ಮಂಗಳೂರು: ಹೊಟೇಲಿನಿಂದ 1.35 ಲ.ರೂ. ಸೊತ್ತು ಕಳವು
Team Udayavani, Oct 23, 2022, 11:55 PM IST
ಮಂಗಳೂರು: ದೇರೆಬೈಲ್-ಮಾಲೆಮಾರ್ ರಸ್ತೆಯ ಹೊಟೇಲೊಂದರಿಂದ ಸೊತ್ತುಗಳನ್ನು ಕಳವು ಮಾಡಲಾಗಿದೆ.
ಹೊಟೇಲ್ ಅನ್ನು ಕಳೆದ 20 ದಿನಗಳಿಂದ ಬಂದ್ ಮಾಡಲಾಗಿತ್ತು. ಹೊಟೇಲ್ ನಡೆಸಿಕೊಂಡಿದ್ದವರು ಅ. 19ರಂದು ಸಂಜೆ ಹೊಟೇಲ್ ಅನ್ನು ತೆರೆದು ಸೊತ್ತುಗಳನ್ನು ಪರಿಶೀಲಿಸಿ ಬಾಗಿಲು ಹಾಕಿ ಹೋಗಿದ್ದರು.
ಅ. 21ರಂದು ಬೆಳಗ್ಗೆ ಬಂದು ನೋಡಿದಾಗ ಹೊಟೇಲ್ನ ಬೀಗ ಜಖಂಗೊಳಿಸಿ ಬಾಗಿಲು ತೆರೆದು ಹೊಟೇಲ್ನಲ್ಲಿದ್ದ 2 ಸ್ಪ್ಲಿಟ್ ಎಸಿ ಸೇರಿದಂತೆ ಅಂದಾಜು 1.35 ಲ.ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವುದು ಗಮನಕ್ಕೆ ಬಂದಿದೆ ಎಂದು ಕಾವೂರು ಠಾಣೆಗೆ ದೂರು ನೀಡಲಾಗಿದೆ.
ಮಟ್ಕಾ ಜುಗಾರಿ: ಇಬ್ಬರು ವಶಕ್ಕೆ
ಮಂಗಳೂರು: ನಗರದ ಸ್ಟೇಟ್ಬ್ಯಾಂಕ್ ಸಿಟಿ ಬಸ್ ನಿಲ್ದಾಣದ ಬಳಿ ಮಟ್ಕಾ ಜುಗಾರಿಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಕಾಸರಗೋಡಿನ ರಾಜೇಶ್ (36) ಮತ್ತು ಅಜಯ್ (28)ನನ್ನು ಮಂಗಳೂರು ದಕ್ಷಿಣ ಠಾಣೆಯ ಪೊಲೀ ಸರು ಅ. 21ರಂದು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಆರೋಪಿ ಗಳಿಂದ 9,500 ರೂ. ಸ್ವಾಧೀನಪಡಿಸಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.