ಮತ್ತೆ ಮತ್ತೆ ಬಕರಾ
Team Udayavani, Aug 6, 2018, 3:10 PM IST
ಮಂಗಳೂರು: ವರ್ಷದ ಹಿಂದೆ ಎಟಿಎಂ ಕಾರ್ಡ್ ನಂಬರ್ ಹೇಳಿ ಹಣ ಕಳೆದುಕೊಂಡವರು ಮತ್ತೆ ಮತ್ತೆ ಹಣ ಕಳೆದುಕೊಂಡು ಬಕರಾಗಳಾಗುತ್ತಿದ್ದಾರೆ. ಇಂಥ ಎರಡು ದೂರುಗಳು ಮಂಗಳೂರಿನ ಸೈಬರ್ ಪೊಲೀಸ್ ಠಾಣೆಗೆ ಇತ್ತೀಚೆಗೆ ಬಂದಿವೆ.
ಕಳೆದ ಅಕ್ಟೋಬರ್‌ನಲ್ಲಿ ಸೈಬರ್ ಅಪರಾಧ ಪೊಲೀಸ್ ಠಾಣೆ ಸ್ಥಾಪನೆ ಆದ ಬಳಿಕ ಸುಮಾರು 80 ಪ್ರಕರಣಗಳು ದಾಖಲಾಗಿವೆ. ಈ ವರ್ಷದ ಜು. 6ರಿಂದ ಆ. 3ರ ನಡುವೆ 2 ಕೇಸುಗಳು ದಾಖಲಾಗಿವೆ. ಬಹುಮಾನ ಬಂದಿದೆ, ಲಾಟರಿಯಲ್ಲಿ ಹಣ ಬಂದಿದೆ ಎಂದು ನಂಬಿಸಿ ವಂಚನೆ; ವೈವಾಹಿಕ ಸಂಬಂಧ, ವಿದೇಶದಲ್ಲಿ ಉದ್ಯೋಗಾವಕಾಶದ ಆಮಿಷ ತೋರಿಸಿ ವಂಚನೆ, ಒಟಿಪಿ ನಂಬರ್ ಪಡೆದು ಹಣ ಡ್ರಾ, ಬ್ಯಾಂಕ್ ಖಾತೆ ಹ್ಯಾಕ್ ಮಾಡಿ ಮೋಸ ಪ್ರಕರಣಗಳು ನಡೆಯುತ್ತಲೇ ಇವೆ. ಪ್ರತಿನಿತ್ಯ ಕನಿಷ್ಠ ಒಬ್ಬರಾದರೂ ಮೋಸ ಹೋಗುತ್ತಿದ್ದು, ಈ ಪೈಕಿ ಬಹುತೇಕ ಮಂದಿ ದೂರು ಕೊಡುವುದಿಲ್ಲ.
ಮೋಸ ಹೋಗುವರಲ್ಲಿ ಬಹಳಷ್ಟು ಮಂದಿ ಸುಶಿಕ್ಷಿತರೇ ಆಗಿರುತ್ತಾರೆ ಹಾಗೂ ಅನಾಮಧೇಯ ಕರೆ ಅಥವಾ ಎಸ್‌ಎಂಎಸ್‌ಗಳಿಗೆ ಮಾರು ಹೋಗಿ ಆಧಾರ್/ ಒಟಿಪಿ ನಂಬ್ರ ನೀಡಿ ಬಕರಾಗಳಾಗುತ್ತಿದ್ದಾರೆ. ಕೆಲವರು ಅತ್ಯಾಸೆಗೆ ಬಲಿಯಾಗಿ ಮತ್ತೆ ಮತ್ತೆ ಹಣ ಕಳುಹಿಸಿ ವಂಚಿಸಲ್ಪಡುತ್ತಿರುವುದು ವಿಶೇಷ. ಐಟಿ ಇಲಾಖೆಯ ಹೆಸರಿನಲ್ಲಿ ಸಂದೇಶ ಕಳುಹಿಸಿ ಹಣವಂತರ ಬ್ಯಾಂಕ್ ಖಾತೆ ಮಾಹಿತಿ ಸಂಗ್ರಹಿಸುತ್ತಾರೆ ಎನ್ನುವುದು ಈಗ ಬೆಳಕಿಗೆ ಬಂದ ಹೊಸ ವಿಚಾರ.
ಜೂನ್, ಜುಲೈ ಐಟಿ ರಿಟರ್ನ್ಸ್ ಸಲ್ಲಿಸುವ ಅವಧಿಯಾಗಿದ್ದು, ವಂಚಕರು ಇದರ ಪ್ರಯೋಜನ ಪಡೆಯಲು ಹವಣಿಸಿದ್ದಾರೆ. ಐಟಿ ಇಲಾಖೆಯವರು ಎಂದು ನಂಬಿಸಿ ರಿಟರ್ನ್ಸ್ ಸಲ್ಲಿಸುವಂತೆ ಸಂದೇಶ ಕಳುಹಿಸುತ್ತಾರೆ. ಇದು ಸತ್ಯ ಎಂದೇ ನಂಬುವ ಕೆಲವರು ಗೌಪ್ಯ ವಿವರ ನೀಡಿ ಮೋಸ ಹೋಗಿದ್ದಾರೆ.
