ಡಿ. 3: ಮೂಡಬಿದಿರೆ ವಿದ್ಯಾಗಿರಿಯಲ್ಲಿ ಆಳ್ವಾಸ್‌ ಉದ್ಯೋಗ ಸಿರಿ


Team Udayavani, Nov 30, 2017, 11:35 AM IST

Sandeep-US-Family-600.jpg

ಮೂಡಬಿದಿರೆ: ವರ್ಷದಿಂದ ವರ್ಷಕ್ಕೆ ಹೊಸ ಹೊಸ ಆಯಾಮ ಪಡೆದುಕೊಳ್ಳುತ್ತಿರುವ ಆಳ್ವಾಸ್‌ ನುಡಿಸಿರಿ -ಕನ್ನಡ ನಾಡುನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನಕ್ಕೆ ಈ ಬಾರಿ ಹೊಸದಾಗಿ ಸೇರ್ಪಡೆಯಾಗಿರುವ ಹಲವು ಅಂಶಗಳಲ್ಲಿ ಪ್ರಮುಖವಾಗಿರುವುದು ‘ಆಳ್ವಾಸ್‌ ಉದ್ಯೋಗ ಸಿರಿ’ ಉದ್ಯೋಗ ಮೇಳ ಡಿ. 3ರಂದು ವಿದ್ಯಾಗಿರಿಯ ಪಿ.ಜಿ. ಬ್ಲಾಕ್‌ನಲ್ಲಿ ಈ ಮೇಳ ನಡೆಯುತ್ತದೆ.

ಇದು ಎಸೆಸೆಲ್ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮತ್ತು ಅದರಾಚೆಗೆ ಹೆಚ್ಚಿನ ಶಿಕ್ಷಣ ಪಡೆದವರಿಗೆ ಮಾತ್ರ. (ಉಳಿದವರು ವರ್ಷಕ್ಕೊಮ್ಮೆ ನಡೆಯುವ ಆಳ್ವಾಸ್‌ ಪ್ರಗತಿ ಮೇಳ ಎಂಬ ಬೃಹತ್‌ ಉದ್ಯೋಗ ಮೇಳದಲ್ಲಿ ಪ್ರಯತ್ನಿಸಬಹುದು.)

ಯಾರು ಅರ್ಹರು?
ಎಸೆಸೆಲ್ಸಿವರೆಗೆ ಕನ್ನಡ ಮಾಧ್ಯಮದಲ್ಲೇ ಓದಿರಬೇಕು. ಮುಂದೆ ಐಟಿಐ, ಡಿಪ್ಲೊಮಾ, ಎಂಜಿನಿಯರಿಂಗ್‌, ಪಿ.ಜಿ. ಶಿಕ್ಷಣ ಪಡೆದಿದ್ದರೆ ಅದಕ್ಕೆ ತಕ್ಕ ಉದ್ಯೋಗಾವಕಾಶಗಳನ್ನು ಶೋಧಿಸಿ ತೋರಲಾಗುವುದು. ಈಗ ಕಾಲೇಜುಗಳಿಗೆ ಹೋಗುತ್ತಿರುವವರು ಅರ್ಹರಲ್ಲ.

ಏನೇನು ತರಬೇಕು?
ಅಭ್ಯರ್ಥಿಗಳು ತಮ್ಮ ಭಾವಚಿತ್ರ, ರೆಸ್ಯೂಮ್‌ನ ತಲಾ 5 ಪ್ರತಿ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದಿರುವುದರ ಪುರಾವೆಯಾಗಿ ಎಸೆಸೆಲ್ಸಿ ಅಂಕಪಟ್ಟಿ ಅಗತ್ಯ ತರಬೇಕು. ಹೆಚ್ಚಿನ ವಿದ್ಯಾರ್ಹತೆ ಇರುವವರು ಸಂಬಂಧಿತ ಅಂಕಪಟ್ಟಿಗಳ ಸಹಿತ ಡಿ. 3ರಂದು ಬೆಳಗ್ಗೆ 7.30ಕ್ಕೆ ವಿದ್ಯಾಗಿರಿಗೆ ಬರಬೇಕು. ಈಗಾಗಲೇ ಆನ್‌ಲೈನ್‌ ಮೂಲಕ ನೋಂದಣಿ ನಡೆಸಿದವರಿಗೆ ಮೊದಲಾಗಿ ಕಲರ್‌ ಕೋಡಿಂಗ್‌ ಒದಗಿಸಲಾಗುವುದು.

