ತುಳು ಪ್ರೇಮ ಮೆರೆದ ಕ್ರಿಕೆಟಿಗ ಕೆ.ಎಲ್. ರಾಹುಲ್
Team Udayavani, Jan 24, 2020, 7:39 AM IST
ಮಹಾನಗರ: ಕೆಲವು ತಿಂಗಳಿನಿಂದ ಉತ್ತಮ ಫಾರ್ಮ್ ನಲ್ಲಿರುವ ಭಾರತ ಕ್ರಿಕೆಟ್ ತಂಡದ ಆಟಗಾರ, ಮಂಗಳೂರಿನ ಕೆ.ಎಲ್. ರಾಹುಲ್ ಅವರು ಇದೀಗ ಮತ್ತೂಮ್ಮೆ ತನ್ನ ತುಳು ಪ್ರೇಮವನ್ನು ಮೆರೆದಿದ್ದಾರೆ.
ಮಂಗಳೂರು ವಿ.ವಿ. ಕಾಲೇಜು 150ನೇ ವರ್ಷದ ಸಂಭ್ರಮದಲ್ಲಿದ್ದು, ಫೆ. 6ರಂದು ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಕೆ.ಎಲ್. ರಾಹುಲ್ ಅವರು ತುಳು ಮತ್ತು ಕನ್ನಡ ಭಾಷೆಯಲ್ಲಿ ಆಹ್ವಾನಿಸಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೆ.ಎಲ್. ರಾಹುಲ್ ಅವರ ತಾಯಿ ಪ್ರೊ| ರಾಜೇಶ್ವರಿ ಅವರು 26 ವರ್ಷಗಳಿಂದ ಮಂಗಳೂರು ವಿ.ವಿ.ಯಲ್ಲಿ ಇತಿಹಾಸ ಬೋಧಿಸುತ್ತಿದ್ದಾರೆ. ಕಾಲೇಜಿಗೆ ರಾಹುಲ್ ಅವರನ್ನು ಕರೆತರಲು ಪ್ರಯತ್ನಿಸಿದರೂ ರಾಹುಲ್‌ನ ಒತ್ತಡದ ಕಾರ್ಯದಿಂದಾಗಿ ಅದು ಸಾಧ್ಯವಾಗಲಿಲ್ಲ.
ಅವರಿಗೆ ತುಳು ಭಾಷೆಯೇನು ಹೊಸದಲ್ಲ. ನಗರದ ನೆಹರೂ ಮೈದಾ ನದಲ್ಲಿ ಕ್ರಿಕೆಟ್ ಕಲಿಯುವ ವೇಳೆ ತನ್ನ ಸಹಪಾಠಿಗಳೊಂದಿಗೆ ತುಳುವಿನಲ್ಲೇ ಹಾಸ್ಯ ಚಟಾಕಿ ಹಾರಿಸುತ್ತಿದ್ದರು. ಅವರು ಮೂಲತಃ ಸುರತ್ಕಲ್‌ನವರಾಗಿದ್ದು, ತನ್ನ ಬಾಲ್ಯವನ್ನು ಕರಾವಳಿಯಲ್ಲಿಯೇ ಕಳೆದಿದ್ದಾರೆ. ಇದೇ ಕಾರಣಕ್ಕೆ ತುಳು ಭಾಷೆಯನ್ನು ಸರಾಗವಾಗಿ ಮಾತನಾ ಡಬಲ್ಲರು. ಮೂರು ವರ್ಷಗಳ ಹಿಂದೆ ನಗರದ ಖಾಸಗಿ ಜಿಮ್ ಉದ್ಘಾಟನ ಸಮಾರಂಭದಲ್ಲಿ ತನ್ನ ತುಳು ಪ್ರೇಮವನ್ನು ಮರೆದು “ಎನ್ನ ತುಳು ಪಾತೆರೆ ಎಡ್ಡೆ ಉಂಡು, ಸ್ಪೀಚ್ ಕೊರ್ರೆ ಎಡ್ಡೆ ಇಜ್ಜಿ’ (ನನ್ನ ತುಳು ಭಾಷೆ ಚೆನ್ನಾಗಿದೆ. ಆದರೆ, ಭಾಷಣ ಮಾಡಲು ಕಷ್ಟವಾಗುತ್ತದೆ) ಎಂದು ಹೇಳಿದ್ದರು. ಅಲ್ಲದೆ, ಎರಡು ವರ್ಷಗಳ ಹಿಂದೆ ಮೇ 29ರಂದು ನಗರದಲ್ಲಿ ಸುರಿದ ಕುಂಭದ್ರೋಣ ಮಳೆಯಿಂದ ಎದುರಾದ ಸಮಸ್ಯೆಗಳನ್ನು ತಿಳಿದು ರಾಹುಲ್‌ಗೆ ಬೇಸರವಾಗಿತ್ತು. ಈ ವೇಳೆ ಟ್ವೀಟ್ ಮಾಡಿದ ಅವರು “ಮಂಗಳೂರು ಜನರೇ ಸುರಕ್ಷಿತವಾಗಿರಿ. ನನ್ನ ಪಾರ್ಥನೆ ನಿಮಗಾಗಿ ಇದ್ದೇ ಇದೆ’ ಎಂದು ತಿಳಿಸಿ ತುರ್ತು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆಯನ್ನು ಟ್ವೀಟ್ ಮಾಡಿದ್ದರು.
ಕಳೆದ ವರ್ಷ ಭಾರತ-ಇಂಗ್ಲೆಂಡ್ ತಂಡಗಳ ನಡುವೆ ನಡೆದ ವಿಶ್ವಕಪ್ ಪಂದ್ಯಾಟದಲ್ಲಿ ಅಭಿಮಾನಿಗಳು ತುಳು ಡೈಲಾಗ್ ಹೇಳಿದಾಗ ಅವರತ್ತ ಕೈ ಬೀಸಿ ಸಂತಸ ವ್ಯಕ್ತಪಡಿಸಿದ್ದರು.
ವೀಡಿಯೋದಲ್ಲಿ ಏನಂದಿದ್ದಾರೆ ರಾಹುಲ್?
ಭಾರತ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್. ರಾಹುಲ್ ಅವರು, “ಮಾತೆರೆಗ್ಲಾ ಎನ್ನ ನಮಸ್ಕಾರ ಯಾನ್ ಕೆ.ಎಲ್. ರಾಹುಲ್ (ಎಲ್ಲರಿಗೂ ನನ್ನ ನಮಸ್ಕಾರ ನಾನು ಕೆ.ಎಲ್. ರಾಹುಲ್), ಮಂಗಳೂರು ವಿ.ವಿ. ಕಾಲೇಜಿನ 150ನೇ ವರ್ಷದ ಸಂಭ್ರಮಾಚರಣೆಯು ಫೆ. 6ರಂದು ನಡೆಯಲಿದೆ. ನೀವೆಲ್ಲರೂ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ’ ಎಂದು ಕನ್ನಡ ಮತ್ತು ತುಳು ಭಾಷೆಯಲ್ಲಿ ವೀಡಿಯೋ ಮುಖೇನ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.