ಆಟೋ ಓಡಿಸುವ ಅಪ್ಪ, ಬೀಡಿ ಕಟ್ಟುವ ಅಮ್ಮ, ಮಗ ವೈದ್ಯ!
Team Udayavani, May 3, 2018, 11:06 AM IST
ಕಡಬ: ಜೀವನ ನಿರ್ವಹಣೆಗೆಂದು ಚಾಲಕ ವೃತ್ತಿಯನ್ನು ಆರಿಸಿಕೊಂಡು ಗುಜರಾತ್, ಆಸ್ಸಾಂ ವರೆಗೂ ದೇಶ ಸುತ್ತಿ ಲೋಕ ಜ್ಞಾನ ಹೊಂದಿದ ಅಪ್ಪ. ಬಡತನವನ್ನು ಹೋಗಲಾಡಿಸಲು ಶಿಕ್ಷಣವೇ ಅಸ್ತ್ರವೆಂದು ನಂಬಿದ್ದ ಅಮ್ಮ. ಇವರ ಕನಸನ್ನು ನನಸಾಗಿಸಲು ಹಗಲಿರುಳು ಕಷ್ಟಪಟ್ಟು ಓದಿ ಮಗ ಕೊನೆಗೂ ಸ್ಟೆತಾಸ್ಕೋಪ್ ಹಿಡಿದಿದ್ದಾನೆ!
ಕಡಬ ತಾ| ನ ಎಡಮಂಗಲ ಗ್ರಾಮದ ದೋಣಿಮನೆ ನಿವಾಸಿ ದುಷ್ಯಂತ್ ಹಾಗೂ ಬೀಡಿ ಕಟ್ಟುವ ಪ್ರೇಮಾ ದಂಪತಿಯ ಹಿರಿಯ ಪುತ್ರ ಡಾ| ಅವಿನ್ ಡಿ.ಪಿ. ಎಂಬ ಹಳ್ಳಿ ಹುಡುಗನ ಸಾಹಸಗಾಥೆ ಇದು.
ಎಸೆಸೆಲ್ಸಿ ತನಕ ಕಡಬದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿದ ಅವಿನ್ ಎಸೆಸೆಲ್ಸಿಯಲ್ಲಿ ಶೇ. 95 ಅಂಕ ಗಳಿಸಿದ. ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ದತ್ತು ಸ್ವೀಕಾರ ಯೋಜನೆಯಡಿ ಉಚಿತ ಸೀಟು ಗಳಿಸಿದ. ಇದೇ ಆತನ ಬದುಕಿನ ದಿಕ್ಕನ್ನು ಬದಲಿಸಿತು. ನಿತ್ಯ ಬೆಳಗ್ಗೆ 4:45ಕ್ಕೆ ಎದ್ದು ದಿನಚರಿ ಆರಂಭಿಸಿದ. ಸತತ 12ರಿಂದ 14 ಗಂಟೆಗಳ ಕಾಲ ಓದಿನಲ್ಲಿ ತೊಡಗಿಸಿಕೊಳ್ಳುತ್ತಿದ್ದ. ಈ ಹುಡುಗ ವೈದ್ಯನಾಗುವ ಕನಸು ಕಂಡವನಲ್ಲ. ಅದು ತನಗೆ ನಿಲುಕದ ವಿಚಾರ ಎಂದುಕೊಂಡಿದ್ದ. ಆದರೆ, ಆಳ್ವಾಸ್ ಸಂಸ್ಥೆಯ ಉಚಿತ ಶಿಕ್ಷಣ, ಹೆತ್ತವರ ಛಲ ಹಾಗೂ ಕಷ್ಟಪಟ್ಟರೆ ವೈದ್ಯನಾಗುವುದು ಸಾಧ್ಯ ಎಂಬ ಮನೋಭಾವ ಆತನನ್ನು ವೈದ್ಯನನ್ನಾಗಿಸಿತು.
