ಡಿ. 26ರಂದು ಕೆಸಿಝಡ್‌ಎಂ ಸಭೆ ; ಸಿಆರ್‌ಝಡ್‌ ಮರಳುಗಾರಿಕೆಗೆ ಅನುಮತಿ ನಿರೀಕ್ಷೆ


Team Udayavani, Dec 6, 2021, 7:15 AM IST

ಡಿ. 26ರಂದು ಕೆಸಿಝಡ್‌ಎಂ ಸಭೆ ; ಸಿಆರ್‌ಝಡ್‌ ಮರಳುಗಾರಿಕೆಗೆ ಅನುಮತಿ ನಿರೀಕ್ಷೆ

ಸಾಂದರ್ಭಿಕ ಚಿತ್ರ.

ಮಂಗಳೂರು: ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಸಮಿತಿ (ಕೆಸಿಝಡ್‌ಎಂ)ಯ ಸಭೆ ಬೆಂಗಳೂರಿನಲ್ಲಿ ಡಿ. 26ರಂದು ನಡೆಯಲಿದ್ದು, ಇದರಲ್ಲಿ ಕರಾವಳಿಯ ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆಗೆ ಅನುಮತಿ ಲಭಿಸುವ ನಿರೀಕ್ಷೆ ಇದೆ.

ಸಿಆರ್‌ಝಡ್‌ನ‌ಲ್ಲಿ ಮರಳು ದಿಬ್ಬಗಳ ಸಮೀಕ್ಷೆ ನಡೆದು ವರದಿ ಸಿದ್ಧವಾಗಿದೆ. ಅದನ್ನು ತಾಂತ್ರಿಕ ವರದಿಗಾಗಿ ಎನ್‌ಐಟಿಕೆಗೆ ಕಳುಹಿಸಿ ಕೊಡಲಾಗಿದೆ. ಅದು ಒಂದೆರಡು ದಿನಗಳಲ್ಲಿ ಜಿಲ್ಲಾಧಿ ಕಾರಿ ಅಧ್ಯ ಕ್ಷತೆಯ ಜಿಲ್ಲಾ ಮರಳು ಉಸ್ತುವಾರಿ ಸಮಿತಿಗೆ ಸಲ್ಲಿಕೆಯಾಗಲಿದೆ. ಸಮಿತಿಯು ಅದರ ಪರಿ ಶೀಲನೆ ನಡೆಸಿ ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಸಮಿತಿ (ಕೆಸಿಝಡ್‌ಎಂ)ಗೆ ಅನುಮೋದನೆಗಾಗಿ ರವಾನಿಸಲಿದೆ. ಕೆಸಿಝಡ್‌ಎಂ ಸಭೆ 3 ತಿಂಗಳುಗಳಿಗೆ ಒಮ್ಮೆ ನಡೆಯುತ್ತದೆ. ಡಿ. 26ರ ಸಭೆಯಲ್ಲಿ ಅನುಮತಿ ಸಿಗದೆ ಇದ್ದರೆ ಮತ್ತೆ 3 ತಿಂಗಳು ಕಾಯಬೇಕು. ಹೀಗಾಗಿ ಮುಂಬರುವ ಸಭೆಯಲ್ಲೇ ವರದಿ ಪರಿಶೀಲನೆಯಾಗಿ ಅನುಮತಿ ಲಭ್ಯ ವಾಗುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಪ್ರಯತ್ನಗಳನ್ನು ನಡೆಸುತ್ತಿದೆ.

ಅನುಮತಿ ಲಭಿಸಿದರೆ ಜನವರಿ ಮೊದಲ ವಾರ ಮರಳುಗಾರಿಕೆ ಪರವಾನಿಗೆ ಪ್ರಕ್ರಿಯೆ ಆರಂಭಗೊಳ್ಳುವ ಸಾಧ್ಯತೆಯಿದೆ.

ಸಿಆರ್‌ಝಡ್‌ನ‌ಲ್ಲಿ ಮರಳು ಗಾರಿಕೆಗೆ ಪರಿಸರ ಇಲಾಖೆ ಈ ಹಿಂದೆ ನೀಡಿದ್ದ ಪರಿಸರ ವಿಮೋಚನ ಪತ್ರದ ಅವಧಿ ಸೆ. 16ರಂದು ಕೊನೆ ಗೊಂಡಿದ್ದರಿಂದ ಮರಳುಗಾರಿಕೆ ಸ್ಥಗಿತ ಗೊಂಡಿತ್ತು. ನೇತ್ರಾವತಿ, ಫಲ್ಗುಣಿ ನದಿಯ ಸಿಆರ್‌ಝಡ್‌ನ‌ಲ್ಲಿ ಮೀನುಗಾರಿಕೆ ಕಾಲೇಜಿನ ತಜ್ಞರು ಮರಳುದಿಬ್ಬಗಳ ಸಮೀಕ್ಷೆ ನಡೆಸಿ ವರದಿಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಲ್ಲಿಸಿದ್ದರು.

