ಮೊಬೈಲ್‌ನಲ್ಲಿಯೇ ಸಿಗಲಿದೆ ಸಿಆರ್‌ಝಡ್ ನಕ್ಷೆ
Team Udayavani, Aug 9, 2018, 3:32 PM IST
ಮಂಗಳೂರು: ಕಡಲ ತೀರದಲ್ಲಿ ಕರಾವಳಿ ನಿಯಂತ್ರಣ ವಲಯ(ಸಿಆರ್‌ಝಡ್) ವ್ಯಾಪ್ತಿಯಲ್ಲಿ ಭೂಮಿ ಇದೆಯೇ? ಯಾವು ದಾದರೂ ಅಭಿವೃದ್ಧಿ ಕೈಗೊಳ್ಳಲು ಅನು ಮತಿ ಬೇಕೆ? ಸಿಆರ್‌ಝಡ್ ರೇಖೆ ಯಾವ ಭಾಗದಲ್ಲಿ ಹಾದು ಹೋಗಿದೆ? ಇತ್ಯಾದಿ ಮಾಹಿತಿ ಇನ್ನು ಮೊಬೈಲ್ ಆ್ಯಪ್‌ನಲ್ಲೇ ಲಭ್ಯ.
ಸಾರ್ವಜನಿಕರು ಇದಕ್ಕಾಗಿ ಸರಕಾರಿ ಇಲಾಖೆಗಳಿಗೆ ಎಡತಾಕುವ ಅಗತ್ಯವಿಲ್ಲ. ಸಿಆರ್‌ಝಡ್ ನಕ್ಷೆಯ ಸಂಪೂರ್ಣ ಮಾಹಿತಿಯುಳ್ಳ ಮೊಬೈಲ್ ಆ್ಯಪ್ ಶೀಘ್ರವೇ ಬಿಡು ಗಡೆ ಯಾಗಲಿದೆ. ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯ ಇದನ್ನು ರೂಪಿಸುತ್ತಿದೆ.ಸಮುದ್ರದಿಂದ 500 ಮೀಟರ್‌ನ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಯಾವುದೇ ಚಟುವಟಿಕೆ ನಡೆಸಲು ಅಗತ್ಯವಿರುವ ಕಾನೂನು ಮಾಹಿತಿಯೂ ಆ್ಯಪ್‌ನಲ್ಲಿ ಲಭ್ಯವಿರಲಿದೆ. ಈ ಸಂಬಂಧ ಬೆಂಗಳೂರಿನ “ಕರ್ನಾಟಕ ಸ್ಟೇಟ್ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್’ ನಿಂದ ಮಾಹಿತಿ ಪಡೆದು ಆ್ಯಪ್ ಸಿದ್ಧಪಡಿಸಲು ಚಿಂತಿಸಲಾಗಿದೆ.
“ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ-2011′ ಅನುಷ್ಠಾನ ಸಂಬಂಧ ಹೊಸ ಕರಡು ನಕ್ಷೆಯನ್ನು ಸಾರ್ವಜನಿಕರ ಅಭಿಪ್ರಾಯದಂತೆ ಪರಿಷ್ಕರಿಸಿ ಕೇಂದ್ರ ಸಚಿವಾಲಯಕ್ಕೆ ರಾಜ್ಯ ಸರಕಾರ ಸಲ್ಲಿಸಿದ್ದು ಅನು ಮೋದನೆ ದೊರಕಿದೆ. ಆದರೆ ನಕ್ಷೆ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ನಕ್ಷೆಗೆ ಅನುಮೋದನೆ ನೀಡುವ ಸಂದರ್ಭದಲ್ಲೇ ನಕ್ಷೆ ಕುರಿತ ಮಾಹಿತಿ ಹಾಗೂ ನಕ್ಷೆ ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತಾಗಬೇಕು ಎಂದು ಸಚಿವಾಲಯ ತಿಳಿಸಿದೆ ಇದರೊಂದಿಗೆ ವೆಬ್‌ಸೈಟ್ ರಚಿಸಲು ಸೂಚಿಸಲಾಗಿದೆ.
