ಮತದಾರರ ಜಾಗೃತಿಗಾಗಿ ಸೈಕಲ್ ಜಾಥಾ
Team Udayavani, Apr 30, 2018, 10:56 AM IST
ಮಹಾನಗರ: ರಾಜ್ಯದಲ್ಲಿ ಮೇ 12ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಸ್ವೀಪ್ ವತಿಯಿಂದ ಮಹಾನಗರ ಪಾಲಿಕೆ ಸಹಯೋಗದಲ್ಲಿ ಸೈಕಲ್ ಜಾಥಾವನ್ನು ರವಿವಾರ ನಗರದಲ್ಲಿ ಆಯೋಜಿಸಲಾಯಿತು.
ಜಾಥಾ ಬೆಳಗ್ಗೆ ನೆಹರೂ ಮೈದಾನದಿಂದ ಆರಂಭಗೊಂಡು ಎ.ಬಿ. ಶೆಟ್ಟಿ ಸರ್ಕಲ್, ಕ್ಲಾಕ್ ಟವರ್ ಸರ್ಕಲ್, ಕೆ.ಎಸ್.ರಾವ್ ರಸ್ತೆ, ನವಭಾರತ್ ಸರ್ಕಲ್, ಪಿವಿಎಸ್ ಸರ್ಕಲ್, ಎಂ.ಜಿ. ರೋಡ್, ಬಲ್ಲಾಳ್ ಬಾಗ್, ದುರ್ಗಾ ಮಹಲ್ ಜಂಕ್ಷನ್, ಗುರ್ಜಿ ಜಂಕ್ಷನ್, ಉರ್ವ ಮಾರ್ಕೆಟ್‌ಗೆ ಆಗಮಿಸಿ ಮಂಗಳಾ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡಿತು.
ಮತದಾರರ ಜಾಗೃತಿಗಾಗಿ ಆಯೋಜಿಸಲಾದ ಸೈಕಲ್ ಜಾಥಾದಲ್ಲಿ ಮಂಗಳೂರು ಬೈಸಿಕಲ್ ಕ್ಲಬ್‌ನಿಂದ ಸೈಕಲಿಸ್ಟ್‌ಗಳು ಭಾಗವಹಿಸಿದರು. ಜಿಲ್ಲಾ ಪಂಚಾಯತ್ ಸಿಇಒ ಎಂ.ಆರ್. ರವಿ, ನಟ ನವೀನ್ ಡಿ. ಪಡೀಲ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.