ದಕ್ಷಿಣ ಕನ್ನಡದ ಕೆಲ ಅಪರಾಧ ಸುದ್ದಿಗಳು (ಫೆ 3)
Team Udayavani, Feb 4, 2018, 10:36 AM IST
ಲೈಂಗಿಕ ಕಿರುಕುಳ
ಸುಳ್ಯ: ಅಜ್ಜಾವರ ಗ್ರಾಮದ ದೊಡ್ಡೇರಿಯಲ್ಲಿ ಅಂಗನವಾಡಿಗೆ ತೆರಳುವ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಸುಳ್ಯ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ದೊಡ್ಡೇರಿ ಬಳಿಯ ಲಿಂಗಪ್ಪ ಗೌಡ ಆರೋಪಿ. ಈತ ತನ್ನ ಆಮ್ನಿ ಕಾರಿನಲ್ಲಿ ಬಾಲಕಿಯನ್ನು ಅಂಗನವಾಡಿಗೆ ಕರೆದು ಕೊಂಡು ಹೋಗುತ್ತಿದ್ದಾಗ ಕಿರುಕುಳ ನೀಡಿದ್ದಾ ನೆ ದೂರು ನೀಡಲಾಗಿದೆ.
ದನದ ಮಾಂಸ ಮಾಡಲು ಸಿದ್ಧತೆ: ಇಬ್ಬರ ಸೆರೆ
ಸುಳ್ಯ: ಸಂಪಾಜೆ ಗ್ರಾಮದ ದಂಡಕಜೆ ಮನೆಯೊಂ ದರ ಮುಂಭಾಗದಲ್ಲಿ ದನವನ್ನು ಕೊಲ್ಲಲು ತಯಾರಿ ನಡೆಸುತ್ತಿದ್ದ ಸ್ಥಳಕ್ಕೆ ಶನಿವಾರ ಸುಳ್ಯ ಪೊಲೀಸರು ದಾಳಿ ನಡೆಸಿ ಜಟ್ಟಿಪಳ್ಳದ ಸಿದ್ದೀಕ್ ಮತ್ತು ನಾವೂರು ಬೋರುಗುಡ್ಡೆಯ ಬದ್ರುದ್ದೀನ್ ಅವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಹನೀಫ್ ಪರಾರಿಯಾಗಿದ್ದಾನೆ.
ಯುವಕ ಆತ್ಮಹತ್ಯೆ
ಕಡಬ: ರಾಮಕುಂಜ ಗ್ರಾಮದ ಪೆರ್ಜಿ ಮನೆ ನಿವಾಸಿ ಅಬ್ದುಲ್ಲ ಅವರ ಪುತ್ರ ಖಲಂದರ್ ಶಾಫಿ (34) ಅವರು ಕೊçಲ ರೇಷ್ಮೆ ಇಲಾಖಾ ಕಟ್ಟಡದಲ್ಲಿ ಶನಿವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಖಲಂದರ್‌ಗೆ ಸುಳ್ಯ ಮೂಲದ ಯುವತಿ ಜತೆಗೆ 2 ವರ್ಷಗಳ ಮದುವೆ ಯಾಗಿದ್ದು, ದಾಂಪತ್ಯ ಕಲಹದ ಹಿನ್ನೆಲೆ ಯಲ್ಲಿ ಪತ್ನಿ ತವರು ಮನೆ ಸೇರಿದ್ದರು. ಇದರಿಂದ ಖನ್ನತೆಗೊಳಗಾಗಿದ್ದ ಖಲಂದರ್ ಕೆಲಸಕ್ಕೂ ಹೋಗದೆ ಆರ್ಥಿಕ ವಾಗಿ ಸಂಕಷ್ಟ ಎದುರಿಸುತ್ತಿದ್ದು, ಅದೇ ಕಾರಣದಿಂದ ಆತ್ಮಹತ್ಯೆಗೈದಿರಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಜ್ಜಾವರ: ನೇಣು ಬಿಗಿದು ಆತ್ಮಹತ್ಯೆ
ಸುಳ್ಯ: ಅಜ್ಜಾವರ ಗ್ರಾಮದ ಬೇಳ್ಯದಲ್ಲಿ ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಮೊಡಂಬಿ ನಿವಾಸಿ ಬಾಲಕೃಷ್ಣ ಪೂಜಾರಿ (48) ಆತ್ಮಹತ್ಯೆ ಮಾಡಿ ಕೊಂಡವರು. ಮೃತರು ಕಳೆದ ನಾಲ್ಕು ದಿನಗಳಿಂದ ನಾಪತ್ತೆ ಆಗಿದ್ದು, ಖಾಸಗಿ ವ್ಯಕ್ತಿಗೆ ಸೇರಿದ ಮರವೊಂದರಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿ¨ªಾರೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
MUST WATCH
ಹೊಸ ಸೇರ್ಪಡೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.