ಅಪರಾಧ ತಡೆ ಮಾಸಾಚರಣೆ
Team Udayavani, Dec 13, 2018, 4:15 PM IST
ಬೇಲೂರು: ಅಪರಾಧ ಮಾಸಚರಣೆಯ ಅಂಗವಾಗಿ ಬುಧವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಆಟೋಚಾಲಕರಿಗೆ ಅಪರಾಧ ತಡೆ ಮಾಸಾಚರಣೆ ಬಗ್ಗೆ
ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಪಿಎಸ್‌ಐ ಜಗದೀಶ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಬೇಲೂರು ಪ್ರವಾಸಿ ಕೇಂದ್ರವಾಗಿದ್ದು ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುವುದರಿಂದ ಆಟೋ ಚಾಲಕರು ಅವರ ಜೊತೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳಬೇಕು ಅದೇರೀತಿಯಾಗಿ ಸಣ್ಣಪುಟ್ಟ ಅಪರಾಧಗಳು ನಡೆಯದ ಹಾಗೆ ನೋಡಿಕೊಳ್ಳುವುದರ ಜೋತೆಯಲ್ಲಿ ಅಪರಿಚತರ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣ ಪೋಲೀಸರಿಗೆ ಮಾತಿಯನ್ನು ನೀಡಬೇಕು ಎಂದರು. ರಾತ್ರಿ ಸಮಯ ಆಟೊ ಚಾಲಕರು ತಮ್ಮ ಕೆಲಸವನ್ನು ನಿರ್ವಹಿಸುವಾಗ ಬೀದಿಗಳಲ್ಲಿ ಅಪರಿಚಿತರನ್ನು ಕಂಡ ತಕ್ಷಣ ಅವರ ಬಗ್ಗೆ ಮಾಹಿತಿಯನ್ನು ಪಡೆಯಬೇಕು ಎಂದರು.
ಸಾರ್ವಜನಿಕರು ಪೋಲೀಸರೊಂದಿಗೆ ಉತ್ತಮವಾಗಿ ಸೌಹಾರ್ದತವಾಗಿ ವರ್ತಿಸುವಂತ ಕೆಲಸ ಮಾಡಬೇಕು, ಹೊರಗಡೆಯಿಂದ ಕೂಲಿ ಅರೆಸಿ ಬಂದಿರುವ ಕೆಲಸಗಾರರ ಮೇಲೆ ನಿಗಾವಸಬೇಕು. ಸಾರ್ವಜನಿಕರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ನೀವುಗಳು ಯಾರೇ ಅಪರಿಚಿತರು ಬಂದರೂ ಸಹ ಅವರ ಮಾಹಿತಿಯನ್ನು ಸಂಗ್ರಸಿ ಪೊಲೀಸರಿಗೆ ತಿಳಿಸಿದರೆ ಅಪರಾದಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎಎಸ್‌ಐ ಪರಮೇಶ್, ಸಿಬ್ಬಂದಿಗಳಾದ ಮನು, ಚಂದ್ರು, ನಂದೀಶ್, ಹಾಗೂ ಆಟೋ ಚಾಲಕರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
MUST WATCH
ಹೊಸ ಸೇರ್ಪಡೆ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.