ದೇವರ ಮೀನು ಕಳವು: ಇಬ್ಬರ ಸೆರೆ
Team Udayavani, Jul 27, 2017, 8:20 AM IST
ಬೆಳ್ಳಾರೆ/ಸುಳ್ಯ: ತೊಡಿಕಾನದ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ ಆಗಮಿಸಿದ ತೆಲಂಗಾಣ ಮೂಲದ ವ್ಯಕ್ತಿಗಳಿಬ್ಬರು ದೇವಾಲಯಕ್ಕೆ ಸೇರಿದ ಮೀನುಗಳನ್ನು ಹಿಡಿದು ಕೊಂಡೊಯ್ಯುತ್ತಿದ್ದಾಗ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಲಿಂಗರಾಜ (20) ಮತ್ತು ಪೋಲ್ರಾಜ್ (24) ಆರೋಪಿಗಳು. ಆರೋಪಿಗಳ ವಿರುದ್ಧ ಕಲ್ಲುಗುಂಡಿ ಹೊರ ಠಾಣಾ ಪೊಲೀಸರು ಪೆಟ್ಟಿ ಕೇಸು ದಾಖಲಿಸಿ ಬಳಿಕ ಬಿಡುಗಡೆಗೊಳಿಸಿದ್ದಾರೆ.
ಅವರು 15 ದಿನಗಳ ಹಿಂದೆ 4-5 ಸಲ ತೊಡಿಕಾನ ದೇಗುಲಕ್ಕೆ ಬಂದಿದ್ದರು. ಬುಧವಾರ ಮಧ್ಯಾಹ್ನ ಪೂಜೆಯ ವೇಳೆಗೆ ದೇಗುಲಕ್ಕೆ ಆಗಮಿಸಿದ್ದರು. ಬಳಿಕ ಮತ್ಸ್ಯತೀರ್ಥ ಬಳಿಗೆ ತೆರಳಿ ಮೀನು ಹಿಡಿದು ಬ್ಯಾಗ್ಗೆ ತುಂಬಿಸಿ ಹೊರಟ ಅವರು ಬಸ್ಸನ್ನೇರಿ ಕುಳಿತಿದ್ದರು. ಯುವಕರು ಅನುಮಾನಾಸ್ಪದವಾಗಿ ವರ್ತಿಸಿದಾಗ ಸಂಶಯಪಟ್ಟ ಸಮೀಪದ ಅಂಗಡಿಯ ಟೈಲರ್ ಬಿಂದು ಅವರು ದೇಗುಲ ಸಿಬಂದಿಗೆ ಮಾಹಿತಿ ನೀಡಿದರು. ತತ್ಕ್ಷಣ ಸಿಬಂದಿ ಆಗಮಿಸಿ ಯುವಕರ ಬ್ಯಾಗನ್ನು ಪರಿಶೀಲಿಸಿದಾಗ ಅದರಲ್ಲಿ ಮತ್ಸ್ಯತೀರ್ಥದಿಂದ ಹಿಡಿದ ಬೃಹತ್ ಗಾತ್ರದ 10 ಮೀನುಗಳು ಕಂಡುಬಂದವು.
ಸ್ಥಳೀಯರು ಆರೋಪಿಗಳಿಬ್ಬರನ್ನು ಸೆರೆಹಿಡಿದು ಹಿಡಿದಿದ್ದ ಮೀನುಗಳನ್ನು ಅವರ ಕೈಯಿಂದಲೇ ನದಿ ವಠಾರದಲ್ಲಿ ಹೂಳಿಸಿದರು.ಆರೋಪಿಗಳು ತಪ್ಪುಕಾಣಿಕೆಯಾಗಿ 300 ರೂ. ಗಳನ್ನು ದೇಗುಲದ ಭಂಡಾರಕ್ಕೆ ಅರ್ಪಿಸಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಕಲ್ಲುಗುಂಡಿ ಹೊರಠಾಣಾ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.
ಕೆಲವು ದಿನಗಳಿಂದ ನಿರಂತರವಾಗಿ ಹಳ್ಳಿ ಔಷಧ ನೀಡುವುದಾಗಿ ಪರಿಸರದಲ್ಲಿ ಸುತ್ತಾಟ ನಡೆಸುತ್ತಿದ್ದರು. ಈ ಹಿಂದೆಯೂ ದೇಗುಲಕ್ಕೆ ಭೇಟಿ ನೀಡಿದ್ದ ವೇಳೆ ಅವರಿಗೆ ಕ್ಷೇತ್ರದ ಬಗ್ಗೆ ಹಾಗೂ ಮೀನು ಹಿಡಿಯುವ ನಿಷೇಧಿತ ಪ್ರದೇಶವಾದ ಮತ್ಸ್ಯತೀರ್ಥದ ಪಾವಿತ್ರ್ಯದ ಬಗ್ಗೆಯೂ ತಿಳಿಸಲಾಗಿತ್ತು. ಪದೇ ಪದೇ ದೇಗುಲಕ್ಕೆ ಭೇಟಿ ನೀಡುತ್ತಿದ್ದ ಅವರ ಚಲನವಲನಗಳ ಬಗ್ಗೆ ಸ್ಥಳೀಯರು ಕಣ್ಣಿಟ್ಟಿದ್ದರು.
ಭಕ್ತರ ನಂಬಿಕೆಯ ಮೀನು
ತೊಡಿಕಾನ ಮಲ್ಲಿಕಾರ್ಜುನ ದೇಗುಲ ಸುಳ್ಯ ಸೀಮೆ ದೇವಾಲಯವಾಗಿದ್ದು ಪ್ರಸಿದಧ ಕಾರಣೀಕ ಕ್ಷೇತ್ರ. ಇದು ತೀರ್ಥಕ್ಷೇತ್ರವಾಗಿ ಪ್ರವಾಸಿ ತಾಣವಾಗಿ ಪ್ರಸಿದ್ಧಿ ಪಡೆದಿದೆ. ದಿನ ನಿತ್ಯ ನೂರಾರು ಭಕ್ತರು ಆಗಮಿಸುತ್ತಿದ್ದಾರೆ. ದೇವಾಲಯದ ಮತ್ಸ್ಯತೀರ್ಥ ಹೊಳೆಯ ಗುಂಡಿಯಲ್ಲಿ ಸಾವಿರಾರು ದೇವರ ಮೀನುಗಳಿವೆ. ಅದನ್ನು ದೇವಾಲಯದ ವತಿಯಿಂದ ಆರೈಕೆ ಮಾಡಲಾಗುತ್ತಿದೆ. ಈ ಮೀನುಗಳನ್ನು ಊರಿನಲ್ಲಿ ತಿನ್ನುವುದನ್ನು ನಿಷೇಧಿಸಲಾಗಿದೆ. ಕಟ್ಟುಪಾಡು ಮೀರಿ ಈ ಮೀನನ್ನು ತಿಂದರೆ ಆ ವ್ಯಕ್ತಿ ಸಮಸ್ಯೆಗೊಳಗಾಗುತ್ತಾನೆ ಎಂಬ ಇಲ್ಲಿನ ನಂಬಿಕೆ ಭಕ್ತರಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!
B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು
Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು
Belthangady: ಬೈಕ್ ಸವಾರ ಸಾವು ಪ್ರಕರಣ; ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ;ದಂಡ
Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.