ಕರಾವಳಿ ಭಾಗದ ಅಪರಾಧ ಸುದ್ದಿಗಳು
Team Udayavani, May 7, 2019, 6:10 AM IST
ಸಿಐಎಸ್‌ಎಫ್ ಕಾನ್‌ಸ್ಟೆಬಲ್ ನಾಪತ್ತೆ
ಮಂಗಳೂರು: ಪಣಂಬೂರಿನ ಎನ್‌ಎಂಪಿಟಿಯ ಸಿಐಎಸ್‌ಎಫ್ ಘಟಕದ ಕಾನ್‌ಸ್ಟೆಬಲ್ ಪ್ರತಾಪ್ ವಿ. (28) ಅವರು ಮೇ 1ರಿಂದ ಕಾಣೆಯಾಗಿದ್ದಾರೆ. ಪ್ರತಾಪ್ ನೀಲಿ ಬಣ್ಣದ ಉದ್ದ ತೋಳಿನ ಟಿ- ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. 176 ಸೆ. ಮೀ. ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ತೆಲುಗು, ಹಿಂದಿ, ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ. ಅವರ ಬಗ್ಗೆ ಮಾಹಿತಿ ಸಿಕ್ಕಿದರೆ ಪಣಂಬೂರು ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ.
ತೆಕ್ಕಟ್ಟೆ : ಮೆಡಿಕಲ್ ಗಳಲ್ಲಿ ಸರಣಿ ಕಳವು
ತೆಕ್ಕಟ್ಟೆ : ಇಲ್ಲಿನ ರಾ.ಹೆ.66ರ ಪ್ರಮುಖ ಭಾಗದಲ್ಲಿರುವ ಮೂರು ಮೆಡಿಕಲ್ ಸ್ಟೋರ್‌ಗಳ ಶಟರ್ ಮುರಿದು ಕಳವು ನಡೆಸಿದ ಘಟನೆ ಮೇ 6ರಂದು ಬೆಳಕಿಗೆ ಬಂದಿದೆ.
ಜಾಕ್‌ರಾಡ್ ಬಳಸಿ ರೋಲಿಂಗ್ ಶಟರ್ ಮುರಿದಂತಿದೆ. ಒಂದು ಮೆಡಿಕಲ್‌ನ ಕ್ಯಾಶ್ ಟೇಬಲ್‌ನಲ್ಲಿದ್ದ ಸುಮಾರು 5 ಸಾ. ರೂ.ಗೂ ಅಧಿಕ ಮೊತ್ತವನ್ನು ಕದ್ದೊಯ್ಯಲಾಗಿದೆ. ಕೋಟ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.
ಹಿಂದೆಯೂ ನಡೆದಿತ್ತು ಕಳವು
ಈ ಹಿಂದೆ 2016ರ ಜು.16ರಂದು ತೆಕ್ಕಟ್ಟೆ ಪೇಟೆಯಲ್ಲಿ ಏಕಕಾಲದಲ್ಲಿ ಏಳು ಅಂಗಡಿಗಳಿಂದ ಕಳವು ನಡೆಸಲಾ ಗಿತ್ತು. ಸುಮಾರು 7 ಮಂದಿಯ ತಂಡದ ಈ ಕೃತ್ಯ ಸಿಸಿ ಕೆಮರಾದಲ್ಲಿ ದಾಖಲಾಗಿತ್ತು. 2016ರ ಸೆ.2ರಂದು ಶ್ರೀ ಮಹಾದೇವಿ ಮೆಡಿಕಲ್ಸ್ , ಪಂಚಾಮೃತ ಬೇಕರಿ ಹಾಗೂ ಶ್ರೀ ಮಹಾದೇವಿ ಜನರಲ್ ಸ್ಟೋರ್‌ನ ಮೇಲ್ಛಾವಣಿಯ ಹಂಚನ್ನು ತೆಗೆದು ನುಗ್ಗಿದ ಕಳ್ಳರು ಚಿಲ್ಲರೆ ಹಣ ಹಾಗೂ ಸಣ್ಣ ಪುಟ್ಟ ವಸ್ತುಗಳನ್ನು ಕದ್ದಿದ್ದರು.
