ಕುಕ್ಕೆ ರುದ್ರಭೂಮಿ ಸಮಸ್ಯೆಗಳ ಆಗರ, ಮಂಜೂರಾಗಿಲ್ಲ ವಿದ್ಯುತ್ ಚಿತಾಗಾರ
Team Udayavani, Jan 5, 2018, 2:50 PM IST
ಸುಬ್ರಹ್ಮಣ್ಯ: ಸದ್ಯದ ಸ್ಥಿತಿಯಲ್ಲಿ ಸತ್ತ ಮೇಲೂ ಇಲ್ಲಿ ಮುಕ್ತಿ ಸಿಗುವ ಲಕ್ಷಣವಿಲ್ಲ. ಏಕೆಂದರೆ ಮುಕ್ತಿಗೆ ರಹದಾರಿಯಾದ ಶವಸಂಸ್ಕಾರಕ್ಕೆ ಜಾಗವಿದ್ದರೂ ಸರಿಯಾದ ವ್ಯವಸ್ಥೆ ಇಲ್ಲಿಲ್ಲ. ಮುಕ್ತಿಧಾಮದ ಸಮಸ್ಯೆಗಳಿಗೇ ಮೊದಲು ಮುಕ್ತಿ ಸಿಗಬೇಕಿದೆ.
ಬೆಳೆಯುತ್ತಿರುವ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಹೆಣ ಸುಡಲು ಸೂಕ್ತ ವ್ಯವಸ್ಥೆ ಇಲ್ಲ ಎಂದರೆ ಅಚ್ಚರಿಯಾದೀತು. ಇಲ್ಲಿ ಆಧುನಿಕ ವಿದ್ಯುತ್ ಶವಾಗಾರದ ಅಗತ್ಯವಿದೆ. ಆದರೆ, ಅದು ಈಡೇರುವ ಸಾಧ್ಯತೆ ಕಡಿಮೆ. ಉರುವಲು ಚಿತಾಗಾರಕ್ಕೇ ತೃಪ್ತಿಪಟ್ಟುಕೊಳ್ಳಬೇಕಿದೆ. ಅದರ ನಿರ್ಮಾಣ ಕಾರ್ಯವೂ ಆಮೆಗತಿಯಲ್ಲಿ ಸಾಗಿದೆ.
ಸುಬ್ರಹ್ಮಣ್ಯ ಗ್ರಾ.ಪಂ. ವ್ಯಾಪ್ತಿಯ ಇಂಜಾಡಿ ಬಳಿ ಸ್ಥಳಿಯಾಡಳಿತ ನಿರ್ವಹಣೆಯಲ್ಲಿ ಸಾರ್ವಜನಿಕ ಹಿಂದೂ ರುದ್ರಭೂಮಿ ಇದೆ. ಒಟ್ಟು ಒಂದು ಎಕರೆ ಭೂಮಿಯಲ್ಲಿ ಕೇವಲ 10 ಸೆಂಟ್ಸ್ ಸ್ಥಳದಲ್ಲಿ ಸ್ಮಶಾನಕ್ಕೆ ಮೀಸಲಿಟ್ಟಿದೆ. ಉಳಿದ ಸ್ಥಳದಲ್ಲಿ ಘನತ್ಯಾಜ್ಯ ಘಟಕ ಸಹಿತ ನಗರದ ತ್ಯಾಜ ಸಂಗ್ರಹಿಸಿಡಲಾಗುತ್ತಿದೆ. ಜಾಗದ ಕೊರತೆ ಸಹಿತ ಸೂಕ್ತ ವ್ಯವಸ್ಥೆ ಇಲ್ಲದೆ ರುದ್ರಭೂಮಿ ಸೊರಗುತ್ತಿದೆ.
ಶವ ಎದ್ದು ಬಂದರೂ ಅಚ್ಚರಿಯಿಲ್ಲ!
ರುದ್ರಭೂಮಿ ಗಿಡಗಂಟಿಗಳಿಂದ ತುಂಬಿದೆ. ಪಕ್ಕದಲ್ಲೆ ತ್ಯಾಜ್ಯ ಘಟಕವಿದೆ. ತ್ಯಾಜ್ಯಗಳ ರಾಶಿ ನಡುವೆ ರುದ್ರಭೂಮಿಗೆ ತೆರಳಲು ಸರಿಯಾದ ದಾರಿ ಕೂಡ ಇಲ್ಲ. ನೀರು, ರಸ್ತೆ ಸಂಪರ್ಕ ಇಲ್ಲಿನ ಪ್ರಮುಖ ಸಮಸ್ಯೆಗಳು. ಜತೆಗೆ ತ್ಯಾಜ್ಯ ರಾಶಿ ವಾಸನೆಗೆ ಶವಗಳೇ ಎದ್ದು ಬಂದರೂ ಅಚ್ಚರಿಯಿಲ್ಲ.
