ಸೈಕ್ಲಿಸ್ಟ್‌ ,ಪಾದಚಾರಿಗಳ ಸುರಕ್ಷತೆ ಸವಾಲಿನದ್ದು: ಅರುಣ್‌


Team Udayavani, May 6, 2019, 6:10 AM IST

0505MLR44

ಮಹಾನಗರ: ನಗರದಲ್ಲಿ ಸೈಕ್ಲಿಸ್ಟ್‌ಗಳು ಮತ್ತು ಪಾದಚಾರಿಗಳ ಸುರಕ್ಷತೆಯೇ ಅತಿ ಸವಾಲಿನದ್ದು, ಈ ಕುರಿತು ಮಂಗಳೂರು ಬೈಸಿಕಲ್‌ ಕ್ಲಬ್‌ನಂತಹ ಸಂಘಟನೆಗಳು ಗಮನ ಹರಿಸಿ, ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಪಶ್ಚಿಮ ವಲಯ ಐಜಿಪಿ ಅರುಣ್‌ ಚಕ್ರವರ್ತಿ ಹೇಳಿದರು.

ಸಹೋದಯ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಳ್ಳಲಾದ ಮಂಗಳೂರು ಬೈಸಿಕಲ್‌ ಕ್ಲಬ್‌(ಎಂಬಿಸಿ)ನ ವಾರ್ಷಿಕ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕೊಲೆಗಾರರಿಗೂ ಉದ್ದೇಶ ಇರುತ್ತದೆ. ಆದರೆ ಹೆದ್ದಾರಿ, ನಗರ ರಸ್ತೆಗಳಲ್ಲಿ ಅತಿ ವೇಗ, ಅಪಾಯಕಾರಿಯಾಗಿ ಸಂಚರಿಸುವ ವಾಹನಗಳ ಚಾಲಕರು ಯಾವುದೇ ಕಾರಣವಿಲ್ಲದೆ ಸೈಕಲ್‌ ಸವಾರರು, ಪಾದಚಾರಿಗಳನ್ನು ಕೊಲ್ಲುವಂತಾಗಿದೆ, ಸುರಕ್ಷಿತ ವಾಹನ ಚಾಲನೆ ಕುರಿತು ನಗರದಲ್ಲಿ ಇನ್ನಷ್ಟು ಜಾಗೃತಿ ಮೂಡಬೇಕಾಗಿದೆ ಎಂದರು.

ಸೈಕಲ್‌ ಹಸ್ತಾಂತರ
ಮಂಗಳೂರಿನ ದಶಕದ ಹಿಂದಿನ ಹಿರಿಯ ಸೈಕಲ್‌ ರೇಸಿಂಗ್‌ ಪಟು, ನಾಬರ್ಟ್‌ ಡಿ’ಸೋಜಾ ಅವರ ಟ್ರೆಕ್‌ 1.5 ರೋಡ್‌ ಬೈಸಿಕಲ್‌ನ್ನು ಬಾಗಲಕೋಟ ಜಿಲ್ಲೆ ಜಮಖಂಡಿಯ ಉದಯೋನ್ಮುಖ ಸೈಕ್ಲಿಂಗ್‌ ಪಟು, 15ರ ಹರೆಯದ ಉದಯ ಗುಳೇದ್‌ ಅವರಿಗೆ ದಾನವಾಗಿ ಹಸ್ತಾಂತರಿಸಿದರು.

