ಸಂಸ್ಕೃತಿ ಉಳಿವಿಗೆ ಮಾತೃಭಾಷೆಯ ಬೋಧನೆ ಅಗತ್ಯ: ಫಾ| ಮಾರ್ಟಿಸ್
Team Udayavani, Feb 7, 2018, 1:30 PM IST
ಕೊಡಿಯಾಲ್‌ಬೈಲ್ : ನಮ್ಮ ಸಂಸ್ಕೃತಿಯ ಉಳಿವಿಗೆ ಭಾಷೆ ಅತಿ ಮುಖ್ಯ. ಈ ನಿಟ್ಟಿನಲ್ಲಿ ಶಾಲೆ- ಕಾಲೇಜುಗಳಲ್ಲಿ
ಮಾತೃಭಾಷೆಯ ಬೋಧನೆ ಅಗತ್ಯವಾಗಿದೆ. ಕರಾವಳಿ ಭಾಗದ ಮಣ್ಣಿನ ಭಾಷೆಯಾಗಿರುವ ತುಳುವನ್ನು ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದು ನಗರದ ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಫಾ| ಪ್ರವೀಣ್ ಮಾರ್ಟಿಸ್ ಹೇಳಿದರು.
ಅಲೋಶಿಯಸ್ ಕಾಲೇಜಿನಲ್ಲಿ ಮಂಗಳವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಶಾಲಾ ಮುಖ್ಯಶಿಕ್ಷಕರಿಗೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ‘ತುಳು ಭಾಷಾ ಬೋಧನೆ ಅವಕಾಶಗಳು ಮತ್ತು ಸವಾಲುಗಳು’ ಎಂಬ ವಿಷಯದ ಕುರಿತ ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿದರು.
ತುಳುವರನ್ನು ಕಂಡಾಗ ಆತ್ಮೀಯತೆ
ಒಬ್ಬ ವ್ಯಕ್ತಿಯ ಸಾಧನೆಗೆ ದೃಷ್ಟಿಗಿಂತಲೂ ದೃಷ್ಟಿಕೋನ ಅತಿ ಮುಖ್ಯ. ಇದಕ್ಕೆ ಪೂರಕವಾಗಿ ಜೀವನ ರೂಪಿಸಿಕೊಳ್ಳಬೇಕು. ಕರಾವಳಿ ಭಾಗದ ನಾವು ತುಳು ಭಾಷೆಯನ್ನು ಆಡುತ್ತಲೇ ಬೆಳೆದಿದ್ದೇವೆ. ಹೀಗಾಗಿ ನಾವು ದೂರದೂರುಗಳಿಗೆ ಹೋದಾಗ ತುಳುವರನ್ನು ಕಂಡಾಗ ನಮ್ಮವರು ಎಂಬ ಆತ್ಮೀಯತೆ ಬೆಳೆಯುತ್ತದೆ. ನಮ್ಮ ಮಕ್ಕಳು ಕೂಡ ತುಳು ಭಾಷೆಯನ್ನು ಅರಿಯುವ ನಿಟ್ಟಿನಲ್ಲಿ ಅವರಿಗೆ ತುಳು ಬೋಧನೆ ಮಾಡಬೇಕಿದೆ ಎಂದು ಅವರು ಹೇಳಿದರು.
ತುಳು ಪಠ್ಯವಾಗಿ ಕಲಿಯಲು ಆದೇಶ
ಕಾಲೇಜಿನ ಕುಲಸಚಿವ ಪ್ರೊ| ಪಿ.ನರಹರಿ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ.ಮಾತನಾಡಿ, ತುಳುಯೇತರ ಸಚಿವರು ಹಾಗೂ ಅಧಿಕಾರಿಗಳು 2010ರಲ್ಲಿ ತುಳುವನ್ನು ಪಠ್ಯವಾಗಿ ಕಲಿಯಲು ಆದೇಶ ನೀಡಿದ್ದು, ಅದನ್ನು ಅನುಷ್ಠಾನಗೊಳಿಸಲು ತುಳುವರೇ ಹಿಂದೇಟು ಹಾಕುತ್ತಿದ್ದಾರೆ. ಪ್ರಸ್ತುತ ಕೇವಲ 35 ಶಾಲೆಗಳಲ್ಲಿ 1647 ವಿದ್ಯಾರ್ಥಿಗಳು ಮಾತ್ರ ತುಳು ಅಧ್ಯಯನ ಮಾಡುತ್ತಿದ್ದು, ಅದನ್ನು ಇನ್ನಷ್ಟು ಶಾಲೆಗಳಿಗೆ ವಿಸ್ತರಿಸಲು ಶಿಕ್ಷಕರು ಮನಸ್ಸು ಮಾಡಬೇಕಿದೆ ಎಂದರು.
ಡಿಡಿಪಿಐ ವೈ.ಶಿವರಾಮಯ್ಯ, ತುಳು ಅಕಾಡೆಮಿ ಸದಸ್ಯ ಶಿವಾನಂದ ಕರ್ಕೇರ, ಸದಸ್ಯ ಸಂಚಾಲಕಿ ದುರ್ಗಾ ಮೆನನ್,
ಕಾಲೇಜಿನ ತುಳುಕೂಟದ ಸಂಯೋಜಕಿ ರಶ್ಮಿ ಅಮೀನ್ ಉಪಸ್ಥಿತರಿದ್ದರು. ಅಕಾಡೆಮಿಯ ಸದಸ್ಯ ಪ್ರಭಾಕರ ನೀರುಮಾರ್ಗ ಸ್ವಾಗತಿಸಿದರು.
ತುಳು ವಿಭಾಗ ಸ್ಥಾಪನೆ
ಸಂತ ಅಲೋಶಿಯಸ್ ಕಾಲೇಜು ಡೀಮ್ಡ್ ವಿಶ್ವವಿದ್ಯಾನಿಲಯವಾಗಿ ಮೇಲ್ದರ್ಜೆಗೇರುವ ಸಂದರ್ಭದಲ್ಲಿ ಸ್ಥಳೀಯ ಕಲೆ-ಸಂಸ್ಕೃತಿಯ ಬೆಳೆವಣಿಗೆಗೆ ಪೂರಕ ಕೆಲಸ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿವಿಯಲ್ಲಿ ತುಳು ವಿಭಾಗವನ್ನು ಆರಂಭಿಸುವುದಾಗಿ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಫಾ| ಪ್ರವೀಣ್ ಮಾರ್ಟಿಸ್ ಅವರು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.