ಹಡಿಲು ಬಿದ್ದ ಗದೆಯಲ್ಲಿ ಭತ್ತ ಬೇಸಾಯ
Team Udayavani, Oct 26, 2018, 10:13 AM IST
ಬೆಳಂದೂರು: ನಿವೃತ್ತ ಸೈನಿಕ ಹಾಗೂ ನಿವೃತ್ತ ಕೆಸ್ಸಾರ್ಟಿಸಿ ಚಾಲಕ ತನ್ನ ನಿವೃತ್ತಿ ಜೀವನದಲ್ಲಿ ಭತ್ತದ ಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ. ಭಾರತದ ಗಡಿಯಲ್ಲಿ ಇಪ್ಪತ್ತು ವರ್ಷಗಳ ಕಾಲ ಸೈನಿಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ ಆನಂತರ ಕೆಎಸ್ಸಾರ್ಟಿಸಿ ಚಾಲಕರಾಗಿ ಕರ್ತವ್ಯಕ್ಕೆ ಸೇರಿ ಅಲ್ಲಿಯೂ ನಿವೃತ್ತಿಯಾದ ಕುದ್ಮಾರು ಗ್ರಾಮದ ಕಾರ್ಲಾಡಿ ತನಿಯಪ್ಪ ನಾಯ್ಕ ಅವರು ತಮ್ಮ ಪಾರಂಪರಿಕ ಕೃಷಿಯನ್ನು ಮಂದುವರಿಸಿಕೊಂಡು ಹೋಗುತ್ತಿದ್ದಾರೆ. ಭತ್ತದ ಗದ್ದೆಗಳೇ ಇದ್ದ ಪ್ರದೇಶದಲ್ಲಿ ಬೆಳೆದ ಅವರಿಗೆ ಕೃಷಿ ಚಟುವಟಿಕೆಗಳ ಬಗ್ಗೆ ತಿಳಿದಿತ್ತು ಮತ್ತು ಆ ಬಗ್ಗೆ ಅವರಿಗೆ ಉತ್ಸಾಹವೂ ಇತ್ತು. ಅದನ್ನವರು ನಿವೃತ್ತರಾದ ಬಳಿಕ ಮುಂದುವರಿಸಿರುವುದು ಮಾದರಿ.
ಪರಂಪರಾಗತ ಬೆಳೆ ಮರೆಯದಿರೋಣ
ಪ್ರಸ್ತುತ ಹೆಚ್ಚಿನ ಜನ ವಾಣಿಜ್ಯ ಬೆಳೆಗಳತ್ತ ಆಕರ್ಷಿತರಾಗಿ ಭತ್ತದ ಬೆಳೆಯತ್ತ ನಿರ್ಲಕ್ಷ್ಯ ತೋರುತ್ತಿದ್ದಾರೆ. ಕೃಷಿ ಕಾರ್ಮಿಕರ ಕೊರತೆ, ನೀರಿನ ವ್ಯವಸ್ಥೆ, ತೆನೆಗೆ ಬಾಧಿಸುವ ವಿವಿಧ ರೋಗಗಳು ಹಾಗೂ ಕಡಿಮೆ ಲಾಭಾಂಶ ಕೃಷಿಕ ಭತ್ತದ ಬೆಳೆಯಿಂದ ದೂರ ಉಳಿಯುವಂತಾಗಿದೆ. ಆದರೂ ಪರಂಪರಾಗತ ಕೃಷಿಯನ್ನು ಮರೆತರೆ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವ ತನಿಯಪ್ಪ ನಾಯ್ಕ ಅವರು, ವಾಣಿಜ್ಯ ಬೆಳೆಗಳ ವ್ಯಾಮೋಹದಲ್ಲಿ ನಾವು ಆಹಾರ ಬೆಳೆಯನ್ನು ಬೆಳೆಯುವುದನ್ನು ನಿಲ್ಲಿಸುವುದು ಆಘಾತಕಾರಿ ಬೆಳವಣಿಗೆ ಎನ್ನುತ್ತಾರೆ. ಆಯಾ ಕುಟುಂಬಕ್ಕೆ ಬೇಕಾಗುವ ಅಕ್ಕಿಯನ್ನು ಅವರೇ ಬೆಳೆದರೆ ವಿಷಯುಕ್ತ ಆಹಾರದಿಂದ ದೂರವಿರಲು ಸಾಧ್ಯ. ಪಾಳು ಬಿದ್ದಿದ್ದ ಸುಮಾರು ಒಂದು ಎಕ್ರೆ ಗದ್ದೆಯಲ್ಲಿ ಎರಡು ವರ್ಷಗಳಿಂದ ಅವರು ಬೇಸಾಯ ಮಾಡುತ್ತಿದ್ದು, ಉತ್ತಮ ತಾವು ಬೆಳೆದ ಭತ್ತದ ಪೈರಿನ ನಡುವೆ ನಿವೃತ್ತ ಸೈನಿಕ ತನಿಯಪ್ಪ ನಾಯ್ಕ. ಇಳುವರಿ ಪಡೆಯುತ್ತಿದ್ದಾರೆ.
