‘ತುಳು ಭಾಷೆಯಿಂದ ಸಂಸ್ಕೃತಿ ಉಳಿಯಬಲ್ಲದು’
Team Udayavani, Jan 4, 2018, 12:18 PM IST
ಆರಂಬೋಡಿ: ತುಳು ಸಂಸ್ಕೃತಿ ಸುಮಾರು 16 ಬುಡಕಟ್ಟುಗಳಿಂದಾಗಿ ಬಂದಿದೆಯೇ ಹೊರತು ವೈದಿಕ ನೆಲೆಗಟ್ಟಿನಲ್ಲಿ ಅಲ್ಲ. ತುಳು ಭಾಷೆ ಆಡುವುದರಿಂದ ಮಾತ್ರ ತುಳು ಸಂಸ್ಕೃತಿ ಉಳಿಯಬಲ್ಲದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಗೋಪಾಲ ಅಂಚನ್ ಹೇಳಿದರು.
ಆರಂಬೋಡಿ ಸ.ಹಿ.ಪ್ರಾ. ಶಾಲೆಯಲ್ಲಿ ನಡೆದ ತುಳು ಸಂಸ್ಕೃತಿ- ಸಂಭ್ರಮ ಕಾರ್ಯಕ್ರಮವನ್ನು ಪಿಂಗಾರ ಅರಳಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ತುಳು ಭಾಷೆಯನ್ನು ಭಾಷಣ,
ತರಕಾರಿ, ಕಿರಾಣಿ ಅಂಗಡಿಯಲ್ಲಿ ಮಾತನಾಡುವುದಕ್ಕೆ ಮಾತ್ರ ಸೀಮಿತಗೊಳಿಸದೆ ಅದನ್ನು ಕಚೇರಿಗಳಿಗೆ, ಸಾರ್ವಜನಿಕ ಕೇಂದ್ರಗಳಲ್ಲಿ ಉಪಯೋಗಿಸಬೇಕು. ತುಳು ಭಾಷಾ ಪಠ್ಯ ಈಗಾಗಲೇ ಸರಕಾರಿ ಶಾಲೆಗಳಲ್ಲಿ ಅಳವಡಿಸಲಾಗಿದೆ. ತುಳು ನೆಲ, ಜಲ, ಅನ್ನವನ್ನು ಸ್ವೀಕರಿಸುವ ಖಾಸಗಿ ಶಾಲೆಗಳ ಮಕ್ಕಳಿಗೂ ಅದು ಪಠ್ಯವಾಗಿ
ಬರಬೇಕು ಎಂದರು.
ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಪೂಂಜದ ಪ್ರಧಾನ ಅರ್ಚಕ ಪಿ. ಅನಂತ ಆಚಾರ್ಯ ವಹಿಸಿದ್ದರು. ಮುಖ್ಯ ಅತಿಥಿ
ಗಳಾಗಿ ಧ.ಗ್ರಾ. ಯೋಜನೆಯ ಅಧಿಕಾರಿ ಜಯಕರ ಶೆಟ್ಟಿ, ಮೂಡ ಬಿದಿರೆ ಎಸ್. ಎನ್.ಎಂ. ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಜೆ.ಜೆ. ಪಿಂಟೋ, ಆರಂಬೋಡಿ ಗ್ರಾ.ಪಂ. ಉಪಾಧ್ಯಕ್ಷೆ ಆಶಾ ಎಸ್. ಶೆಟ್ಟಿ, ಒಕ್ಕೂಟದ ಅಧ್ಯಕ್ಷ ಸತೀಶ್ ಪಾಡ್ಯಾರ್, ಸೇವಾ ಪ್ರತಿನಿಧಿ ಪ್ರಮೀಳಾ ಉಪಸ್ಥಿತರಿದ್ದರು.
ಸಾಧಕರಿಗೆ ಸಮ್ಮಾನ
ಕಂಬಳದ ಓಟಗಾರ ಕುಟ್ಟಿ ಶೆಟ್ಟಿ ಹಕ್ಕೇರಿ, ನಾದಸ್ವರ ವಾದಕ ಕೃಷ್ಣ ಸನಿಲ್, ಹವ್ಯಾಸಿ ತುಳು ನಾಟಕ ಕಲಾವಿದ ಅಬ್ದುಲ್ ಹಕೀಮ್, ಕಾಷ್ಠಶಿಲ್ಪಿ ಕೃಷ್ಣಯ್ಯ ಆಚಾರ್ಯ, ತುಳು ಚಿತ್ರನಟ ಚಂದ್ರಶೇಖರ ಸಿದ್ಧಕಟ್ಟೆ ಅವರನ್ನು ಸಮ್ಮಾನಿಸಲಾಯಿತು. ಬಳಿಕ ವಿಚಾರ ಗೋಷ್ಠಿಗಳು ನಡೆದವು. ಸಂಯೋಜಕ ರಾಮ್‌ಪ್ರಸಾದ್ ಸ್ವಾಗತಿಸಿ, ಮೂಡಬಿದಿರೆ ಆಳ್ವಾಸ್ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ| ಯೋಗೀಶ್ ಕೈರೋಡಿ ಆಶಯ ನುಡಿಗಳನ್ನಾಡಿದರು. ಸಂತೋಷ್ ಕುಲಾಲ್ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿ, ಉಮೇಶ್ ಶೆಟ್ಟಿ ಪಾಲ್ಯ ವಂದಿಸಿದರು.
ತುಳು ಸಂಸ್ಕೃತಿಯಂತೆ ಮನೆಗೆ ಬಂದ ಅತಿಥಿಗಳಿಗೆ ಕೈಕಾಲು ತೊಳೆಯಲು ನೀರು ಕೊಡುವುದು, ಬಾಯಾರಿಕೆ
ನಿವಾರಿಸಲು ಬೆಲ್ಲ-ನೀರು ಕೊಡುವ ಸಂಪ್ರದಾಯ ಈಗ ತುಳುನಾಡಿನ ಪೇಟೆಗಳಲ್ಲಂತೂ ಇಲ್ಲವೇ ಇಲ್ಲ. ಕೋಕಾಕೋಲಾ, ಪೆಪ್ಸಿ, ಮಾಝಾಗಳು ಅವುಗಳ ಸ್ಥಾನ ತುಂಬಿವೆ.
–ಗೋಪಾಲ ಅಂಚನ್
ತುಳು ಸಾ. ಅ. ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.