4.15 ಕೋ. ರೂ. ಮೌಲ್ಯದ ರಕ್ತ ಚಂದನ ಸಾಗಾಟ ಪ್ರಕರಣ: ಏಳು ಆರೋಪಿಗಳ ಜಾಮೀನು ರದ್ದು
Team Udayavani, Jun 18, 2022, 12:58 AM IST
ಮೂಡುಬಿದಿರೆ: ಕಿಲ್ಪಾಡಿ ಗ್ರಾಮದ ಕೆಂಚನಕೆರೆಯಲ್ಲಿ ಅರಣ್ಯ ಸಂಚಾರ ದಳವು ಜೂ. 1ರಂದು 8,308 ಕೆ.ಜಿ. ತೂಕದ ಸುಮಾರು ರೂ 4.15 ಕೋಟಿ ಮೌಲ್ಯದ 316 ರಕ್ತ ಚಂದನ ಮರದ ದಿಮ್ಮಿಗಳನ್ನು ವಶಪಡಿಸಿಕೊಂಡು, ಏಳು ಮಂದಿ ಆರೋಪಿಗಳನ್ನು ಬಂಧಿಸಿದ ಪ್ರಕರಣದಲ್ಲಿ ಈ ಆರೋಪಿಗಳ ಜಾಮೀನನ್ನು ಮೂಡುಬಿದಿರೆ ನ್ಯಾಯಾಲಯವು ರದ್ದುಗೊಳಿಸಿದೆ.
ಆಂಧ್ರ ಪ್ರದೇಶದ ಸರಕಾರಿ ಅರಣ್ಯದಿಂದ ಕಡಿದ ರಕ್ತ ಚಂದನದ ದಿಮ್ಮಿಗಳನ್ನು ಲಾರಿಯ ಮೂಲಕ ಮಂಗಳೂರು ಬಂದರಿಗೆ ಸಾಗಿಸಿ ಅಲ್ಲಿಂದ ಸಿಂಗಾಪುರಕ್ಕೆ ಸಾಗಿಸುವ ಯೋಜನೆಯಂತೆ ಈ ಮರಗಳನ್ನು ಈಚರ್ ವಾಹನದಲ್ಲಿ ಬೈಹುಲ್ಲು ಹಾಕಿ ಸಾಗಾಟ ನಡೆಸುತ್ತಿದ್ದಾಗ ಅರಣ್ಯ ಸಂಚಾರ ದಳದ ಅರಣ್ಯಾಧಿಕಾರಿ ಶ್ರೀಧರ ಪಿ. ನೇತೃತ್ವದ ತಂಡ ಲಾರಿಯನ್ನು ವಶಪಡಿಸಿಕೊಂಡು ತಪಾಸಣೆ ನಡೆಸಿದಾಗ ರಕ್ತ ಚಂದನದ ಅಕ್ರಮ ಸಾಗಾಟ ಪ್ರಕರಣ ಬಯಲಾಗಿತ್ತು.
ಪ್ರಕರಣದಲ್ಲಿ ಎಂಟು ಜನ ಅಂತಾರಾಜ್ಯ ಆರೋಪಿಗಳ ಪೈಕಿ ಏಳು ಮಂದಿಯನ್ನು ಬಂಧಿಸಿದ್ದು ಓರ್ವ ಆರೋಪಿ ಚೇತನ್ ಪರಾರಿಯಾಗಿದ್ದ.
ಆಂಧ್ರಪ್ರದೇಶದ ನೆಲ್ಲೂರಿನ ಅಲಾಡಿ ರಾಜೇಶ ರೆಡ್ಡಿ, ಕೇರಳ ಪಾಲಕ್ಕಾಡ್‌ನ ಸುಭಾಸ್, ತಿರುವಲ್ಲೂರಿನ ಪಾಲರಾಜ್, ಪಾಲಕ್ಕಾಡ್‌ನ ಶಾಮೀರ್ ಎಸ್., ಪಾಲಕ್ಕಾಡ್‌ನ ಕುಂಞಿ ಮಹಮ್ಮದ್, ಕೊಯಮತ್ತೂರಿನ ಅನಿಲ್ ಕುಮಾರ್, ತಿರುವೆಳ್ಳೂರ್‌ನ ದಿನೇಶ್ ಕುಮಾರ್ ಕೆ. ಪ್ರಕರಣದಲ್ಲಿ ಬಂಧಿತರಾದವರು.
ಮಲೇಶ್ಯ, ಸಿಂಗಾಪುರ, ದುಬಾೖ ಮೊದಲಾದ ದೇಶಗಳಲ್ಲಿ ಮನೆ ಅಲಂಕರಣ, ಔಷಧ ಮೊದಲಾದ ಉದ್ದೇಶಗಳಿಗಾಗಿ ರಕ್ತಚಂದನಕ್ಕೆ ಭಾರೀ ಬೇಡಿಕೆ ಇದ್ದು ಮಂಗಳೂರು ಬಂದರು ಮೂಲಕ ಬಹುಕೋಟಿ ರೂ. ಮೌಲ್ಯದ ರಕ್ತಚಂದನ ಸಾಗಿಸಲು ಸಿದ್ಧತೆ ನಡೆದಿತ್ತೆನ್ನಲಾಗಿದೆ.
ಆರೋಪಿಗಳು ಜಾಮೀನು ಕೋರಿ ಮೂಡುಬಿದಿರೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಈ ಕುರಿತ ವಾದ ವಿವಾದವನ್ನು ಆಲಿಸಿದ ಮೂಡುಬಿದಿರೆ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಮಾಲಾ ಸಿ. ಜಾಮೀನು ಅರ್ಜಿಯನ್ನು ರದ್ದು ಪಡಿಸಿ ಹೆಚ್ಚುವರಿ ಕಲಂಗಳನ್ನು ಅಳವಡಿಸಲು ತನಿಖಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಶೋಭಾ ಎಸ್. ವಾದ ಮಂಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.