ಹೆದ್ದಾರಿ ಬದಿಯಲ್ಲಿ ರಸ್ತೆಗೆ ಬಾಗಿದ ಗಿಡಗಂಟಿ: ಅಪಾಯದ ಭೀತಿ


Team Udayavani, Nov 5, 2017, 4:21 PM IST

5–Nov-14.jpg

ಸುಬ್ರಹ್ಮಣ್ಯ: ಹೆದ್ದಾರಿ ಮುಖ್ಯ ರಸ್ತೆ ಮತ್ತು ಗ್ರಾಮೀಣ ಸಾಮಾನ್ಯ ರಸ್ತೆಗಳಲ್ಲಿ ಸಂಚರಿಸುವುದು ಈಗ ಕಷ್ಟ. ಯಾಕೆಂದರೆ ರಸ್ತೆಗೆ ಬಾಗಿದ ಗಿಡಗಂಟಿಗಳಿಂದ ಸಂಚಾರದ ವೇಳೆ ಅಪಾಯ ಸಂಭವಿಸುವ ಸಾಧ್ಯತೆಗಳು ಹೆಚ್ಚಿವೆ.

ಮಳೆಯ ತರುವಾಯ ರಸ್ತೆ ಬದಿ ಗಿಡಗಂಟಿಗಳು ಸೊಂಪಾಗೆ ಬೆಳೆದು ರಸ್ತೆಗೆ ಬಾಗಿವೆ. ಆಳೆತ್ತರಕ್ಕೆ ಬೆಳೆದ ಇವುಗಳು ಸಂಚಾರದ ವೇಳೆ ಅಪಾಯ ತಂದೊಡ್ಡುತ್ತಿವೆ. ಈಗತಾನೆ ಹಲವೆಡೆ ಅವಘಡಗಳು ಸಂಭವಿಸಿವೆ. ಇಷ್ಟಿದ್ದರೂ ಸಂಬಂಧ ಪಟ್ಟ ಲೋಕೋಪಯೋಗಿ ಇಲಾಖೆ ಗಿಡ ತೆರವುಗೊಳಿಸುವ ಕಾರ್ಯ ನಡೆಸಿಲ್ಲ.

ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿ
ಇಲಾಖೆಯ ನಿರ್ಲಕ್ಷ್ಯದಿಂದ ಬೇಸತ್ತ ಗುತ್ತಿಗಾರು, ನಾಲ್ಕೂರು, ಎಲಿಮಲೆ, ವಳಲಂಬೆ ಭಾಗದ ನಾಗ ರಿಕರು, ಅಲ್ಲಿಯ ಸ್ಥಳೀಯ ಸಂಘ-ಸಂಸ್ಥೆಗಳು ಸುಬ್ರಹ್ಮಣ್ಯ- ಗುತ್ತಿಗಾರು, ಜಾಲ್ಸೂರು-ಸುಳ್ಯ ಸಂಪರ್ಕ ರಸ್ತೆ ಬದಿಯ ಕಾಡು ಕಡಿದು ಸ್ವತ್ಛಗೊಳಿಸಿದ್ದಾರೆ. ಕಳೆ ತೆಗೆಯುವ ಯಂತ್ರ ಬಳಸಿ ಕಾಡು ಹೆರೆದು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಇನ್ನೂ ಹಲವು ಭಾಗಗಳಲ್ಲಿ ಇನ್ನೂ ಅಪಾಯದ ಸ್ಥಿತಿ ಇದೆ.

ಅಪಾಯಕಾರಿ ಸ್ಥಿತಿ
ಮಳೆ ಪ್ರಮಾಣ ಕಡಿಮೆಗೊಂಡ ಹೊತ್ತಲ್ಲೆ ಸಂಬಂಧಿಸಿದ ಇಲಾಖೆ ಬಹಳಷ್ಟು ಎಚ್ಚರಿಕೆ ವಹಿಸಬೇಕಿತ್ತು. ಸಾಕಷ್ಟು ಮುಂಜಾಗ್ರತೆ ವಹಿಸದೆ ಇದ್ದಿದ್ದರಿಂದ ಸುಳ್ಯ- ಸುಬ್ರಹ್ಮಣ್ಯ, ಸುಬ್ರಹ್ಮಣ್ಯ- ಜಾಲ್ಸೂರು-ಮಡಿಕೇರಿ ಸಂಪರ್ಕ ರಸ್ತೆ. ಮಾಣಿ-ಮೈಸೂರು ರಾಜ್ಯ ಹೆದ್ದಾರಿ ಸುಬ್ರಹ್ಮಣ್ಯ-ಕಾಣಿಯೂರು-ಪುತ್ತೂರು ಸಂಪರ್ಕ ರಸ್ತೆ, ಸುಬ್ರಹ್ಮಣ್ಯ-ಗುಂಡ್ಯ- ಸಕಲೇಶಪುರ ರಸ್ತೆ ಹಾಗೂ ಗ್ರಾಮೀಣ ಭಾಗದ ಹಲವು ಕಡೆಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಗ್ರಾಮದೊಳಗಿನ ಒಳ ರಸ್ತೆಗಳಲ್ಲಿ ಕೂಡ ಇದೇ ಚಿತ್ರಣ ಕಂಡು ಬರುತ್ತದೆ.