ಈಗಿರುವುದು 96ರ ನಕ್ಷೆ
ಪ್ರಸ್ತುತ ಕರಾವಳಿ ಕರ್ನಾಟಕದಲ್ಲಿ 1996ರ ಸಿಆರ್‌ಝಡ್ ಅಧಿಸೂಚನೆಯ ನಕ್ಷೆ ಜಾರಿಯಲ್ಲಿದ್ದು, 2011ರ ಹೊಸ ನಕ್ಷೆ ತಯಾ ರಿಸು ವಂತೆ ದೇಶದ ಕರಾವಳಿ ತೀರದ ರಾಜ್ಯ ಗಳಿಗೆ ಸೂಚಿಸಲಾಗಿತ್ತು. ಕೇಂದ್ರ ಸಚಿ ವಾಲಯವು 2014ರ ಮಾ. 14ರಂದು ಚೆನ್ನೈಯ ನ್ಯಾಶನಲ್ ಸೆಂಟರ್ ಫಾರ್ ಸಸ್ಟನೇಬಲ್ ಕೋಸ್ಟಲ್ ಮ್ಯಾನೇಜ್‌ಮೆಂಟ್ (ಎನ್‌ಸಿಎಸ್‌ಸಿಎಂ) ಎಂಬ ಸಂಸ್ಥೆಯನ್ನು ಭರತ ರೇಖೆ (ಹೈಟೈಡ್ ಲೈನ್) ಹಾಗೂ ಇಳಿತ ರೇಖೆ (ಲೋ ಟೈಡ್ ಲೈನ್)ಗಳನ್ನು ಗುರುತಿಸಲು ಅಧಿಕೃತ ಸಂಸ್ಥೆಯನ್ನಾಗಿ ಆಯ್ಕೆ ಮಾಡಿತ್ತು. ರಾಜ್ಯದ ಕಡಲ ತೀರ ವಲಯ ನಿರ್ವಹಣಾ ಯೋಜನೆಗಳನ್ನು ತಯಾರಿಸಲು ರಾಜ್ಯ ಸರಕಾರವು ಎನ್‌ಸಿಎಸ್‌ಸಿಎಂಗೆ ಸೂಚಿಸಿತ್ತು. ಈ ಸಂಸ್ಥೆಯು, ರಾಜ್ಯದ ಕರಾವಳಿ ತೀರ ಅಧ್ಯಯನ, ಸ್ಥಳ ಪರಿಶೀಲನೆ ನಡೆಸಿ, ಕೆಲವು ತಿಂಗಳ ಹಿಂದೆ ಕರ್ನಾಟಕ ರಾಜ್ಯ ಕಡಲ ತೀರ ವಲಯ ನಿರ್ವಹಣಾ ಯೋಜನೆಯ ಕರಡು ಸಿದ್ಧಪಡಿಸಿತ್ತು. ಇದಕ್ಕೆ ಅನುಮೋದನೆ ದೊರಕಿದೆ. ಕರ್ನಾಟಕ ಹಾಗೂ ಒಡಿಶಾ ಮಾತ್ರ ಹೊಸ ನಕ್ಷೆ ಸಿದ್ಧಗೊಳಿಸಿ ಕೇಂದ್ರ ಸಚಿವಾಲಯಕ್ಕೆ ನೀಡಿವೆ.
9 ತಿಂಗಳಿಂದ ಸ್ಥಗಿತವಾಗಿದ್ದ ಎನ್‌ಒಸಿಗೆ ತಾತ್ಕಾಲಿಕ ಒಪ್ಪಿಗೆ
ಸಿಆರ್‌ಝಡ್ ನಕ್ಷೆ ಸಿದ್ಧವಾಗುವವರೆಗೆ “ಕರಾವಳಿ ನಿಯಂತ್ರಣ ವಲಯ ನಿರಾಕ್ಷೇಪಣಾ ಪತ್ರ’ ನೀಡಲು ರಾಷ್ಟ್ರೀಯ ಹಸಿರು ನ್ಯಾಯಪೀಠವು ಕಳೆದ ನ. 22ರಂದು ನಿರ್ಬಂಧ ಹೇರಿತ್ತು. ಇದರಿಂದಾಗಿ ದ.ಕ. ಜಿಲ್ಲೆಯ ಸುಮಾರು 85 ಮತ್ತು ಉಡುಪಿಯ ಸುಮಾರು 120ರಷ್ಟು ಅರ್ಜಿಗಳು ಬಾಕಿ ಉಳಿದಿದ್ದವು. ಗೃಹ ನಿರ್ಮಾಣ ಚಟುವಟಿಕೆಗಳೂ ಸ್ಥಗಿತಗೊಂಡಿತ್ತು. ಆದರೆ ರಾಜ್ಯದಿಂದ ಸಲ್ಲಿಕೆಯಾದ ನಕ್ಷೆಯನ್ನು ಮೇ 24ರಂದು ಕೇಂದ್ರ ಸರಕಾರ ಮೂಲ ರೂಪದಲ್ಲಿ ಅನುಮೋದಿಸಿ ಜು. 18ರಂದು ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯದ ಸಭೆಯಲ್ಲಿ ಅಂತಿಮಗೊಳಿಸಲಾಗಿದೆ. ಆದರೆ ಆದೇಶ ಪ್ರತಿ ಇನ್ನಷ್ಟೇ ದೊರೆಯಬೇಕಿದೆ. ದ.ಕ. ಜಿಲ್ಲೆಯಲ್ಲಿ ಎನ್‌ಒಸಿ ಸಿಗದೆ ಸಮಸ್ಯೆ ಎದುರಾದ ಕಾರಣ ಬುಧವಾರದಿಂದ ತಾತ್ಕಾಲಿಕವಾಗಿ ನೀಡಲು ನಿರ್ಧರಿಸಲಾಗಿದೆ ಎಂದು ಪರಿಸರ ಇಲಾಖೆಯ ದ.ಕ. ಜಿಲ್ಲಾ ಪ್ರಾದೇಶಿಕ ನಿರ್ದೇಶಕರಾದ ಡಾ| ದಿನೇಶ್ ಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.