ದೂರು ನೀಡಲು ಹಿಂದೇಟು
ಈ ಹಿಂದೆಯೂ ಕಳ್ಳರ ವಿರುದ್ಧ ಪ್ರಕರಣ ದಾಖಲಿಸಲು ಅಂಗಡಿ ಮಾಲಕರು ಹಿಂದೇಟು ಹಾಕಿದ್ದರು. ಈ ಬಾರಿಯೂ ದೂರು ನೀಡಿಲ್ಲ.
ಮೊಬೈಲ್ ಕಳವು: ಆರೋಪಿ ಸೆರೆ
ಪಣಂಬೂರು: ಇಲ್ಲಿನ ಬೀಚ್ ಬಳಿ ನಿಲ್ಲಿಸಿದ್ದ ರಿಕ್ಷಾದಿಂದ ಎರಡು ಮೊಬೈಲ್‌ಫೋನ್ ಕದ್ದ ಆರೋಪಿ ರಾಜೇಶ್ ತಣ್ಣೀರುಬಾವಿ (17) ಎಂಬಾತನನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.ಮೇ 1ರಂದು ಮಂಗಳೂರು ಜಪ್ಪು ನಿವಾಸಿ ನಿಜಾಮುದ್ದೀನ್ ಮತ್ತು ನಾಸೀರ್ ಅವರು ರಿಕ್ಷಾದಲ್ಲಿ ಬೀಚ್‌ಗೆ ಬಂದಿದ್ದು,ತಮ್ಮ ಮೊಬೈಲ್ ಫೋನ್‌ಗಳನ್ನು ಆಟೋರಿಕ್ಷಾದ ಡ್ಯಾಶ್ ಬೋರ್ಡ್ ನಲ್ಲಿ ಇರಿಸಿದ್ದರು.ಬಳಿಕ ಅದು ಕಳವಿಗೀಡಾಗಿತ್ತು.
ಅದ್ಯಪಾಡಿ: ವ್ಯಕ್ತಿ ನೀರುಪಾಲು
ಬಜಪೆ: ಅದ್ಯಪಾಡಿ ಡ್ಯಾಂನ ನೀರಿನಲ್ಲಿ ಕಪ್ಪು ಚಿಪ್ಪು ಹೆಕ್ಕಲು ಹೋಗಿದ್ದ ಮೂಡುಶೆಡ್ಡೆಯ ಎದುರುಪದವಿನ ಶಂಕರ ಪೂಜಾರಿ (46) ಅವರು ಸೋಮ ವಾರ ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಸಮುದ್ರ ಪಾಲಾಗಿದ್ದ ವ್ಯಕ್ತಿಯ ಶವ ಪತ್ತೆ
ಉಳ್ಳಾಲ: ಮೊಗ ವೀರಪಟ್ಣ ಬಳಿ ರವಿವಾರ ಸಮುದ್ರ ಪಾಲಾಗಿದ್ದ ಬೆಂಗಳೂರು ಶಿವಾಜಿ ನಗರ ಮೂಲದ ರಿಝಾÌನ್ (40) ಶವ ಸೋಮವಾರ ರಾತ್ರಿ ಉಳ್ಳಾಲ ಬೀಚ್ ತೀರದಲ್ಲಿ ಪತ್ತೆಯಾಗಿದೆ.