ಅರೆಬೆಂದ ಶವಗಳು!
ಸುತ್ತ ಬೆಳೆದಿರುವ ಪೊದೆಗಳನ್ನು ಸರಿಸಿ ಕಟ್ಟಿಗೆ ರಾಶಿ ಹಾಕಿ ಶವಸಂಸ್ಕಾರ ನಡೆಸಬೇಕು. ಕಟ್ಟಿಗೆ ಸಂಗ್ರಹವೂ ದೊಡ್ಡ ಸವಾಲಾಗಿದೆ. ಶವ ಸಂಸ್ಕಾರ ನೆರವೇರಿಸಿದ ಬಳಿಕ ಸಂಬಂಧಪಟ್ಟವರು ಶವ ಸಂಪೂರ್ಣ ಬೂದಿಯಾಗುವ ತನಕ ಕಾಯದೆ, ಸ್ವತ್ಛಗೊಳಿಸದೆ ಹೋಗುವುದರಿಂದ ಅರೆಬೆಂದ ಶವಗಳ ಭಾಗಗಳನ್ನು ನಾಯಿಗಳು ಎಳೆದಾಡಿ ಪರಿಸರದೆಲ್ಲೆಡೆ ದುರ್ನಾತ ಹರಡಿ ಚಿಂತಾಜನಕ ಸ್ಥಿತಿ ಇದೆ. ಈ ಸಮಸ್ಯೆ ಮಳೆಗಾಲದ ಅವಧಿಯಲ್ಲಿ ಹೆಚ್ಚು. ಸ್ಥಳಿಯ ದೇಗುಲ ಹಾಗೂ ಸ್ಥಳಿಯಾಡಳಿತ ಜಂಟಿಯಾಗಿ ತಲಾ ಐದು ಲಕ್ಷ ರೂ. ವೆಚ್ಚದಲ್ಲಿ ಉರುವಲು ಬಳಕೆಯ ಚಿತಾಗಾರ ಒದಗಿಸಲು ಉದ್ದೇಶಿಸಿದೆ. ಸ್ಥಳಿಯಾಡಳಿತ ಅಲ್ಪ ಹಣ ಮೀಸಲಿಟ್ಟು ಉದ್ಯೋಗ ಖಾತರಿಯಲ್ಲಿ ಕೆಲಸ ನಿರ್ವಹಿಸಿ ಕಟ್ಟಡ ನಿರ್ಮಿಸಲು ಹೊರಟಿದೆ. ಅದು ಇನ್ನೂ ಪೂರ್ಣ ಹಂತಕ್ಕೆ ತಲುಪಿಲ್ಲ. ದೇಗುಲದ 5 ಲಕ್ಷ ರೂ. ಅನುದಾನದಲ್ಲಿ ಕಟ್ಟಡದ ಒಳಗೆ ದಹನಕ್ಕೆ ಅನುಕೂಲವಾಗುವ ಎರಡು ಸಿಲಿಕಾನ್ ಛೇಂಬರ್ ಅಳವಡಿಕೆ ಆಗಲಿದೆ.
ಸ್ವಚ್ಛತೆಗೆ ಧಕ್ಕೆ
ಸುಬ್ರಹ್ಮಣ್ಯ ಗ್ರಾ.ಪಂ. ಘನತ್ಯಾಜ್ಯ ವಿಲೇವಾರಿ ಹಾಗೂ ದ್ರವ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವ ಮೂಲಕ ಸ್ವಚ್ಛತೆಯ ವಿಚಾರದಲ್ಲಿ ಒಂದಷ್ಟು ಕ್ರಮಗಳನ್ನು ಕೈಗೊಂಡಿದೆ. ಆದರೆ ಶವಸಂಸ್ಕಾರ ವ್ಯವಸ್ಥೆ ಸಮರ್ಪಕ ರೀತಿಯಲ್ಲಿ ನಡೆಯದಿದ್ದರೆ ಗ್ರಾಮದ ಸ್ವಚ್ಛತೆಗೆ ಧಕ್ಕೆ ಉಂಟಾಗಬಹುದು. ಹೀಗಾಗಿ ಆಧುನಿಕ ವಿದ್ಯುತ್ ಶವಾಗಾರ ಇಲ್ಲಿಗೆ ಆವಶ್ಯಕ.