ಸ್ಥಳದಲ್ಲೇ ನೋಂದಣಿ ಮಾಡಿಸಲೂ ಅವಕಾಶವಿದೆ. 9.30ಕ್ಕೆ ಪುಟ್ಟ ಉದ್ಘಾಟನ ಕಾರ್ಯಕ್ರಮ ಇರುತ್ತದೆ. ನೋಂದಣಿ ಮಾಡಿಸಿಕೊಂಡು ಕಲರ್‌ ಕೋಡಿಂಗ್‌ ಪಡೆದುಕೊಂಡವರು ಸೂಕ್ತ ಕಂಪೆನಿಗಳ ಸಂದರ್ಶನ ಕೋಣೆಗೆ ಹೋಗಬೇಕು. ಉತ್ಪಾದನ ರಂಗದ ಕಂಪೆನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸಿರಿಯಲ್ಲಿ ಪಾಲ್ಗೊಳ್ಳುತ್ತಿವೆ. ಸೇಲ್ಸ್‌, ಐಟಿ, ಬ್ಯಾಂಕಿಂಗ್‌ ಸಹಿತ ಸುಮಾರು 80 ಕಂಪೆನಿಗಳು ಡಿ. 30ರಂದು ದಿನವಿಡೀ ಬಾಗಿಲನ್ನು ತೆರೆದಿರುತ್ತವೆ.

ಸಂಪೂರ್ಣ ಉಚಿತ
‘ಆಳ್ವಾಸ್‌ ಉದ್ಯೋಗ ಸಿರಿ’ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವವರಿಗೆ ಯಾವುದೇ ಶುಲ್ಕ ಇಲ್ಲ. ನುಡಿಸಿರಿಯ ಊಟೋಪಹಾರದ ಸೌಕರ್ಯವೂ ಇದೆ. ಅನಿವಾರ್ಯವಾಗಿ ಮುನ್ನಾದಿನ ಬಂದರೆ ವಾಸ್ತವ್ಯಕ್ಕೂ ಏರ್ಪಾಡು ಮಾಡಲಾಗುವುದು ಎಂದು ಉದ್ಯೋಗ ಸಿರಿಯ ಸಮಗ್ರ ಉಸ್ತುವಾರಿ ನೋಡಿಕೊಳ್ಳುತ್ತಿರುವ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ವಿವರಣೆ ನೀಡಿದ್ದಾರೆ.

