ದಕ್ಷಿಣ ಕನ್ನಡ: 68,952 ಕಡತಗಳ ವಿಲೇವಾರಿ: ಸಚಿವ ಸುನಿಲ್ ಕುಮಾರ್
Team Udayavani, Feb 27, 2022, 6:40 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆ. 19ರಿಂದ 28ರ ವರೆಗೆ ಹಮ್ಮಿಕೊಂಡಿರುವ ಕಡತ ವಿಲೇವಾರಿಯಲ್ಲಿ ಫೆ. 25ರ ವರೆಗೆ ಒಟ್ಟು 68,925ನ್ನು ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.
45 ಇಲಾಖೆಗಳಲ್ಲಿ ಒಟ್ಟು 85,384 ಕಡತಗಳು ವಿಲೇವಾರಿ ಬಾಕಿ ಇದ್ದವು. ಈವರೆಗೆ ಶೇ. 81ರಷ್ಟು ವಿಲೇವಾರಿ ಆಗಿವೆ. ಜತೆಗೆ ಪಿಂಚಣಿ, 94ಸಿ ಹಾಗೂ 94ಸಿಸಿ ಸಹಿತ ವಿವಿಧ ಸೌಲಭ್ಯಗಳ 1,700 ಹೊಸ ಅರ್ಜಿಗಳನ್ನೂ ವಿಲೇ ಮಾಡಲಾಗಿದೆ. ಫೆ. 29ರ ವರೆಗೆ ಈ ಪ್ರಕ್ರಿಯೆ ಮುಂದುವರಿಯಲಿದ್ದು ಬಳಿಕ ತಾಲೂಕು ಮಟ್ಟದಲ್ಲಿ ಮೇಳ ಆಯೋಜಿಸಲಾಗುವುದು ಎಂದರು.
ಪ್ರತಿಯೊಂದು ಕಡತಕ್ಕೂ ಜೀವ ಇದೆ. ಅದರ ಹಿಂದೆ ಒಂದು ಜೀವನ ಇದೆ. ಅದುದರಿಂದ ಯಾವುದೇ ಕಡತ ಇನ್ನು ಮುಂದೆ ವಿನಾ ಕಾರಣ ವಿಲೇವಾರಿಯಾಗದೆ ಉಳಿಯ ಬಾರದು ಮತ್ತು ಪ್ರತೀ ವರ್ಷ ಇಂತಹ ಕಡತ ಅಭಿ ಯಾನ ಹಮ್ಮಿಕೊಳ್ಳುವ ಸಂದರ್ಭ ಬರಬಾರದು ಎಂದರು.
ಸಂಸದ ನಳಿನ್ ಕುಮಾರ್ , ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಉಪಸ್ಥಿತರಿದ್ದರು.
ಮಂಗಳೂರಿನಲ್ಲಿ 400 ಕೆ.ವಿ. ಸಬ್‌ಸ್ಟೇಶನ್
ದ.ಕ. ಜಿಲ್ಲೆಯಲ್ಲಿ ವಿದ್ಯುತ್‌ಗೆ ಬೇಡಿಕೆಗಳು ಹೆಚ್ಚುತ್ತಿದ್ದು ಮಂಗಳೂರಿನಲ್ಲಿ 400 ಕೆ.ವಿ. ವಿದ್ಯುತ್ ಸಬ್‌ಸ್ಟೇಶನ್ ಸ್ಥಾಪಿಸಲಾಗುವುದು. ಮೂರು ಕಡೆ ಜಾಗ ಪರಿಶೀಲಿಸಿದ್ದು ಜಾಗ ಅಂತಿಮಗೊಳಿಸಿ ಶೀಘ್ರ ನಿರ್ಮಾಣ ಕಾರ್ಯ ಆರಂಭಿಸಲಾಗುವುದು. ಜಿಲ್ಲೆಯಲ್ಲಿ ಈವರೆಗೆ 400 ಕೆ.ವಿ. ಸಾಮರ್ಥ್ಯದ ಸಬ್‌ಸ್ಟೇಶನ್ ಇರಲಿಲ್ಲ ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.