ನಾಬರ್ಟ್‌ ಡಿ’ಸೋಜಾ ತಮ್ಮಲ್ಲಿರುವ ಇನ್ನೊಂದು ಕಾರ್ಬನ್‌ ರೋಡ್‌ ಬೈಕ್‌ ಟ್ರೆಕ್‌ ಮಡೋನ್‌ನ್ನು ಮುಂಬರುವ ರಾóಷ್ಟ್ರೀಯ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ ವಿಜೇತರಿಗೆ ನೀಡುವ ಇರಾದೆ ಹೊಂದಿದ್ದಾರೆ. ಎಂಬಿಸಿಯಿಂದ ಗೋವಾದ ಅಲ್ಟ್ರಾ ಸೈಕಲ್‌ ರೇಸ್‌ನಲ್ಲಿ ಮೊದಲ ಸ್ಥಾನಿಗಳಾಗಿದ್ದ ಹರಿಪ್ರಸಾದ್‌, ಶ್ರೀಕಾಂತರಾಜ್‌, ಮಸೂದ್‌ ಟೀಕೆ ತಮ್ಮ ಅನುಭವ ಹಂಚಿಕೊಂಡರು. ಅದೇ ರೀತಿ ಎಂಬಿಸಿ ಸದಸ್ಯರಾಗಿ ತಮ್ಮ ಅನುಭವಗಳನ್ನು ಡಾ| ಸುನೀತಾ ಮೆಂಡಿಸ್‌, ಮಧುರಾ ಜೈನ್‌, ಗುರುರಾಜ್‌ ಪಾಟೀಲ್‌ ಪ್ರಸ್ತುತಪಡಿಸಿದರು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಎಂಬಿಸಿ ಅಧ್ಯಕ್ಷ ದಿಜರಾಜ್‌ ನಾಯರ್‌ ಸ್ವಾಗತಿಸಿ, ಕೇವಲ ನಾಲ್ಕು ಸದಸ್ಯರಿಂದ 2011ರಲ್ಲಿ ಶುರುವಾದ ಕ್ಲಬ್‌ ಸದ್ಯ 100ಕ್ಕೂ ಹೆಚ್ಚು ನೋಂದಾಯಿತ ಸದಸ್ಯರನ್ನೊಳಗೊಂಡಿದೆ ಎಂದರು. ಉಪಾಧ್ಯಕ್ಷ ಶ್ರೀಕಾಂತರಾಜ, ಖಜಾಂಚಿ ಹರಿಪ್ರಸಾದ್‌ ಶೇಖರೆ ಜಮಖಂಡಿ ಸೈಕ್ಲಿಂಗ್‌ ಕೋಚ್‌ ವಿಟuಲ ಭೋರ್ಜಿ ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಗಣೇಶ್‌ ನಾಯಕ್‌ ಪ್ರಾಸ್ತಾವಿಸಿದರು. ಜತೆ ಕಾರ್ಯದರ್ಶಿ ಮಧುಕರ್‌ ನಿರೂಪಿಸಿ, ಸದಸ್ಯ ಜವಿರ್‌ ಮನ್ನಿಪ್ಪಾಡಿ ವಂದಿಸಿದರು.

ಟಾಪ್ ನ್ಯೂಸ್

1-man-mohan

Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು

Video: ಮನಮೋಹನ್ ಸಿಂಗ್ ನಿಧನ ಹೇಳುವ ಬದಲು ಮೋದಿ ನಿಧನರಾಗಿದ್ದಾರೆ ಎಂದ ನ್ಯೂಸ್ ಆ್ಯಂಕರ್

Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!

allu arjun

Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

1-osamu

Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ

Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್‌; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ

4-ut-khader

Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್

6

Mangaluru: ಅಪಾರ್ಟ್‌ಮೆಂಟ್‌, ಮಾಲ್‌ಗ‌ಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ

5

Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು

4

Kulur: ಗೈಲ್‌ ಪೈಪ್‌ಲೈನ್‌ ಕಾಮಗಾರಿ; ಹೆದ್ದಾರಿ ಕುಸಿತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10

Madikeri: ಸೇನಾ ವಾಹನ ದುರಂತ; ಕೊಡಗಿನ ಯೋಧ ಚಿಂತಾಜನಕ

1-man-mohan

Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು

Video: ಮನಮೋಹನ್ ಸಿಂಗ್ ನಿಧನ ಹೇಳುವ ಬದಲು ಮೋದಿ ನಿಧನರಾಗಿದ್ದಾರೆ ಎಂದ ನ್ಯೂಸ್ ಆ್ಯಂಕರ್

Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!

allu arjun

Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.