ಬೆಳಪುವಿನ ಮಹಿಳೆಯ ರಕ್ಷಣೆ
ಉಡುಪಿ: ಕಟಪಾಡಿ ಪೇಟೆಯಲ್ಲಿ ಅಸ್ವಸ್ಥರಾಗಿದ್ದ ಸುಮಾರು 35 ವರ್ಷದ ಮಹಿಳೆಯನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಸೋಮವಾರ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಮಹಿಳೆಯು ತನ್ನ ಹೆಸರು ಜಲೀಲಾ, ತಂದೆ ಅಬ್ದುಲ್ ರಝಾಕ್, ಊರು ಬೆಳಪು ಎಂದು ಹೇಳಿದ್ದಾರೆ. ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಆಕೆಯ ಸಂಬಂಧಿಕರು ಕೂಡ ತೀರಾ ಅಸಹಾಯಕ ಸ್ಥಿತಿಯಲ್ಲಿದ್ದಾರೆಂಬ ಮಾಹಿತಿ ಲಭಿಸಿದೆ. ಹಾಗಾಗಿ ಸಾರ್ವಜನಿಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ಪಂದಿಸಬೇಕು ಎಂದು ವಿಶು ಶೆಟ್ಟಿ ಅವರು ಮನವಿ ಮಾಡಿದ್ದಾರೆ.
ಕುಸಿದು ಬಿದ್ದು ಮೀನುಗಾರ ಸಾವು
ಮಲ್ಪೆ: ಮೀನುಗಾರಿಕೆಗೆ ತೆರಳಲು ಬೋಟಿನಲ್ಲಿ ಬಲೆ ಸಿದ್ಧಪಡಿಸುತ್ತಿದ್ದಾಗ ಮೀನುಗಾರ ವಿಜಯ ಕುಂದರ್ (53) ಅವರು ಕುಸಿದು ಬಿದ್ದು ಮೃತಪಟ್ಟ ಘಟನೆ ಸೋಮವಾರ ಮುಂಜಾನೆ ಮಲ್ಪೆ ಬಂದರಿನಲ್ಲಿ ಸಂಭವಿಸಿದೆ.
ನಿಂತಿದ್ದ ಕಾರಿಗೆ ಲಾರಿ ಢಿಕ್ಕಿ: ಮೂವರಿಗೆ ಗಾಯ
ಉಡುಪಿ: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡ ಘಟನೆ ಮೇ 3ರಂದು ಅಂಬಾಗಿಲು ಜಂಕ್ಷನ್ ಬಳಿ ಸಂಭವಿಸಿದೆ.
ಮಂಜುನಾಥ ಫಕೀರಪ್ಪ ಕಾಮಣ್ಣ ಅವರು ಅಂಬಾಗಿಲು ಕಡೆಯಿಂದ ಸಂತೆಕಟ್ಟೆ ಕಡೆಗೆ ಹೋಗಲು ಅಂಬಾಗಿಲು ಜಂಕ್ಷನ್ ಬಳಿ ಕಾರು ನಿಲ್ಲಿಸಿದ್ದರು. ಆಗ ಸಂತೆಕಟ್ಟೆ ಕಡೆ ಯಿಂದ ಉಡುಪಿ ಕಡೆಗೆ ಬರುತ್ತಿದ್ದ ಲಾರಿ ಢಿಕ್ಕಿ ಹೊಡೆಯಿತು. ಕಾರಿನಲ್ಲಿದ್ದ ಮಂಜುನಾಥ ಫಕೀ ರಪ್ಪ, ಸೃಜನಾ ಮತ್ತು ಸಂಧ್ಯಾ ಗಾಯಗೊಂಡರು. ಲಾರಿ ಚಾಲಕ ರಾಘವೇಂದ್ರನ ವಿರುದ್ಧ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ: ಮಲಗಿದ್ದಲ್ಲೆ ಸಾವು
ಬ್ರಹ್ಮಾವರ: ಇಲ್ಲಿನ ಸಂತೆ ಮಾರ್ಕೆಟ್‌ನಲ್ಲಿ ಮಲಗಿದ್ದ ಆರೂರು ಕುರ್ಡುಂಜೆಯ ವಸಂತ ಎಸ್. ಶೆಟ್ಟಿ (55) ಅವರು ರವಿವಾರ ಮೃತಪಟ್ಟಿದ್ದಾರೆ.