ಕೋಲ್ಕತ್ತಾಕ್ಕೆ ಹೋದರೂ ಪ್ರಯೋಜನವಿಲ್ಲ
ಅನಾಮಧೇಯ ವ್ಯಕ್ತಿಗಳು ಪಶ್ಚಿಮ ಬಂಗಾಲ, ಅಸ್ಸಾಂ ಉತ್ತರ ಭಾರತದ ರಾಜ್ಯಗಳಲ್ಲಿದ್ದುಕೊಂಡು ಈ ರೀತಿಯ ವಂಚನೆ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ. ಮಂಗಳೂರಿನ ಸೈಬರ್ ಅಪರಾಧ ಠಾಣೆಯ ಇನ್ಸ್‌ಪೆಕ್ಟರ್ ಸವಿತೃತೇಜ ನೇತೃತ್ವದ ತಂಡವನ್ನು ಮಂಗಳೂರಿನ ಪೊಲೀಸ್ ಕಮಿಷನರ್ ಇತ್ತೀಚೆಗೆ ಕೊಲ್ಕತ್ತಾಕ್ಕೆ ಕಳುಹಿಸಿದ್ದರು. ತಂಡ 9 ದಿನಗಳ ಕಾಲ ಕೊಲ್ಕತ್ತಾದ ವಿವಿಧ ಭಾಗಗಳಲ್ಲಿ ಸುತ್ತಾಡಿ ಅಲ್ಲಿನ ಪೊಲೀಸರ ಸಹಾಯದಿಂದ ತನಿಖೆ ನಡೆಸಿದರೂ ಆರೋಪಿಗಳ ಸುಳಿವು ಲಭ್ಯವಾಗದೆ ಮರಳಿದೆ.
ಅನಾಮಧೇಯ ವ್ಯಕ್ತಿಗಳ ಕರೆಯ ಜಾಡು ಹಿಡಿದು ಇಲ್ಲಿನ ಪೊಲೀಸರನ್ನು ಕೋಲ್ಕತಾಗೆ ಕಳುಹಿಸಿದರೂ ಪ್ರಯೋಜನವಾಗಿಲ್ಲ. ಕರೆ ಮಾಡಿ ಹಣ ಎಗರಿಸುವವರು ಮೊಬೈಲ್ ಸಿಮ್ ಎಸೆದು ಬೇರೆ ಸಿಮ್ ಉಪಯೋಗಿಸುತ್ತಾರೆ. ಸ್ಥಳೀಯ ಅಂಚೆ ಕಚೇರಿಯ ಪೋಸ್ಟ್‌ಮ್ಯಾನ್ ಜತೆಗೂ ಸಂಪರ್ಕ ಇರಿಸಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ. ನಾಗರಿಕರಿಗೆ ಸೈಬರ್ ವಂಚನೆ ಬಗ್ಗೆ ಜಾಗೃತಿ ಮೂಡಿಸುವುದೇ ಏಕೈಕ ಪರಿಹಾರ.
–ಟಿ.ಆರ್. ಸುರೇಶ್, ಪೊಲೀಸ್ ಕಮಿಷನರ್
ಜನ ಈ ರೀತಿ ಮೋಸ ಹೋಗುವುದಕ್ಕೆ ಅತಿ ಆಸೆಯೇ ಕಾರಣ. ಸುಶಿಕ್ಷಿತರು, ತಿಳಿದವರೇ ಮೋಸ ಹೋಗುತ್ತಾರೆ. ಅನಾಮಧೇಯ ಸಂದೇಶಗಳಿಗೆ ಅಥವಾ ಮೊಬೈಲ್ ಕರೆಗೆ ಮಾರು ಹೋಗಿ ಹಿಂದೆ ಮುಂದೆ ನೋಡದೆ ಮೊದಲು ಸ್ವಲ್ಪ ಹಣ ಕಳುಹಿಸುತ್ತಾರೆ. ಮತ್ತೆ ಮತ್ತೆ ಕರೆ ಬಂದಾಗ ಪುನಃ ಕಳುಹಿಸುತ್ತಾರೆ. ಕೊನೆಗೆ ಮೋಸ ಹೋಗಿರುವುದು ಅರಿವಾದಾಗ ಪೊಲೀಸ್ ಠಾಣೆಗೆ ದೂರು ಕೊಡಲು ಹೋಗುತ್ತಾರೆ.
–ಸವಿತೃತೇಜ, ಸೈಬರ್ ಠಾಣೆ ಇನ್ಸ್‌ಪೆಕ್ಟರ್
*ಹಿಲರಿ ಕ್ರಾಸ್ತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.