ಎಚ್ಚರ ವಹಿಸಬೇಕು
ತಿರುವಿನಲ್ಲಿ ಎದುರಿನಿಂದ ಬರುವ ವಾಹನಗಳು ತತ್‌ಕ್ಷಣಕ್ಕೆ ಕಾಣಿಸಿಕೊಳ್ಳು ವುದಿಲ್ಲ. ಇದರಿಂದಾಗಿಯೇ ಅನೇಕ ಮಂದಿ ಬೈಕ್‌ ಸವಾರರು ಈಗಾಗಲೇ ಬಿದ್ದು ಗಾಯಗೊಂಡಿದ್ದಾರೆ. ದ್ವಿಚಕ್ರ ವಲ್ಲದೆ ಘನವಾಹನಗಳು ಕೂಡ ಅವಘಡಗಳಿಗೆ ಒಳಗಾಗುತ್ತಿವೆ. ಇಂತಹ ರಸ್ತೆಗಳಲ್ಲಿ ಸಂಚರಿಸುವ ಸವಾರರು ಎಚ್ಚರ ವಹಿಸುವುದರ ಜತೆ ಮಂದಗತಿಯಲ್ಲಿ ವಾಹನ ಚಲಾಯಿಸಬೇಕಿದೆ.

ಪ್ರತಿ ವರ್ಷ ಈ ಸಮಸ್ಯೆ ಪುನರಾವರ್ತನೆ ಆಗುತ್ತಿರುತ್ತದೆ. ಇಲಾಖೆಗಳು ಪಕ್ಕನೆ ಎಚ್ಚರವಾಗುವುದಿಲ್ಲ. ಅವಘಡ ಸಂಭವಿಸಿ ಅಮಾಯಕ ಜೀವಗಳು ಬಲಿಯಾದ ಅನಂತರದಲ್ಲಿ ಅವುಗಳು ಎಚ್ಚರಗೊಳ್ಳುತ್ತವೆ. ಆದರೆ ಈ ಬಾರಿ ಇಲಾಖೆಗೆ ಇನ್ನೂ ಎಚ್ಚರವಾಗಿಲ್ಲ.

ಕ್ರಮ ಕೈಗೊಂಡಿಲ್ಲ
ತಾ.ಪಂ., ಸಾಮಾನ್ಯ ಸಭೆಗಳಲ್ಲಿ ನ.ಪಂ.ಸಭೆ, ಸಾಮಾನ್ಯ ಸಭೆ ಮತ್ತು ಗ್ರಾಮ ಸಭೆಗಳಲ್ಲಿ ಅಪಾಯ ಕಾರಿ ಮರ ಹಾಗೂ
ಗಿಡ ಬಳ್ಳಿಗಳ ತೆರವು ಕುರಿತು ಚರ್ಚೆ ಗಳು ನಡೆದಿವೆ. ತೆರವು ಕುರಿತಂತೆ ನಿರ್ಣಯಗಳು ಆಗಿವೆ. ಜನಪ್ರತಿನಿಧಿಗಳು ಈ ಕುರಿತು ಕ್ರಮಕೈಗೊಳ್ಳುವಂತೆ ಹೇಳಿದರೂ ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.

ರಸ್ತೆ ಬದಿ ಗ್ಯಾಂಗ್‌ಮೆನ್‌ಗಳಿಲ್ಲ
ಹಿಂದೆಲ್ಲ ಇಲಾಖೆ ಕಡೆಯಿಂದ ಗ್ಯಾಂಗ್‌ಮೆನ್‌ ಸಿಬಂದಿ ಇರುತ್ತಿದ್ದರು. ಅವರು ರಸ್ತೆ ಬದಿ ಮಳೆ ನೀರು ಹಾದು ಹೋಗಲು ತಾತ್ಕಾಲಿಕ ಚರಂಡಿ ನಿರ್ಮಾಣ ಮಾಡುವುದು. ರಸ್ತೆಗೆ ಬಾಗಿದ ವೃಕ್ಷಗಳ ತೆರವು ಕಾರ್ಯ ನಡೆಸುತ್ತಿದ್ದರು. ಹೀಗಾಗಿ ಸ್ವಲ್ಪವಾದರೂ ಇವುಗಳ ನಿರ್ವಹಣೆ ಆಗುತ್ತಿತ್ತು. ಅನಂತರದಲ್ಲಿ ಇಂತಹ ಸಿಬಂದಿ ಹುದ್ದೆ ರದ್ದುಗೊಂಡಿದೆ. ಈ ಸಿಬಂದಿಯನ್ನು ಬೇರೆ ಇಲಾಖೆಗಳ ಕಚೇರಿಯ ಹುದ್ದೆಗಳಿಗೆ ನೇಮಿಸಿಕೊಂಡ ಕಾರಣ ಗ್ಯಾಂಗ್‌ಮೆನ್‌ಗಳು ರಸ್ತೆ ಬದಿ ಕಾಣಿಸುವುದಿಲ್ಲ.

ಅನುದಾನ ದೊರೆತಾಗ ತೆರವು
ರಸ್ತೆ ಬದಿಯ ಸಣ್ಣಪುಟ್ಟ ಗಿಡಗಳ ತೆರವು ಕಾರ್ಯ ಇನ್ನೂ ಸಂಪೂರ್ಣ ಆಗಿಲ್ಲ. ಅನುದಾನದ ದೊರೆತ ಬಳಿಕವಷ್ಟೆ ಈ ಕಾರ್ಯ ನಡೆಸುತ್ತೇವೆ.
ಹರೀಶ,
  ಕಿರಿಯ ಎಂಜಿನಿಯರ್‌, ಪಿಡಬ್ಲ್ಯುಡಿ, ಸುಳ್ಯ

ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

Omission in egg distribution, head teacher, physical education teacher suspended

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.