ನೋಂದಣಿ ವಿವರಗಳಿಗಾಗಿ
www.alvasnudisiri.com 

ರಂಗಸಿರಿ 4 ದಿನ 5 ನಾಟಕ ಪ್ರದರ್ಶನ
ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಾಲ್ಕು ದಿನ ನಡೆಯುವ ವಿದ್ಯಾರ್ಥಿಸಿರಿ ಮತ್ತು ನುಡಿಸಿರಿ ಸಾಹಿತ್ಯ-ಸಾಂಸ್ಕೃತಿಕ ಉತ್ಸವದಲ್ಲಿ ನಾಡೋಜ ಏಣಗಿ ಬಾಳಪ್ಪ ವೇದಿಕೆಯಲ್ಲಿ ಸಂಜೆ 6.30ರ ವೇಳೆಗೆ ‘ಆಳ್ವಾಸ್‌ ರಂಗಸಿರಿ’-ಐದು ನಾಟಕಗಳ ಪ್ರದರ್ಶನ ಏರ್ಪಡಿಸಲಾಗಿದೆ. ನ. 30ರಂದು ಆಳ್ವಾಸ್‌ ರಂಗ ಅಧ್ಯಯನ ಕೇಂದ್ರದವರು ವೈದೇಹಿ ರಚಿಸಿ , ಜೀವನ್‌ ರಾಂ ಸುಳ್ಯ ನಿರ್ದೇಶಿಸಿರುವ ‘ಧಾಂ ಧೂಂ ಸುಂಟರಗಾಳಿ’ (ಶೇಕ್ಸ್‌ಪಿಯರ್‌ನ ‘ಟೆಂಪೆಸ್ಟ್‌’ ಆಧಾರಿತ),  ಡಿ.1ರಂದು ನಟನ ಮೈಸೂರು ತಂಡದವರು ಮಂಡ್ಯ ರಮೇಶ್‌ ನಿರ್ದೇಶಿಸಿದ ‘ಸುಭದ್ರಾ ಕಲ್ಯಾಣ’, ಡಿ. 2ರಂದು ಅನನ್ಯ ಬೆಂಗಳೂರು ಇವರು ಸೇತುರಾಂ ರಚಿಸಿ ನಿರ್ದೇಶಿಸಿದ ‘ಅತೀತ’, ಅಂದು ರಾತ್ರಿ 8.20ರಿಂದ ಮಣಿಪಾಲದ ಸಂಗಮ ಕಲಾವಿದರು ಎಂ.ಗಣೇಶ್‌ ನಿರ್ದೇಶಿಸಿದ ‘ವಾಲಿವಧೆ’, ಡಿ. 3ರಂದು ಸಂಜೆ ಮೈಸೂರಿನ ಜಿ.ಪಿ.ಐ.ಇ.ಆರ್‌. ರಂಗ ತಂಡದವರು ಡಾ| ನಾ.ದಾಮೋದರ ಶೆಟ್ಟಿ ರಚಿಸಿ, ಮೈಮ್‌ ರಮೇಶ್‌ ನಿರ್ದೇಶಿಸಿರುವ ‘ಸಿರಿ’ ನಾಟಕ ಪ್ರದರ್ಶಿಸಲಿದ್ದಾರೆ.

ಕನ್ನಡಕ್ಕೆ ಬಲ
ಕನ್ನಡ ಮಾಧ್ಯಮದಲ್ಲಿ ಕಲಿತವರು ಮತ್ತು ಕಲಿಯುತ್ತಿರುವವರ ಮನೋಸ್ಥೈರ್ಯವನ್ನು ದೃಢಗೊಳಿಸುವ ಒಂದು ಪ್ರಯತ್ನ. ಇತರರಿಗಿಂತ ಕನ್ನಡ ಮಾಧ್ಯಮ ಕಲಿತವರು ಈ ನಾಡು, ನುಡಿ, ಸಂಸ್ಕೃತಿಯ ಕುರಿತಾಗಿ ಸುಭದ್ರ ನೆಲೆಗಟ್ಟನ್ನು ಹೊಂದಿರುತ್ತಾರೆ. ಅವರಿಗೆ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ‘ನುಡಿಸಿರಿ’ ಔಚಿತ್ಯಪೂರ್ಣವಾಗಿ ನಡೆದಂತಾಗುತ್ತದೆ.
– ಡಾ| ಎಂ. ಮೋಹನ ಆಳ್ವ , ಅಧ್ಯಕ್ಷರು, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ

ಟಾಪ್ ನ್ಯೂಸ್

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್‌; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ

4-ut-khader

Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್

6

Mangaluru: ಅಪಾರ್ಟ್‌ಮೆಂಟ್‌, ಮಾಲ್‌ಗ‌ಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ

5

Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು

4

Kulur: ಗೈಲ್‌ ಪೈಪ್‌ಲೈನ್‌ ಕಾಮಗಾರಿ; ಹೆದ್ದಾರಿ ಕುಸಿತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.