“ಭಾಷಾ ಶ್ರೀಮಂತಿಕೆಯಿಂದ ಸಂಸ್ಕೃತಿ ಜೀವಂತ’

ಧರ್ಮಸ್ಥಳ: ಅಂಚೆ-ಕುಂಚ ಸ್ಪರ್ಧೆ ವಿಜೇತರಿಗೆ ಪುರಸ್ಕಾರ

Team Udayavani, May 6, 2019, 6:22 AM IST

basha-srimantike

ಬೆಳ್ತಂಗಡಿ: ಮೌಲ್ಯಾ ಧಾರಿತ ಗ್ರಂಥಗಳ ಪ್ರಕಟನೆ ಮತ್ತು ಓದುವ ಹವ್ಯಾಸ ಕಡಿಮೆಯಾಗುತ್ತಿರುವುದರಿಂದ ನಮ್ಮ ಸಂಸ್ಕೃತಿಯೆಡೆಗಿನ ಒಲವು ಮರೆಯಾಗುತ್ತಿದೆ. ಮೂಲ ಭಾಷೆ ಶ್ರೀಮಂತಗೊಂಡಲ್ಲಿ ಸಂಸ್ಕೃತಿ ಅಜರಾಮರವಾಗಿರಲು ಸಾಧ್ಯ ಎಂದು ಖ್ಯಾತ ಚಲನಚಿತ್ರ ಕಲಾವಿದ ಮುಖ್ಯಮಂತ್ರಿ ಚಂದ್ರು ಹೇಳಿದರು.

ಶಾಂತಿವನ ಟ್ರಸ್ಟ್‌ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ಇತ್ತೀಚೆಗೆ ಆಯೋಜಿಸಿದ್ದ 17ನೇ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಯ ವಿಜೇತರಿಗೆ ರವಿವಾರ ಧರ್ಮಸ್ಥಳದಲ್ಲಿ ಪುರಸ್ಕಾರ ವಿತರಿಸಿ ಅವರು ಮಾತನಾಡಿದರು.
ದೇಶದಲ್ಲಿರುವ ಭಾಷೆಯ ವಿಶೇಷತೆ, ಅವುಗಳಲ್ಲಿ ಅಡಕವಾಗಿರುವ ಸಂಪ್ರದಾಯಗಳು ಜೀವನ ಪದ್ಧತಿಯಲ್ಲಿ ಏಕತೆಯನ್ನು ಕಂಡುಕೊಂಡಿವೆ.

ಪ್ರಪಂಚದಲ್ಲಿರುವ 6 ಸಾವಿರ ಭಾಷೆಗಳಲ್ಲಿ 2 ಸಾವಿರಕ್ಕಿಂತ ಹೆಚ್ಚು ಭಾರತದ ಲ್ಲಿವೆ. ಗ್ರಾಮೀಣ ಜನರು ಶುದ್ಧ ಕನ್ನಡ ಮಾತನಾಡುತ್ತಾರೆ. ಯಕ್ಷಗಾನದಲ್ಲಿ ಮತ್ತು ಜನಪದ ಸಾಹಿತ್ಯದಲ್ಲಿ ಭಾಷೆಯ ಸೊಗಡು ಜತೆಗೆ ಭಾಷಾ ಪ್ರೌಢಿಮೆ ಇದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗೆ ಜೈನರ ಕೊಡುಗೆಯನ್ನು ಶ್ಲಾಘಿಸಿದ ಚಂದ್ರು ಅವರು, ಹೃದಯ ಶ್ರೀಮಂತಿಕೆ, ಭಾಷಾ ಶ್ರೀಮಂತಿಕೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಭಾಷೆ ನಾಶವಾದರೆ ಸಂಸ್ಕೃತಿಯೂ ನಾಶವಾದಂತೆೆ. ಅದನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.

ಭಾವನೆ ಅಭಿವ್ಯಕ್ತಿಗೆ ಕಲೆಯ ಪ್ರೀತಿಸಿ
ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಸೃಜನಾತ್ಮಕ ಮತ್ತು ವಾಸ್ತವಿಕ ಕಲೆ ಎಲ್ಲರಲ್ಲೂ ಇರುವಂತಹದು. ಅದನ್ನು ಕಲ್ಪನೆಯಿಂದ ವಿಸ್ತರಿಸುವುದರಿಂದ ಸಾಧಕರಾಗಿ ಗುರುತಿಸಿಕೊಳ್ಳುತ್ತಾರೆ. ಕಲೆಗೆ ಪ್ರಚಂಡ ಶಕ್ತಿಯಿದೆ. ಮಾರಾಟ ಕ್ಕಾಗಿ ಕಲೆಯನ್ನು ಪ್ರೀತಿಸದೆ ಭಾವನೆ ವ್ಯಕ್ತಪಡಿಸಲು, ಆನಂದ ಪ್ರಕಟ ಗೊಳಿಸಲು ಪ್ರೀತಿಸಿ ಎಂದು ಸಲಹೆ ನೀಡಿದರು.