ಇದನ್ನೂ ಓದಿ:ಲಾವಾ ಸ್ಫೋಟಕ್ಕೆ 13 ಸಾವು : ಇಂಡೋನೇಷ್ಯಾದ ಪೂರ್ವಭಾಗದಲ್ಲಿರುವ ಲುಮಾಜಂಗ್‌ನಲ್ಲಿ ಘಟನೆ

ನಾನ್‌ ಸಿಆರ್‌ಝಡ್‌ ಆಸರೆ
ಪ್ರಸ್ತುತ ನಾನ್‌ ಸಿಆರ್‌ಝಡ್‌ ವಲಯದ 17 ಬ್ಲಾಕ್‌ಗಳಲ್ಲಿ ಮರಳುಗಾರಿಕೆ ನಡೆಯುತ್ತಿದೆ. ಪ್ರಸ್ತುತ ನಿರ್ಮಾಣ ಕಾಮಗಾರಿಗಳಿಗೆ ಆಸರೆಯಾಗಿರುವ ಮರಳು ಇಲ್ಲಿನದು. ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಪ್ರಕಾರ ನಾನ್‌ಸಿಆರ್‌ಝಡ್‌ ವಲಯದಲ್ಲಿ 50 ಸಾವಿರ ಮೆಟ್ರಿಕ್‌ ಟನ್‌ ಮರಳು ಲಭ್ಯವಿದ್ದು, ಸಿಆರ್‌ಝಡ್‌ ವಲಯ

ದಲ್ಲಿ ಮರಳುಗಾರಿಕೆ ಪ್ರಾರಂಭ ವಾಗುವವರೆಗೆ ಮರಳು ಪೂರೈಸಬಹು ದಾಗಿದೆ. ಆದರೆ ನಾನ್‌ಸಿಆರ್‌ಝಡ್‌ ವಲಯದಿಂದ ಮರಳು ಪಡೆಯಲು ವೆಚ್ಚ ಅಧಿಕ. ಅಲ್ಲದೆ ಇದು ಗಾರೆ ಕೆಲಸಕ್ಕೆ ಸೂಕ್ತವಲ್ಲ. ಆದುದರಿಂದ ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆ ಶೀಘ್ರ ಆರಂಭವಾಗ ಬೇಕು ಎಂಬುದು ಜಿಲ್ಲಾ ಸಿವಿಲ್‌ ಕಂಟ್ರಾಕ್ಟರ್‌ಗಳ ಒಕ್ಕೂಟದ ಆಗ್ರಹ.

ಉಡುಪಿ ಜಿಲ್ಲೆ: ಕೆಲವೆಡೆ ಆರಂಭ
ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು ಸಹಿತ ಕೆಲವೆಡೆ ಸಿಆರ್‌ಝಡ್‌ನ‌ಲ್ಲಿ ಈಗಾಗಲೇ ಮರಳುಗಾರಿಕೆ ಆರಂಭವಾಗಿದೆ. ವಾರಾಹಿ ನದಿಯಲ್ಲಿ 2019ರ ಸೆಪ್ಟಂಬರ್‌ನಿಂದ 2024ರ ಸೆಪ್ಟಂಬರ್‌ವರೆಗೆ ಮರಳುಗಾರಿಕೆ ನಡೆಸಲು ಇಬ್ಬರಿಗೆ ಅನುಮತಿ ಇದ್ದು, ಅ. 15ರಿಂದ ಆರಂಭವಾಗಿದೆ. ಕುಂದಾಪುರದಲ್ಲಿಯೂ ಪರವಾನಿಗೆ 2024ರ ವರೆಗೆ ಇದ್ದು, ಕೆಲವೆಡೆ ಮರಳುಗಾರಿಕೆ ಆರಂಭಗೊಂಡಿದೆ.

ಎನ್‌ಐಟಿಕೆಯಿಂದ ತಾಂತ್ರಿಕ ವರದಿ ಒಂದೆರಡು ದಿನಗಳಲ್ಲಿ ಲಭ್ಯವಾಗಲಿದೆ. ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಇದನ್ನು ರಾಜ್ಯ ಸರಕಾರಕ್ಕೆ ಕೂಡಲೇ ಕಳುಹಿಸಿಕೊಡಲಿದ್ದು, ಡಿ. 26ರಂದು ನಡೆಯುವ ಕೆಸಿಝಡ್‌ಎಂ ಸಭೆಯಲ್ಲಿ ಮಂಡನೆಯಾಗಲಿದೆ.
– ಡಾ| ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Dinesh-Gundurao

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.