ಕರಾವಳಿ ಅಪರಾಧ ಸುದ್ದಿಗಳು
Team Udayavani, Jun 8, 2019, 10:01 AM IST
ಮಡಂತ್ಯಾರು: ಬಸ್ -ಕಾರು ಢಿಕ್ಕಿ
ಬೆಳ್ತಂಗಡಿ: ಮಂಗಳೂರು – ಬೆಳ್ತಂಗಡಿ ರಸ್ತೆಯ ಮಡಂತ್ಯಾರು ಸಮೀಪದ ಪಣಕಜೆಯಲ್ಲಿ ಸರಕಾರಿ ಬಸ್ ಹಾಗೂ ಆಮ್ನಿ ಕಾರು ಪರಸ್ಪರ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರು ಚಾಲಕ ಮಾಲಾಡಿ ನಿವಾಸಿ ಪಿ.ವಿ.ಭಟ್ ಅವರು ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಲ್ಲಿ ಅವರೊಬ್ಬರೇ ಇದ್ದರು.
*
ಡಿವೈಡರ್‌ಗೆ ಬೈಕ್ ಢಿಕ್ಕಿ: ಸವಾರ ಸಾವು
ಕಾಪು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಡಿವೈಡರ್‌ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಎನ್‌ಆರ್ ಪುರ ಮೂಲದ ಸುರೇಶ್ ಆಚಾರ್ಯ (42) ಅವರುರು ಸಾವನ್ನಪ್ಪಿದ ಘಟನೆ ಶುಕ್ರವಾರ ಮಧ್ಯಾಹ್ನ ಕಾಪುನಲ್ಲಿ ಸಂಭವಿಸಿದೆ.
ಉಡುಪಿ ಕಡೆಯಿಂದ ಹೆಜಮಾಡಿಗೆ ಬೈಕಿನಲ್ಲಿ ತೆರಳುತಿದ್ದಾಗ ಕಾಪುವಿನ ಮಯೂರ ಹೊಟೇಲ್ ಎದುರು ಇವರ ಬೈಕ್ ಡಿವೈಡರ್‌ಗೆ ಢಿಕ್ಕಿ ಹೊಡೆದಿತ್ತು. ಅಪಘಾತದ ದೃಶ್ಯ ಸಮೀಪದ ಹೊಟೇಲ್‌ನ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.
ಎನ್‌ಆರ್ ಪುರ ಕಾಳಿಕಾಂಬಾ ದೇಗುಲದ ಅರ್ಚಕ ವ್ಯಾಸರಾಯ ಆಚಾರ್ಯರ ಪುತ್ರರಾಗಿದ್ದ ಸುರೇಶ್ ಆಚಾರ್ಯ ಅವರು ಈ ಹಿಂದೆ ಚಿನ್ನದ ಕೆಲಸ ಮಾಡಿಕೊಂಡಿದ್ದರು. ಪ್ರಸ್ತುತ ಪತ್ನಿ ಪೂರ್ಣಿಮಾ ಹಾಗೂ ಪುತ್ರಿ ಸಮನ್ವಿ (9) ಅವರೊಂದಿಗೆ ಹೆಜಮಾಡಿಯ ಸ. ಪ. ಪೂ. ಕಾಲೇಜು ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಬೈಕಂಪಾಡಿಯ ಪ್ಲೈ ಪುಡ್ ಕಂಪೆನಿ ಹಾಗೂ ಹೆಜಮಾಡಿ ಯಲ್ಲೂ ಇವರು ಉದ್ಯೋಗ ದಲ್ಲಿದ್ದರು. ಮೃತರು ತಂದೆ, ತಾಯಿ, ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಕಾಪು ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
*
ಬೇಳಂಜೆ: ದನದ ಕೊಟ್ಟಿಗೆಗೆ ಬೆಂಕಿ
ಹೆಬ್ರಿ: ಬೇಳಂಜೆ ತಾರಿಗದ್ದೆ ಬಾಸ್ಕರ್ ಶೆಟ್ಟಿ ಅವರ ದನದ ಕೊಟ್ಟಿಗೆಗೆ ಜೂ. 7ರಂದು ಸಂಜೆ ಬೆಂಕಿ ತಗಲಿ ಸಂಪೂರ್ಣ ಸುಟ್ಟು ಹೋಗಿದ್ದು, ದನ ಹಾಗೂ ಕರುವಿಗೆ ಗಾಯಗಳಾಗಿವೆ. ಬಚ್ಚಲು ಮನೆಯಲ್ಲಿ ನೀರು ಬಿಸಿ ಮಾಡುತ್ತಿರುವಾಗ ಆಕಸ್ಮಿಕವಾಗಿ ಕೊಟ್ಟಿಗೆಗೆ ಬೆಂಕಿ ತಗಲಿದೆ ಎಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.