ಎಂ.ಆರ್.ಎಚ್. ಮಾದರಿ
ಜಿಲ್ಲೆಯಲ್ಲಿ ರುದ್ರಭೂಮಿಗೆ ಹೊಸ ಪರಿಕಲ್ಪನೆ ಕೊಟ್ಟವರು ಮೂಲ್ಕಿಯ ಸಮಾಜ ಸೇವಕ ದಿವಂಗತ ಎಂ.ಆರ್.ಎಚ್. ಪೂಂಜಾ. ಮೊದಲ ಬಾರಿಗೆ ಮೂಲ್ಕಿಯಲ್ಲಿ 1995ರಲ್ಲಿ ಅಸ್ತಿತ್ವಕ್ಕೆ ತಂದರು. ಇದರಿಂದ ಪ್ರೇರಣೆ ಹೊಂದಿದ ಡಾ| ವೀರೇಂದ್ರ ಹೆಗ್ಗಡೆ ಶ್ರೀ ಕ್ಷೇ.ಧ.ಗ್ರಾ.ಯೋ.ಮೂಲಕ ಜಿಲ್ಲೆಯ ಎಲ್ಲ ರುದ್ರಭೂಮಿಗಳ ನವೀಕರಣಕ್ಕೆ ಧನ ಸಹಾಯ ನೀಡಲು ಮುಂದಾಗಿದ್ದರು. ಅದರಂತೆ ಕುಕ್ಕೆ ಸುಬ್ರ ಹ್ಮಣ್ಯದ ರುದ್ರ ಭೂಮಿಗೂ ಸಹಾಯ ನೀಡಲು ಸಿದ್ಧರಿದ್ದರು. ಆದರೆ ಸುಬ್ರಹ್ಮಣ್ಯದಲ್ಲಿ ಮುಜರಾಯಿ ಇಲಾಖೆಯ ಹೆಚ್ಚು ಆದಾಯ ತರುವ ದೇಗುಲವಿದೆ. ದೇಗುಲದ ವತಿಯಿಂದ ಆಧುನಿಕ ಚಿತಾಗಾರ ಹೊಂದುವ ಕುರಿತು ಚಿಂತನೆಗಳು ನಡೆದು, 5 ಲಕ್ಷ ರೂ. ನೆರವು ನೀಡಲು ಒಪ್ಪಿಗೆ ಸೂಚಿಸಿದೆ. ಕಡತ ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಿಕೊಡಲಾಗಿದೆ.
ಅನುದಾನ ಇನ್ನೂ ದೊರೆತಿಲ್ಲ
ಸರಕಾರವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ರುದ್ರಭೂಮಿ ಹಾಗೂ ಆಧುನಿಕ ಚಿತಾಗಾರ ಹೊಂದಲು ಕೋಟಿಗಳ ಲೆಕ್ಕದಲ್ಲಿ ಅನುದಾನಗಳನ್ನು ಮೀಸಲಿರಿಸುತ್ತಿದೆ. ಆದರೆ ಸರಕಾರದ ಬೊಕ್ಕಸಕ್ಕೆ ಕೋಟಿ ಹಣ ನೀಡುವ
ದೇಗುಲವಿರುವ ಊರಿನಲ್ಲಿ ಸುಸಜ್ಜಿತ ಚಿತಾಗಾರ ಸ್ಥಾಪಿಸಲು ಸರಕಾರ ಉದಾಸೀನ ತೋರುತ್ತಿದೆ. ಪ್ರಸ್ತುತ ಆರ್ಥಿಕ ವರ್ಷ ಕೊನೆಗೊಳ್ಳುವ ಹಂತಕ್ಕೆ ಬಂದಿದೆ. ಅನುದಾನ ಇನ್ನೂ ದೊರೆತಿಲ್ಲ, ಭರವಸೆ ಮಾತ್ರ ಬಂಡೆಕಲ್ಲಿನ ಮೇಲೆ ನೀರು ಸುರಿದಂತೆ ಆಗಿದೆ.
ಜಂಟಿಯಾಗಿ ನಿರ್ಮಾಣ
ನೂತನ ವಿದ್ಯುತ್ ಚಿತಾಗಾರಕ್ಕಾಗಿ ಅಂದಾಜು ಪಟ್ಟಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ. ದೇಗುಲದ 5 ಲಕ್ಷ ಹಾಗೂ ಸ್ಥಳಿಯಾಡಳಿತದ 5 ಲಕ್ಷ ಹೀಗೆ ಒಟ್ಟು 10 ಲಕ್ಷ ರೂ. ಅನುದಾನದಲ್ಲಿ ಚಿತಾಗಾರ ನಿರ್ಮಿಸಲಾಗುತ್ತಿದೆ. ಹಂತಹಂತದ ಅನುದಾನ ಬಳಕೆ ಆಗುತ್ತಿರುವುದರಿಂದ ತಡವಾಗುತ್ತಿದೆ.
– ಯು.ಡಿ ಶೇಖರ.
ಪಿಡಿಒ, ಗ್ರಾ.ಪಂ ಸುಬ್ರಹ್ಮಣ್ಯ
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Derogatory Term: ರಾಜಭವನ ಅಂಗಳಕ್ಕೆ ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್- ಸಿ.ಟಿ.ರವಿ ವಾಗ್ವಾದ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Session: ಹೊಸ ವರ್ಷಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ “ಕೈ’ ಹಾಕಲಿದೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.