ಧಾರವಾಡದಿಂದ ಕಾಸರಗೋಡಿಗೆ ಸೈಕಲ್ ಯಾತ್ರೆ
Team Udayavani, May 5, 2018, 12:49 PM IST
ಮಹಾನಗರ: ಮತದಾನ ಜನತೆಯ ಹಕ್ಕು, ಜನತೆಯ ಶಕ್ತಿ ಎಂಬ ಅರಿವನ್ನು ಸಾರ್ವಜನಿಕರಲ್ಲಿ ಮೂಡಿಸುವ ಉದ್ದೇಶದಿಂದ ಮೂರು ಮಂದಿ ಯುವಕರು ಇತ್ತೀಚೆಗೆ ಧಾರವಾಡದಿಂದ ಕಾಸರಗೋಡಿಗೆ ಸೈಕಲ್ ಯಾತ್ರೆಯನ್ನು ಕೈಗೊಂಡಿದ್ದರು.
ಧಾರವಾಡದಿಂದ ಎ. 29ರಂದು ಹೊರಟ ವಿನಯ ಕುಮಾರ ಪಾಟೀಲ, ವೈಶಾಖ ಜಿ. ಮೆಹೆಂದಳೆ ಮತ್ತು ರೋಹಿತ್ ಅವರು ಮೇ 3ರಂದು ಕಾಸರಗೋಡನ್ನು ತಲುಪಿದ್ದಾರೆ.
ಯಾವುದೇ ಆಮಿಷಕ್ಕೆ ಒಳಗಾಗದೆ ಮತಚಲಾವಣೆಯ ಮೊದಲು ಯೋಚಿಸಿ ಮುಂದುವರಿಯುವುದು ಅಗತ್ಯ ಎಂಬ ಸತ್ಯವನ್ನು ಜನರಿಗೆ ಅರಿವು ಮಾಡಿ ಕೊಡುವುದು, ನಮ್ಮ ರಾಜ್ಯದ ಹಾಗೂ ನಮ್ಮ ದೇಶದ ಬೆಳವಣಿಗೆಯಲ್ಲಿ ಮತದಾನದ ಮಹತ್ವದ ಬಗ್ಗೆ ಹಾಗೂ ಅದರ ಅಗತ್ಯದ ಬಗ್ಗೆ ತಿಳಿ ಹೇಳುವುದು ಇದರ ಉದ್ದೇಶವಾಗಿತ್ತು.
ಇದೇ ವೇಳೆ ಮಾತನಾಡಿದ ವಿನಯ ಕುಮಾರ ಪಾಟೀಲ, ಅಂದಿನ ಹೋಲಿಸಿದರೆ ಸದ್ಯ ಭಾರತೀಯ ಸಂಸ್ಕೃತಿ ನಶಿಸಿ
ಹೋಗುತ್ತಿದೆ. ಹೆಣ್ಣಿನ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾವು ಜನರಲ್ಲಿ ಹೆಣ್ಣಿನ ರಕ್ಷಣೆ ಮತ್ತು ಸ್ವಾತಂತ್ರ್ಯದ ಬಗ್ಗೆ ತಿಳಿವಳಿಕೆ ಮೂಡಿಸುವೆವು ಎಂದು ತಿಳಿಸಿದ್ದಾರೆ.