ಸತತ ಪರಿಶ್ರಮದಿಂದ ಸಿಇಟಿಯಲ್ಲಿ 685ನೇ ರ್‍ಯಾಂಕ್ ಗಳಿಸಿದ ಅವರು, ಸರಕಾರದ ಪ್ರತಿಷ್ಠಿತ ಮೈಸೂರು ಮೆಡಿಕಲ್ ಕಾಲೇಜಿನ ಸೀಟು ಪಡೆದರು. ಎಂಬಿಬಿಎಸ್ ಪದವಿ ಪೂರೈಸಿ, ಒಂದು ವರ್ಷ ಗೃಹವೈದ್ಯರಾಗಿಯೂ ಸೇವೆ ಸಲ್ಲಿಸಿದರು. 2018ರ ಮಾರ್ಚ್ 22ರಂದು ನಿಮ್ಹಾನ್ಸ್ ಆಸ್ಪತ್ರೆಯ ನಿರ್ದೇಶಕ ಡಾ| ಬಿ.ಎನ್. ಗಂಗಾಧರ್ ಅವರಿಂದ ವೈದ್ಯ ಪದವಿಯನ್ನು ಸ್ವೀಕರಿಸಿದಾಗ ತಂದೆ – ತಾಯಿಯ ಕನಸನ್ನು ನನಸಾಗಿಸಿದ ಸಂತೃಪ್ತಿಯಿಂದ ಆನಂದಭಾಷ್ಪ ಹೊರಹೊಮ್ಮಿತು. ಈಗ ಎಂ.ಡಿ. ಪ್ರವೇಶ ಪರೀಕ್ಷೆಗೆ ಅವಿನ್ ಸಜ್ಜಾಗಿದ್ದಾರೆ. ಅವರ ತಮ್ಮನೂ ಸರಕಾರಿ ಕೋಟಾದಲ್ಲಿ ದಂತ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದು, ಮೂರು ವರ್ಷಗಳಲ್ಲಿ ಅವರೂ ವೈದ್ಯರಾಗಲಿದ್ದಾರೆ.
ತ್ಯಾಗಮಯಿ ತಾಯಿ
ಹೊಟ್ಟೆ ತುಂಬ ಊಟ ಮಾಡುವುದಕ್ಕೂ ಲೆಕ್ಕಾಚಾರ ಹಾಕುವ ಸ್ಥಿತಿಯಲ್ಲೂ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿಸಿ, ಉನ್ನತ ಶಿಕ್ಷಣ ಕೊಡಿಸಬೇಕೆಂಬ ಮಹದಾಸೆ ಹೆತ್ತವರದಾಗಿತ್ತು. ಇದನ್ನು ಈಡೇರಿಸಲು ತಾಯಿ ಕೊರಳಲ್ಲಿದ್ದ ಚಿನ್ನದ ಓಲೆಯನ್ನೂ ಅಡವಿಟ್ಟರು. ರಾತ್ರಿ 12ರ ತನಕ ಸೀಮೆಎಣ್ಣೆ ದೀಪದಲ್ಲಿ ಓದಿದ ಅವಿನ್‌ಗೆ ಬೀಡಿ ಕಟ್ಟುತ್ತ ಅಮ್ಮ ಜತೆಯಾಗುತ್ತಿದ್ದರು. ರಿಕ್ಷಾ ಓಡಿಸುತ್ತಿದ್ದ ತಂದೆ ದುಷ್ಯಂತ, ಆ ಆದಾಯ ಸಾಲದು ಎಂದರಿತಾಗ ಬೇಸಗೆಯಲ್ಲಿ ಅಡಗೆ ಕೊಯ್ಯುವ, ಅಡಕೆ ತೋಟಗಳಿಗೆ ಮದ್ದು ಬಿಡು ವ ಕಾಯಕ ಮಾಡಿದರು. ಮರಳು ಸಾಗಾಟದ ಗುತ್ತಿಗೆದಾರರ ಜತೆಗೂ ಕೆಲಸ ಮಾಡಿದರು.
ಹೆತ್ತವರ ಕನಸು
ಮನೆಯಲ್ಲಿ ಬಡತನವಿದ್ದರೂ ಹೆತ್ತವರು ನಮಗಾಗಿ ಹಲವು ತ್ಯಾಗಗಳನ್ನು ಮಾಡಿ ನೀಡಿದ ನಿರಂತರ ಪ್ರೋತ್ಸಾಹದಿಂದಾಗಿ ಉನ್ನತ ವ್ಯಾಸಂಗ ಮಾಡುವುದಕ್ಕೆ ಸಾಧ್ಯವಾಗಿದೆ. ತಂದೆ ತಾಯಿಯ ಕನಸನ್ನು ನನಸು ಮಾಡಿದ ಬಗ್ಗೆ ಅಭಿಮಾನವಿದೆ.
– ಡಾ| ಅವಿನ್
ನಾಗರಾಜ್ ಎನ್.ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.