ಮೂಡಬಿದಿರೆಯಲ್ಲಿ ಬಿರುಗಾಳಿ ಅವಾಂತರ
Team Udayavani, Jul 17, 2018, 6:55 AM IST
ಮೂಡಬಿದಿರೆ: ಮೂಡಬಿದಿರೆ ಪೇಟೆಯಿಂದ ಸ್ವರಾಜ್ಯ ಮೈದಾನಕ್ಕೆ ಏಳು ತಿಂಗಳ ಹಿಂದಷ್ಟೆ ಸ್ಥಳಾಂತರಗೊಂಡು ತಾತ್ಕಾಲಿಕವಾಗಿ ತಗಡಿನ ಸೂರು ಹೊದ್ದುಕೊಂಡ 13 ಅಂಗಡಿಗಳು ಸೋಮವಾರ ಬೀಸಿದ ಬಿರುಗಾಳಿಗೆ ಧರಾಶಾಯಿಯಾಗಿವೆ. ಪಶ್ಚಿಮ ಭಾಗದ ಇನ್ನೂ 14 ಅಂಗಡಿಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಪೇಟೆಯ ನಡುವೆ ಹಳೆಯ ಮಾರುಕಟ್ಟೆ ಇದ್ದಲ್ಲಿ ಹೊಸದಾಗಿ ಮಾರುಕಟ್ಟೆ ನಿರ್ಮಾಣವಾಗುತ್ತಿದ್ದು ಸ್ವರಾಜ್ಯ ಮೈದಾನಕ್ಕೆ 2 ವರ್ಷಗಳ ಮಟ್ಟಿಗೆ ಸುಮಾರು 120 ಅಂಗಡಿಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿತ್ತು.
ತಗಡಿನ ಸೂರನ್ನು ಅತ್ಯಂತ ಚಿಕ್ಕ, ದುರ್ಬಲ ಕ್ಲಾಂಪ್ ಗಳನ್ನು ಹಾಕಿ ಜೋಡಿಸಿದ್ದು ಪಶ್ಚಿಮ ಭಾಗಕ್ಕೆ ಸಿಮೆಂಟ್ ಸಾರಣೆಯನ್ನೂ ಮಾಡದೇ ಇರುವುದರಿಂದ ಗೋಡೆಗಳು ದುರ್ಬಲವಾಗಿವೆ. ಹಾಗಾಗಿ ಬೀಸಿದ ಗಾಳಿಗೆ ಅಂಗಡಿಗಳು ಕಿತ್ತೆಸೆಯಲ್ಪಟ್ಟಿವೆ. ಅಂಗಡಿಗಳಲ್ಲಿದ್ದ ಸೊತ್ತುಗಳು ಮಳೆ ನೀರಲ್ಲಿ ನೆನೆದಿವೆ. ಇತರ ಕೆಲವು ಅಂಗಡಿಗಳ ಗೋಡೆಗಳಲ್ಲಿ ಬಿರುಕು ಕಂಡಿದ್ದು ಕುಸಿಯುವ ಆತಂಕ ಎದುರಾಗಿದೆ.
ಶಾಸಕರ ಭೇಟಿ
ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಉಮಾನಾಥ ಕೋಟ್ಯಾನ್ ಸಂತ್ರಸ್ತರನ್ನು ಸಮಾಧಾನಿಸಿದರು. ‘ಇಂಥ ದುರ್ಬಲ ಅಂಗಡಿಗಳಲ್ಲಿ ಹೇಗೆ ವ್ಯಾಪಾರ ಮಾಡುವುದು? ನಮಗೆ 10 ಲಕ್ಷ ರೂ. ಜೀವವಿಮೆ ಕೊಡಿಸಿ’ ಎಂದು ತರಕಾರಿ ವ್ಯಾಪಾರಿ ರೋನಿ ಆಗ್ರಹಿಸಿದರು. ಇನ್ನೂ ಹಲವರು ತಮ್ಮ ಗೋಳನ್ನು ಹೇಳಿಕೊಂಡರು.
ಶಾಸಕರ ಸೂಚನೆಯಂತೆ ಪ್ರವಾಸಿ ಮಂದಿರದಲ್ಲಿ ನಡೆದ ಸಂತ್ರಸ್ತರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಪುರಸಭಾ ಮುಖ್ಯಾಧಿಕಾರಿ ಶೀನ ನಾಯಕ್ ಅವರು ಈ ಸಂತ್ರಸ್ತರಿಗೆ 5,000 ರೂ. ಪರಿಹಾರ ನೀಡಲು ಅವಕಾಶ ಇದೆ ಎಂದಾಗ ಶಾಸಕರು ಈ ಬಗ್ಗೆ ವಿಶೇಷ ಸಭೆ ಕರೆದು ಹೆಚ್ಚಿನ ಸಹಾಯಧನ ಒದಗಿಸುವ ಬಗ್ಗೆ ಪುರಸಭೆ ನಿರ್ಣಯ ಕೈಗೊಳ್ಳಬೇಕು ಎಂದರು. ಪ್ರಾಕೃತಿಕ ವಿಕೋಪದಡಿ ಸಹಾಯಧನ ಒದಗಿಸುವ ಬಗ್ಗೆ ತಾವು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡುವುದಾಗಿ ಹೇಳಿದರು. ಎಂಜಿನಿಯರ್ ದಿನೇಶ್ ಕುಮಾರ್, ಪುರಸಭಾ ಸದಸ್ಯರಾದ ರತ್ನಾಕರ ದೇವಾಡಿಗ, ಲಕ್ಷ್ಮಣ ಪೂಜಾರಿ, ಪ್ರಸಾದ್ ಕುಮಾರ್, ನಾಗರಾಜ ಪೂಜಾರಿ, ಹೊಸ ಮಾರುಕಟ್ಟೆ ನಿರ್ಮಾಣದ ಗುತ್ತಿಗೆದಾರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.