ಕಾರು ಖರೀದಿಸುವುದಾಗಿ ನಂಬಿಸಿ ವಂಚನೆ: ವಶಕ್ಕೆ
Team Udayavani, Oct 12, 2022, 12:48 AM IST
ಮೂಡುಬಿದಿರೆ: ರಿಟ್ಜ್ ಕಾರು ಮಾರಾಟಕ್ಕಿದೆ ಎಂದು ಸಾಮಾಜಿಕ ಜಾಲತಾಣ ಒಎಲ್‌ಎಕ್ಸ್‌ನಲ್ಲಿ ಹಾಕಿದ ಪ್ರಕಟನೆಯನ್ನು ಗಮನಿಸಿ ಮಾಲಕರನ್ನು ಸಂಪರ್ಕಿಸಿ ಕಾರು ಖರೀದಿಸುವುದಾಗಿ ನಂಬಿಸಿ ಹಣವನ್ನು ಮರುದಿನ ಪಾವತಿಸುವ ಮಾತು ಕೊಟ್ಟು ಕಾರು ಮತ್ತು ಕಾರಿನ ದಾಖಲೆಗಳನ್ನು ಪಡೆದು ಮಾಲಕರನ್ನು ವಂಚಿಸಿದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಕಾರು ಸಹಿತ ವಶಪಡಿಸಿಕೊಂಡಿದ್ದಾರೆ.
ಅವಿನಾಶ್ ಶುಭನ್ ಕಲ್ಹೋ ಅವರು ಅವರ ರಿಟ್ಜ್ ಕಾರನ್ನು ಮಾರಾಟ ಮಾಡಲೆಂದು ಒಎಲ್‌ಎಕ್ಸ್‌ನಲ್ಲಿ ಹಾಕಿದ ಪ್ರಕಟನೆ ನೋಡಿದ್ದ ಆರೋಪಿ ಮಂಗಳೂರು ಬಂದರು ನಿವಾಸಿ ಟಿ.ಪಿ. ಮುನೀರ್ ಕಾರಿನ ಮಾಲಕರನ್ನು ಭೇಟಿ ಮಾಡಿ ಕಾರನ್ನು 2.80 ಲಕ್ಷ ರೂ.ಗೆ ಖರೀದಿಸುವುಗಾಗಿ ಹೇಳಿದ್ದ. ಮರುದಿನ ಹಣವನ್ನು ಬ್ಯಾಂಕ್ ಖಾತೆಯ ಮುಖಾಂತರ ವರ್ಗಾಯಿಸುವುದಾಗಿ ಹೇಳಿ ಕಾರು ಮತ್ತು ಕಾರಿಗೆ ಸಂಬಂಧಿಸಿದ ಮೂಲ ದಾಖಲಾತಿಗಳನ್ನು ಪಡೆದುಕೊಂಡು ಹೋಗಿದ್ದ. ಅನಂತರ ಆರೋಪಿ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದ.
ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ಟಿ.ಪಿ. ಮುನೀರ್‌ನನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಂಗ ಬಂಧನ ನೀಡಲಾಗಿತ್ತು. ಕಾರಿನ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲು ಪೊಲೀಸರು ನ್ಯಾಯಾಲಯದ ಆದೇಶ ಪಡೆದು ಮುನೀರ್‌ನನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದು, ಈ ಸಂದರ್ಭ ಆರೋಪಿಯಿಂದ ಮಾರುತಿ ರಿಟ್ಜ್ ಕಾರನ್ನು ಆರೋಪಿ ಮಾರಾಟ ಮಾಡಿದ್ದ ಕುಂದಾಪುರದ ನಿವಾಸಿ ನಿಹಾಲ್ ಅವರಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿಯ ವಿರುದ್ಧ ಮಂಗಳೂರಿನ ಹಲವು ಠಾಣೆಗಳಲ್ಲಿ ಗಾಂಜಾ ಮಾರಾಟ, ಮನೆಯಲ್ಲಿ ಕಳ್ಳತನ, ದರೋಡೆ, ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Flight; ಮಂಗಳೂರು – ಸಿಂಗಾಪುರ ನೇರ ವಿಮಾನ ಕೆಲ ಕಾಲ ಮುಂದಕ್ಕೆ?
Hassan-Mangaluru ಹಳಿ ದ್ವಿಗುಣ: ಅಂತಿಮ ಸ್ಥಳ ಸರ್ವೇಗೆ ಟೆಂಡರ್
ಕ್ಯುಆರ್ ಕೋಡ್ ಬದಲಿಸಿ ಬಂಕ್‌ಗೆ ಲಕ್ಷಾಂತರ ರೂ. ವಂಚನೆ
Tannirbhavi: ಜ. 11, 12ರ ಬೀಚ್ ಉತ್ಸವ, ಸ್ವಚ್ಛತೆ ಸುರಕ್ಷತೆಗೆ ಗರಿಷ್ಠ ಆದ್ಯತೆ: ಡಿಸಿ
Mangaluru ಎಚ್‌ಎಂಪಿ ವೈರಸ್; ಆತಂಕದ ಅಗತ್ಯವಿಲ್ಲ, ಚಳಿಗಾಲದಲ್ಲಿ ಶೀತ, ಜ್ವರ ಸಾಮಾನ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ
ಸುಲೈಮಾನ್ ಮನೆಗೆ ಸ್ಪೀಕರ್ ಯು.ಟಿ.ಖಾದರ್ ಭೇಟಿ; ಎಸ್ಪಿ, ಡಿವೈಎಸ್ಪಿ, ಮನೆಯವರ ಜೊತೆ ಸಮಾಲೋಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.