ಐಟಿ ದಾಳಿಗೆ ಸಿಆರ್‌ಪಿಎಫ್ ಸಿಬಂದಿ ದುರ್ಬಳಕೆ: ಪೂಜಾರಿ
Team Udayavani, Aug 3, 2017, 8:00 AM IST
ಮಂಗಳೂರು: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆ ಸೇರಿದಂತೆ 39 ಕಡೆ ಆದಾಯ ತೆರಿಗೆ ಇಲಾಖೆಯ ದಾಳಿ ಮಾಡುವ ನೆಪದಲ್ಲಿ ಸಿಆರ್‌ಪಿಎಫ್ ಸಿಬಂದಿಯನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಆರೋಪಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾಳಿ ಗಾಗಿ ಮಿಲಿಟರಿಯ ಒಂದು ಭಾಗ ವಾಗಿ ರುವ ಸಿಆರ್‌ಪಿಎಫ್ನ್ನು ಬಳಸಿ ಕೊಂಡಿ ರುವುದು ಆ ಸಿಬಂದಿಗೆ ಮಾಡಿದ ಅವಮಾನವಾಗಿದೆ. ಸಿಆರ್‌ಪಿಎಫ್ ಸಿಬಂದಿ ಯನ್ನು ಬಳಸಿಕೊಂಡು ದಾಳಿ ಮಾಡಲು ಸಚಿವರೇನು ಉಗ್ರ ಗಾಮಿಯೇ ಎಂದು ಜನಾರ್ದನ ಪೂಜಾರಿ ಪ್ರಶ್ನಿಸಿದರು.
ಐಟಿ ಇಲಾಖೆ ಯಾವುದೇ ಪಕ್ಷ ಅಥವಾ ವ್ಯಕ್ತಿಗೆ ಸೇರಿದ್ದಲ್ಲ. ನಾನು ಕೇಂದ್ರದ ಸಚಿವನಾಗಿದ್ದ ವೇಳೆ ಕಸ್ಟಮ್ಸ್, ಆದಾಯ ತೆರಿಗೆ ಇಲಾಖೆಗಳು ನನ್ನ ಸುಪರ್ದಿಯಲ್ಲಿದ್ದವು. ಆದರೆ ಯಾವುದೇ ಇಲಾಖೆಗಳನ್ನು ಈ ರೀತಿ ದುರುಪ ಯೋಗ ಪಡಿಸಿಕೊಂಡಿಲ್ಲ ಎಂದು ಅವರು ಹೇಳಿದರು.
ದುರುದ್ದೇಶದ ದಾಳಿ
ಈ ದಾಳಿ ದುರುದ್ದೇಶದಿಂದಲೇ ಕೂಡಿದೆ ಎಂದ ಅವರು, ಇಂದು ಡಿಕೆಶಿ ಯವರ ಮನೆ ಮೇಲೆ, ನಾಳೆ ಪೂಜಾರಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೇಲೆಯೂ ದಾಳಿ ಮಾಡಿಸು ತ್ತಾರೆ. ಹಾಗಾದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಯಾರೂ ಪ್ರಶ್ನಿಸು ವಂತೆಯೇ ಇಲ್ಲವೇ ಎಂದರು.
ಗುಜರಾತ್‌ನಲ್ಲಿ ಸ್ಪರ್ಧಿಸುತ್ತಿರುವ ಕರ್ನಾಟಕದ ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್ ಅವರನ್ನು ಸೋಲಿ ಸುವ ಹುನ್ನಾರವಾಗಿ ಇಂತಹ ದಾಳಿ ಗಳನ್ನು ನಡೆಸಲಾಗುತ್ತಿದೆ. ಆದರೆ ಕಾಂಗ್ರೆಸ್‌ನ್ನು ಸೋಲಿಸುವುದು ಪ್ರಧಾನಿ ಯವರಿಂದ ಸಾಧ್ಯವಿಲ್ಲ ಎಂದು ಪೂಜಾರಿ ತಿಳಿಸಿದರು.
ಹೋರಾಟಕ್ಕೆ ಬೆಂಬಲ
ಕಾವ್ಯಾ ನಿಗೂಢ ಸಾವಿನ ಕುರಿತಂತೆ ಆಕೆಯ ತಾಯಿಯೇ ಎಲ್ಲ ಉತ್ತರ ನೀಡಿದ್ದಾರೆ. ನಾನು ಮಾತನಾಡಿದರೆ ಜಾತಿ ರಾಜಕಾರಣ ಆರೋಪ ಬರ ಬಹುದು. ಆದರೂ ನ್ಯಾಯಕ್ಕಾಗಿ ನಡೆ ಯುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಸುದ್ದಿ ಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಕಾವ್ಯಾ ಸಾವಿನ ಕುರಿತಂತೆ ತನ್ನ ಶಿಷ್ಯ ಉಗ್ರಪ್ಪನವರು ತಮ್ಮ ಮಾತು ಗಳ ಮೂಲಕ ತನ್ನ ತಾಕತ್ತನ್ನು ತೋರಿ ಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಎಲ್ಲ ರೀತಿಯ ತನಿಖೆಗೆ ಮುಂದಾಗಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Flight; ಮಂಗಳೂರು – ಸಿಂಗಾಪುರ ನೇರ ವಿಮಾನ ಕೆಲ ಕಾಲ ಮುಂದಕ್ಕೆ?
Hassan-Mangaluru ಹಳಿ ದ್ವಿಗುಣ: ಅಂತಿಮ ಸ್ಥಳ ಸರ್ವೇಗೆ ಟೆಂಡರ್
ಕ್ಯುಆರ್ ಕೋಡ್ ಬದಲಿಸಿ ಬಂಕ್‌ಗೆ ಲಕ್ಷಾಂತರ ರೂ. ವಂಚನೆ
Tannirbhavi: ಜ. 11, 12ರ ಬೀಚ್ ಉತ್ಸವ, ಸ್ವಚ್ಛತೆ ಸುರಕ್ಷತೆಗೆ ಗರಿಷ್ಠ ಆದ್ಯತೆ: ಡಿಸಿ
Mangaluru ಎಚ್‌ಎಂಪಿ ವೈರಸ್; ಆತಂಕದ ಅಗತ್ಯವಿಲ್ಲ, ಚಳಿಗಾಲದಲ್ಲಿ ಶೀತ, ಜ್ವರ ಸಾಮಾನ್ಯ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.