ಶುಭಾಶಂಸನೆ ಮಾಡಿದ ಗಂಜೀಫಾ ರಘುಪತಿ ಭಟ್‌, ಧರ್ಮಸ್ಥಳವು ಬೇಡಿ ಬಂದವರಿಗೆ ಪರಿಹಾರ ನೀಡುವ ಕ್ಷೇತ್ರವಾಗಿದೆ. ಗಂಜೀಫಾ ಕಲೆಗೆ ಹೆಗ್ಗಡೆಯವರು ನೀಡಿದ ಪ್ರೋತ್ಸಾಹ ಮತ್ತು ಬೆಂಬಲ ನನ್ನನ್ನು ವಿಶ್ವದಾದ್ಯಂತ ಗುರುತಿಸುವಂತೆ ಮಾಡಿದೆ. ವಿದೇಶೀ ಶೈಲಿಯ ಕಲೆಗಳ ವ್ಯಾಮೋಹದಿಂದ ದೇಶೀಯ ಚಿತ್ರಕಲೆ ವಿನಾಶದಂಚಿನಲ್ಲಿದ್ದು, ಅವುಗಳನ್ನು ಸಂರಕ್ಷಿಸುವ ಕೆಲಸ ಯುವ ಕಲಾಸಕ್ತರ ಕೈಯಲ್ಲಿದೆ ಎಂದರು.

ಹೇಮಾವತಿ ವೀ. ಹೆಗ್ಗಡೆ, ಡಿ. ಹಷೇìಂದ್ರ ಕುಮಾರ್‌, ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಉಪಸ್ಥಿತರಿದ್ದರು.
ಯೋಗ ನಿರ್ದೇಶಕ ಡಾ| ಐ. ಶಶಿಕಾಂತ್‌ ಜೈನ್‌ ಸ್ವಾಗತಿಸಿದರು. ಮೂಡುಬಿದಿರೆ ಪ್ರಾಂತ ಸರಕಾರಿ ಪ್ರೌಢ ಶಾಲಾ ಶಿಕ್ಷಕ ಬಾಲಕೃಷ್ಣ ವಂದಿಸಿದರು. ಬಂಟ್ವಾಳದ ಸದಾಶಿವ ನಾಯಕ್‌ ಕಾರ್ಯಕ್ರಮ ನಿರ್ವಹಿಸಿದರು.

ಅಂಚೆ-ಕುಂಚ ಸ್ಪರ್ಧೆ ವಿಜೇತರು
-  ಪ್ರಾಥಮಿಕ ಶಾಲಾ ವಿಭಾಗ: ಪ್ರಥಮ: ಶಶಾಂಕ ಕೋಲ್ಕಾರ್‌, ರಾಯಚೂರು ಜಾಲಹಳ್ಳಿಯ ಡಾರ್ವಿನ್‌ ಹಿ.ಪ್ರಾ.ಶಾಲೆ. ದ್ವಿತೀಯ: ಗಗನ್‌ ಎ.ವಿ., ಪಾಣೆಮಂಗಳೂರು ಎಸ್‌.ಎಲ್‌.ಎನ್‌.ಪಿ. ವಿದ್ಯಾಲಯ. ತೃತೀಯ: ಅನ್ವಿತ್‌ ಎಚ್‌., ಮಂಗಳೂರು ಉರ್ವ ಕೆನರಾ ಹಿ.ಪ್ರಾ. ಶಾಲೆ.

-  ಪ್ರೌಢ ಶಾಲೆ ವಿಭಾಗ: ಪ್ರಥಮ: ಅಖೀಲೇಶ ನಾಗೇಶ ನಾಯ್ಕ, ಕಾರವಾರ ಸೈಂಟ್‌ ಜೋಸೆಫ್‌ ಪ್ರೌಢ ಶಾಲೆ. ದ್ವಿತೀಯ: ಆದರ್ಶ್‌ ನಾರಾಯಣನ್‌, ಬ್ರಹ್ಮಾವರ ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್‌ ಸ್ಕೂಲ್‌. ತೃತೀಯ: ಪ್ರತೀಕ್ಷಾ ಮರಕಿಣಿ, ಬೆಂಗಳೂರು ಸದಾಶಿವನಗರ ಪೂರ್ಣಪ್ರಜ್ಞ ಪ್ರೌಢ ಶಾಲೆ,

-   ಕಾಲೇಜು ವಿಭಾಗ: ಪ್ರಥಮ: ಅನನ್ಯಾ ದೀಪಕ್‌ ನಾಯ್ಕ, ಕಾರವಾರ ಸ.ಪ.ಪೂ. ಕಾಲೇಜು, ದ್ವಿತೀಯ: ಅವಿನಾಶ್‌ ಜಿ. ಪೈ., ಬೆಂಗಳೂರು ಸೌತ್‌ ಕ್ಯಾಂಪಸ್‌ ಕಾಲೇಜು. ತೃತೀಯ: ರತನ್‌, ಬೈಂದೂರು ಸ.ಪ.ಪೂ. ಕಾಲೇಜು ಉಪ್ಪುಂದ.

-  ಸಾರ್ವಜನಿಕ ವಿಭಾಗ: ಪ್ರಥಮ: ದಿನೇಶ ದೇವರಾಯ ಮೇತ್ರಿ, ಅಂಕೋಲಾದ ಆವರ್ಸೆ, ದ್ವಿತೀಯ: ವಿಶ್ವೇಶ್ವರ ಎಂ. ಪಟಗಾರ, ತಲಗೋಡ್‌-ಊರಕೇರಿ, ಕುಮಟಾ, ತೃತೀಯ: ಬಿ.ಕೆ. ಮಾಧವ ರಾವ್‌, ಮಂಗಳೂರು ಕೊಂಚಾಡಿ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.