ಅವರು ವಿಪರೀತ ಮದ್ಯ ಸೇವಿಸು ತ್ತಿದ್ದು, ಶುಗರ್ ಹಾಗೂ ಲಿವರ್ ತೊಂದರೆಯಿಂದಲೂ ಬಳ ಲು ತ್ತಿದ್ದರು ಎನ್ನಲಾಗಿದೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲ್ಕಿ: ಜುಗಾರಿ ನಿರತರ ಬಂಧನ
ಮೂಲ್ಕಿ: ರವಿವಾರ ತಡರಾತ್ರಿ ಕಾರ್ನಾಡು ಗ್ರಾಮದ ವನಬೋಜನ ರಸ್ತೆ ಸಮೀಪದ ಎಂ.ಎರ್.ಪಿ.ಎಲ್. ಹೌಸಿಂಗ್ ಸೈಟ್ ಬಳಿ ಆರು ಮಂದಿಯ ತಂಡ ಜುಗಾರಿ ನಿರತರಾಗಿದ್ದಾಗ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದು, ಇತ ರರು ಪರಾರಿಯಾಗಿದ್ದಾರೆ.
ಭೀಮಣ್ಣ, ಶರಣಪ್ಪ ಮತ್ತು ರವಿ ಬಂಧಿತರು. ಧರ್ಮ, ನಾಗರಾಜ ಮತ್ತು ಸಂಗಯ್ಯ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂಲ್ಕಿ ಎಸ್‌ಐ ಶೀತಲ್ ಅಲಗೂರು ಮತ್ತು ಸಿಬಂದಿ ದಾಳಿ ನಡೆಸಿದ್ದು, ಸ್ಥಳದಿಂದ 5,300 ರೂ. ವಶಪಡಿಸಿಕೊಳ್ಳಲಾಗಿದೆ.
ಗಾಂಜಾ, ಎಂ.ಡಿ.ಎಂ ವ್ಯಸನಿಗಳ ಬಂಧನ
ಪಣಂಬೂರು: ಇಲ್ಲಿ ನ ಐ.ಒ.ಸಿ.ಎಲ್. ಹಿಂಭಾಗದ ಸಮುದ್ರ ತೀರದ ಬಳಿ ಗಾಂಜಾ ಮತ್ತು ಎಂ.ಡಿ.ಎಂ. ಮಾದಕ ವಸ್ತುವನ್ನು ಸೇವಿಸುತ್ತಿದ್ದ ಐವರನ್ನು ಎ.ಸಿ.ಪಿ. ಶ್ರೀನಿವಾಸ ಆರ್. ಗೌಡ ನೇತೃತ್ವದ ಪಣಂಬೂರು ರೌಡಿ ನಿಗ್ರಹ ದಳ ಬಂ ಧಿಸಿದೆ. ಕೃಷ್ಣಾಪುರದ ಮಹಮ್ಮದ್ ಮುಝಾಮಿಲ್ (40), ಕಾಟಿಪಳ್ಳದ ಮೆಹತಾಬ್ (27), ಕುದ್ರೋಳಿಯ ಅಬ್ದುಲ್ ಜಲೀಲ್ (26) ಪಂಜಿಮೊಗರಿನ ಸಫಾÌನ್ (26), ಜೋಕಟ್ಟೆ ತೋಕೂರಿನ ಆಸ್ಮಾನ್ (24) ಬಂಧಿತರು.
ಬಿಜೂರು: ಅಣ್ಣನ ಕೊಲೆ ಪ್ರಕರಣ ಗಾಯಗೊಂಡಿದ್ದ ಭಾವನೂ ಸಾವು!
