ಕರಾವಳಿ ಅಪರಾಧ ಸುದ್ದಿಗಳು
Team Udayavani, Apr 8, 2019, 10:45 AM IST
ಉಳಿ: ಅಟ್ಟದಿಂದ ಬಿದ್ದು ಸಾವು
ಪುಂಜಾಲಕಟ್ಟೆ: ಮನೆಯ ಅಟ್ಟದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಬಂಟ್ವಾಳ ತಾಲೂಕು ಉಳಿ ಗ್ರಾಮದ ಮಾದೋಡಿ ನಿವಾಸಿ ಶಿವರಾಮ ಗೌಡ (68) ಅವರು ಎ. 5ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರು ಎ.4ರಂದು ರಾತ್ರಿ ಅಡಿಕೆ ಗೋಣಿ ಇರಿಸಲು ಅಟ್ಟಕ್ಕೆ ಹೋಗಿದ್ದು, ಮರದ ಏಣಿ ಮೂಲಕ ಇಳಿಯುತ್ತಿದ್ದಾಗ ಬಿದ್ದು ತಲೆಗೆ ಗಂಭೀರ ಏಟಾಗಿತ್ತು. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರ ಪುತ್ರ, ಶಿಕ್ಷಕ ಸಂತೋಷ್ ದೂರಿನಂತೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಶಿವರಾಮ ಗೌಡರು ಪ್ರಗತಿಪರ ಕೃಷಿಕರಾಗಿದ್ದು ಟೈಲರಿಂಗ್ ವೃತ್ತಿಯನ್ನೂ ನಡೆಸುತ್ತಿದ್ದರು. ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದು, ಎ.4ರಂದು ಕಕ್ಯಪದವಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದರು. ಅವರು ಉಳಿ ಯುವಕ ಮಂಡಲದ ಮಾಜಿ ಅಧ್ಯಕ್ಷ, ಸರಪಾಡಿ ವ್ಯ.ಸೇ.ಸ. ಬ್ಯಾಂಕ್ ಮಾಜಿ ನಿರ್ದೇಶಕರಾಗಿದ್ದರು. ಉತ್ತಮ ಕಬಡ್ಡಿ ಆಟಗಾರರಾಗಿದ್ದರು. ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಮಾಜಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್ ಮತ್ತಿತರರು ಅಂತಿಮ ದರ್ಶನ ಪಡೆದರು.
ಕ್ರಿಕೆಟ್ ಬೆಟ್ಟಿಂಗ್ ನಿರತ ನಾಲ್ವರ ಸೆರೆ: 48,070 ರೂ. ಮೌಲ್ಯದ ಸೊತ್ತು ವಶ
ಮಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೊಬೈಲ್ ಆ್ಯಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ನಿರತ ನಾಲ್ವ ರನ್ನು ಉರ್ವ ಪೊಲೀ ಸರು ಬಂಧಿ ಸಿ, 48,070 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿ ಕೊಂಡಿದ್ದಾರೆ. ಬಿಜೈ ನ್ಯೂ ರೋಡ್‌ನ ನಿವಾಸಿ ಇರ್ವಿನ್ ಜೆರಾಲ್ಡ್ ಡಿ’ಸೋಜಾ, ವಿಜಯಪುರ ಜಿಲ್ಲೆ ಮುದ್ದೆಬಿಹಾಳದ ತಾಳಿಕೋಟೆ ನಿವಾಸಿ ಹಾಜಿ ಇಸ್ಮಾ ಯಿಲ್(26), ಬೆಳ್ತಂಗಡಿ ಕಳಂಜೆಯ ಜೋಸೆಫ್ ಥೋಮಸ್ (27) ಮತ್ತು ಅಡ್ಯಾರ್ ವಳಚ್ಚಿಲ್ ನಿವಾಸಿ ಇಸ್ಮಾಯಿಲ್ (65) ಬಂಧಿತರು. ಎ.4ರಂದು ಬಿಜೈ ನ್ಯೂ ರೋಡ್ 4ನೇ ತಿರುವು ರಸ್ತೆಯ ಒಲಿವಾ ಅಪಾರ್ಟ್‌ಮೆಂಟ್‌ನ ಮನೆಯೊಂದ ರಲ್ಲಿ ಬೆಟ್ಟಿಂಗ್ ಗಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಉರ್ವ ಸಿಐ ನೇತೃ ತ್ವದ ತಂಡ ದಾಳಿ ನಡೆಸಿ, ಇರ್ವಿನ್ ಜೆರಾಲ್ಡ್ ಡಿ’ ಸೋಜಾನನ್ನು ಬಂಧಿ ಸಿ ತು. ಆತ ನಿಂದ ಮೂರು ಮೊಬೈಲ್ ಫೋನ್, ಲ್ಯಾಪ್‌ಟಾಪ್ ಹಾಗೂ 1,450 ರೂ. ನಗದು ಸಹಿತ ಒಟ್ಟು 36,450 ರೂ. ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಎ. 5ರಂದು ಬಿಜೈನ ಲಾಡಿjಗೆ ದಾಳಿ ಮಾಡಿ, ಕ್ರಿಕೆಟ್ ಬೆಟ್ಟಿಂಗ್ ನಿರತ ಹಾಜಿ ಇಸ್ಮಾಯಿಲ್, ಜೋಸೆಫ್ ಥೋಮಸ್ ಮತ್ತು ಇಸ್ಮಾಯಿಲ್ ಅವರನ್ನು ಬಂಧಿಸಲಾ ಗಿದೆ. ಬಂಧಿ ತ ರಿಂದ ಮೂರು ಮೊಬೈಲ್, 1,320 ರೂ. ನಗದು ಸಹಿತ ಒಟ್ಟು 11,620 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಚಿಮಿಣಿ ದೀಪದಿಂದ ಬೆಂಕಿ: ಓರ್ವ ಸಾವು
ಮಂಗಳೂರು, : ಬಲ್ಲಾಳ್‌ಬಾಗ್‌ನ ವಿವೇಕನಗರದ ಮನೆಯಲ್ಲಿ ಮಲಗಿದ್ದಾಗ ಹಾಸಿಗೆಗೆ ಆಕಸ್ಮಿಕ ಬೆಂಕಿ ತಗುಲಿ ರವೀಂದ್ರ (40) ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ರಾತ್ರಿ ಸುಮಾರು 10.45ರ ವೇಳೆಗೆ ಚಿಮಣಿ ದೀಪ ಅಚಾನಕ್ ಆಗಿ ಬಿದ್ದು ರವೀಂದ್ರ ಅವರ ಹಾಸಿಗೆ ಮತ್ತು ಬಟ್ಟೆಗಳಿಗೆ ಬೆಂಕಿ ತಗುಲಿತ್ತು. ಬಳಿಕ ಬೆಂಕಿ ಕೊಠಡಿ ಪೂರ್ತಿ ವ್ಯಾಪಿಸಿ ರವೀಂದ್ರ ಹೊರಬರಲಾಗದೆ ಸ್ಥಳದಲ್ಲೇ ಸಾವನ್ನಪ್ಪಿದರು. ಮನೆಯಲ್ಲಿ ರವೀಂದ್ರ ಮತ್ತು ಅವರ ತಾಯಿ ಲಕ್ಷ್ಮೀ ಮಾತ್ರ ವಾಸವಾಗಿದ್ದು, ಲಕ್ಷಿ ಅಸೌಖ್ಯದಿಂದ ಬಳಲುತ್ತಿದ್ದ ಕಾರಣ ಹೊರಗೆ ಮಲಗಿದ್ದರು. ಅವರು ಬೆಂಕಿಯನ್ನು ಕಂಡು ಬೊಬ್ಬೆ ಹಾಕಿದ್ದು, ಸ್ಥಳೀಯರು ಬಂದು ಬೆಂಕಿ ನಂದಿಸಿದರು. ರವೀಂದ್ರ ಅವರು ನಗರದ ಕೊಡಿಯಾಲ್‌ಬೈಲ್‌ನ ಪಾಸ್‌ಪೋರ್ಟ್ ಕಚೇರಿಯಲ್ಲಿ ಗುಮಾಸ್ತರಾಗಿ ದ್ದರು. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.