ಇಳುವರಿ ಸಾಧ್ಯ
ನಾಟಿಯಿಂದ ಹಿಡಿದು ಕಟಾವು ತನಕ ಸೂಕ್ಷ್ಮತೆ ಹಾಗೂ ಸಂಯಮದಿಂದ ಬೆಳೆಸಬೇಕಾಗುತ್ತದೆ. ಭತ್ತದ ಗದ್ದೆಗಳಿಗೆ ಪಕ್ಷಿಗಳ ಉಪಟಳ ಹೆಚ್ಚು. ಜತೆಗೆ ನವಿಲುಗಳ ಹಿಂಡು, ಕಾಡು ಹಂದಿ, ಇಲಿ, ಹೆಗ್ಗಣಗಳಿಂದ ಬೆಳೆ ನಾಶವಾಗುವ ಭೀತಿಯೂ ಇದೆ. ಪರಿಶ್ರಮ, ಜಾಗರೂಕತೆಯಿಂದ ಭತ್ತ ಬೆಳೆದರೆ ಇಳುವರಿ ಪಡೆಯಲು ಸಾಧ್ಯ ಎನ್ನುತ್ತಾರೆ ತನಿಯಪ್ಪ .
ಎಲ್ಲರಿಗೂ ಮಾದರಿ
ಸರಕಾರಿ ಉದ್ಯೋಗದಿಂದ ನಿವೃತಿ ಪಡೆದ ಹೆಚ್ಚಿನವರು ವಿಶ್ರಾಂತ ಜೀವನ ನಡೆಸಲು ಇಷ್ಟಪಡುತ್ತಾರೆ. ಆದರೆ, ತನಿಯಪ್ಪ ನಾಯ್ಕ ಅವರು ಇದಕ್ಕೆ ವ್ಯತಿರಿಕ್ತವಾಗಿ ಹಡೀಲು ಬಿದ್ದ ಗದ್ದೆಯಲ್ಲಿ ಭತ್ತದ ಬೇಸಾಯ ಮಾಡುತ್ತಿದ್ದಾರೆ. ಊರಿನಲ್ಲೇ ಇದ್ದು, ಕಾಡು ಪ್ರಾಣಿಗಳು, ಕೀಟಬಾಧೆ ಇತ್ಯಾದಿ ಹಲವು ಸಮಸ್ಯೆಗಳ ನಡುವೆಯೂ ಯಶಸ್ವಿಯಾಗಿ ಕೃಷಿ ಮಾಡುತ್ತಿದ್ದಾರೆ. ಊರಿನಲ್ಲಿ ಭತ್ತದ ಗದ್ದೆಗಳನ್ನು ಹಡೀಲು ಬಿಟ್ಟವರಿಗೆ ಪುನಃ ಭತ್ತ ಬೆಳೆಯಲು ಪ್ರೇರಣೆಯಾಗಿದ್ದಾರೆ.
– ಸುಬ್ರಹ್ಮಣ್ಯ ಬರೆಪ್ಪಾಡಿ ಸ್ಥಳೀಯರು
ಪ್ರವೀಣ್ ಚೆನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.