ಉಪ್ಪುಂದ: ಬಿಜೂರು ಗ್ರಾಮದ ಬವಳಾಡಿಯಲ್ಲಿ ಮೇ 3ರಂದು ಸಹೋದರರ ನಡುವಿನ ಜಗಳ ಬಿಡಿಸಲು ಹೋಗಿ ಗಂಭೀರವಾಗಿ ಗಾಯಗೊಂಡಿದ್ದ ಭಾವನೂ ಕೊನೆ ಯುಸಿರೆಳೆದಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟಂತಾಗಿದೆ.
ಕ್ಷುಲ್ಲಕ ಕಾರಣಕ್ಕಾಗಿ ಸಹೋದರರಾದ ನಾಗರಾಜ (47) ಮತ್ತು ಸಂತೋಷ (20) ನಡುವೆ ಜಗಳ ಆರಂಭವಾಗಿತ್ತು. ಕೋಪ ಗೊಂಡ ಸಂತೋಷನು ತಂದೆಯ ಊರು ಗೋಲಿನಿಂದ ನಾಗರಾಜನಿಗೆ ಹೊಡೆದ ಪರಿಣಾಮ ಮಧ್ಯರಾತ್ರಿ ಆತ ಕೊನೆಯುಸಿರೆಳೆದಿದ್ದ. ಇವರಿಬ್ಬರ ಜಗಳ ಬಿಡಿಸಲು ಹೋಗಿದ್ದ ಅಕ್ಕನ ಗಂಡ ಬಾಬು (47) ಮೇಲೆಯೂ ಸಂತೋ ಷನು ಹಲ್ಲೆ ಮಾಡಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಬಾಬು ಮೇ 5ರಂದು ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಹಲ್ಲೆಯಿಂದ ಗಾಯಗೊಂಡಿದ್ದ ಬಾಬು ಬೈಂದೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದರು. ಆತನ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆ ಅಗತ್ಯ ವಿತ್ತು. ತಾನು ಕುಂದಾಪುರದ ಆಸ್ಪತ್ರೆಗೆ ಹೋಗುವುದಾಗಿ ವೈದರಲ್ಲಿ ತಿಳಿಸಿ ಅಲ್ಲಿಂದ ಡಿಸಾcರ್ಜ್ ಮಾಡಿಸಿಕೊಂಡಿದ್ದ ಬಾಬು, ಬಳಿಕ ಆಸ್ಪತ್ರೆಗೆ ಹೋಗದೆ ನೇರವಾಗಿ ಮನೆಗೆ ಬಂದಿದ್ದರು.ವೈದ್ಯರು ಹೆಚ್ಚಿನ ಚಿಕಿತ್ಸೆ ಪಡೆಯಲು ಸೂಚಿಸಿದ್ದರೂ ನಿರ್ಲಕ್ಷಿಸಿದ್ದ ಈತ ಮೇ 5ರಂದು ರಾತ್ರಿ ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟರು.
ಸಂತೋಷನನ್ನು ಬೈಂದೂರು ಠಾಣಾಧಿಕಾರಿ ಬಿ.ಎನ್. ತಿಮ್ಮೇಶ ನೇತೃತ್ವದಲ್ಲಿ ಮೇ 4ರಂದು ಬಂಧಿಸಲಾಗಿದ್ದು, ಸದ್ಯ ಆತ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.
ಈಗಾಗಲೇ ಕೊಲೆ ಮತ್ತು ಹಲ್ಲೆ ಸಂಬಂಧಿಸಿದ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಾಗಿದೆ. ಈಗ ಸಾವಿನ ಸಂಖ್ಯೆ ಎರಡ ಕ್ಕೇರಿದ ಕಾರಣ ರೋಪಿ ವಿರುದ್ಧ ಹೆಚ್ಚಿನ ಸೆಕ್ಷನ್ ಹೇರಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರ ಕೊ*ಲೆ ಪ್ರಕರಣ
Actor; ಖ್ಯಾತ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಸಾ*ವು
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Qatar: ಕತಾರ್ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ
Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.