ದಿನಕ್ಕೆ 44 ಕಿ.ಮೀ. ಪ್ರಯಾಣ; ರಾಜ್ಯಕ್ಕೆ ದ್ವಿತೀಯ
Team Udayavani, May 1, 2019, 6:10 AM IST
ಸುಬ್ರಹ್ಮಣ್ಯ: ಗ್ರಾಮೀಣ ಪರಿಸರದ ಪ್ರತಿಭಾನ್ವಿತೆ, ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕೆ.ಆರ್. ಕೃಪಾ ಎಸೆಸೆಲ್ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದಿದ್ದಾಳೆ.
6 ಕಿ.ಮೀ. ಕಾಲ್ನಡಿಗೆ, ಬಳಿಕ ಬಸ್ ಯಾನ ಸೇರಿ ಒಟ್ಟು ನಿತ್ಯ 44 ಕಿ.ಮೀ. ಶಾಲೆಗೆ ಪ್ರಯಾಣ. ವಿದ್ಯುತ್ ಇಲ್ಲದಿದ್ದರೆ ಮಂದ ಬೆಳಕಿನಲ್ಲಿ ಓದು. ಇಷ್ಟೆಲ್ಲ ಪ್ರತಿಕೂಲಗಳ ನಡುವೆ ಕೃಪಾ ಸಾಧನೆ ಮಾಡಿದ್ದಾಳೆ.
ಕಡಬ ತಾಲೂಕಿನ ಕೇನ್ಯ ಗ್ರಾಮದ ಕಣRಲ್ ಕೃಷಿಕ ರವಿ ಅಮ್ಮಣ್ಣಾಯ ಮತ್ತು ಗೀತಾ ಅಮ್ಮಣ್ಣಾಯ ದಂಪತಿಯ ದ್ವಿತೀಯ ಪುತ್ರಿ ಕೃಪಾ. ಬೆಳಗ್ಗೆ 4.30ರಿಂದ 7 ಮತ್ತು ಸಂಜೆ 7ರಿಂದ 10ರ ವರೆಗೆ ನಿತ್ಯ ಆರು ತಾಸು ಅಭ್ಯಾಸ ನಡೆಸುತ್ತಿದ್ದಳು. ಬಹುತೇಕ ದಿನ ವಿದ್ಯುತ್ ಇರುತ್ತಿರಲಿಲ್ಲ. ಆಗ ಟಾರ್ಚ್ ಉರಿಸಿಟ್ಟು ಓದುತ್ತಿದ್ದಳು.
ರಜಾ ದಿನಗಳಲ್ಲಿ ಓದಿಗೆ ಏಕಾಗ್ರತೆ ಬಯಸಿ ಸಮೀಪದ ಬಟ್ರಾಪ್ಪಾಡಿ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ತೆರಳಿ ಓದುತ್ತಿದ್ದೆ- ಇದು ಕೃಪಾಳ ಮನದಾಳ.
ಆಕೆ ಮುಂದುವರಿಸಿ ಹೇಳು ತ್ತಾಳೆ- ಪಠ್ಯವನ್ನು ಅಂದಂದೇ ಓದುತ್ತಿದ್ದೆ. ಮನೆಯಲ್ಲಿ ತಂದೆ, ತಾಯಿ ಓದಿಗೆ ಪೂರಕ ವಾತಾವರಣ ನಿರ್ಮಿಸಿಕೊಡುತ್ತಿದ್ದರು.
ತಂದೆ ರವಿ ಅಮ್ಮಣ್ಣಾಯ ವಾಣಿಜ್ಯ ಶಾಸ್ತ್ರ ಪದವೀಧರರು, ಪ್ರಗತಿಪರ ಕೃಷಿಕರು. ತಾಯಿ ಗೃಹಿಣಿ.
ಪಠ್ಯಪುಸ್ತಕ ಕೂಡ
ಓದಬೇಕು. ಹೆತ್ತವರು, ಶಿಕ್ಷಕ ವೃಂದ ಮತ್ತು ಶಿಕ್ಷಣ ಸಂಸ್ಥೆಯ ಸಹಕಾರದಿಂದ ಸಾಧನೆ ಮಾಡಲು ಸಾಧ್ಯವಾಗಿದೆ. ಬೇಗನೆ ಎದ್ದು ಓದುವುದು ಹಿತವೆನಿಸುತ್ತಿತ್ತು. ಆರಂಭದ ದಿನಗಳಿಂದಲೇ ಓದಿನ ಕಡೆಗೆ ಗಮನಹರಿಸುತ್ತಿದ್ದೆ.
-ಕೃಪಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.