ್ರಾಮಗಳ ವಿವಿಧ ದೇವಸ್ಥಾನ, ದೈವಸ್ಥಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಉಳ್ಳಾಲ ಪ್ರಖಂಡ ಕಾರ್ಯದರ್ಶಿ ರವಿ ಅಸೈಗೋಳಿ, ಪ್ರಮೋದ್, ಶೈಲು ಅಡ್ಕ, ಶಿವ ಪ್ರಸಾದ್ ಅಂಬ್ಲಿಮೊಗರು, ಪ್ರದೀಪ್ ಕೆರೆಬೈಲ್‌ಗುಡ್ಡೆ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.