ಅನುದಾನ ಸದ್ಬಳಕೆ: ದ.ಕ. ಆರೋಗ್ಯ ಇಲಾಖೆ ಮುಂದು
ಸತತ 2 ವರ್ಷಗಳಿಂದ ಸ್ಥಾನ ; ರಾಮನಗರ ದ್ವಿತೀಯ ; ಕೊನೇ ಸ್ಥಾನದಲ್ಲಿ ಬಳ್ಳಾರಿ
Team Udayavani, Oct 25, 2019, 7:00 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಆರೋಗ್ಯ ಇಲಾಖೆಗೆ ನೀಡುವ ಅನುದಾನದ ಸದ್ಬಳಕೆಯಲ್ಲಿ ಸತತ 2 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆ 2ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದು, ಈ ವರ್ಷಾರ್ಧದಲ್ಲಿ ಮೊದಲ ಸ್ಥಾನದಲ್ಲಿದೆ.
2017-18ನೇ ಸಾಲಿನಲ್ಲಿ ದ.ಕ. ಜಿಲ್ಲಾ ಆರೋಗ್ಯ ಇಲಾಖೆಗೆ 28.56 ಕೋ. ರೂ. ಬಿಡುಗಡೆಯಾಗಿದ್ದು, 25.98 ಕೋ. ರೂ. ಬಳಕೆ ಮಾಡಿಕೊಂಡು ಶೇ.91ರಷ್ಟು ಗುರಿ ಸಾಧಿಸಿದೆ. 2018-19ನೇ ಸಾಲಿನ 36.70 ಕೋ.ರೂ.ಗಳಲ್ಲಿ 31.3 ಕೋಟಿ ರೂ.ಗಳು ವಿನಿಯೋಗವಾಗಿ ಶೇ.85ರಷ್ಟು ಗುರಿ ಸಾಧನೆಯಾಗಿದೆ.
ಈ ಎರಡೂ ವರ್ಷಗಳಲ್ಲಿ ಕ್ರಮವಾಗಿ ಕೋಲಾರ ಮತ್ತು ಚಿತ್ರದುರ್ಗ ಜಿಲ್ಲೆಗಳು ಮೊದಲ ಸ್ಥಾನದಲ್ಲಿದ್ದವು. 2019-20ನೇ ಸಾಲಿನ ಮೊದಲ 6 ತಿಂಗಳಲ್ಲಿ ದಕ್ಷಿಣ ಕನ್ನಡವು ಅನುದಾನ ಸದ್ಬಳಕೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಸ್ಥಾನವನ್ನು ವರ್ಷಪೂರ್ತಿ ಕಾಯ್ದುಕೊಳ್ಳಲು ಪಣ ತೊಟ್ಟಿದೆ. ಮೊದಲ ಸ್ಥಾನದಲ್ಲಿದ್ದರೂ ಬಾಕಿ ಮೊತ್ತವನ್ನು ತತ್‌ಕ್ಷಣವೇ ಸಮರ್ಪಕವಾಗಿ ವಿನಿಯೋಗಿಸಲು ಸಚಿವರು ದ.ಕ. ಆರೋಗ್ಯ ಇಲಾಖೆಗೆ ತಾಕೀತು ಮಾಡಿದ್ದಾರೆ.
9ನೇ ಸ್ಥಾನದಲ್ಲಿ ಉಡುಪಿ
2019-20ನೇ ಸಾಲಿನಲ್ಲಿ ದ.ಕ. ಜಿಲ್ಲೆಗೆ ಒಟ್ಟು 36.45 ಕೋ.ರೂ. ಅನುದಾನ ಅನುಮೋದನೆಗೊಂಡಿದ್ದು, ಈಗಾಗಲೇ 14.58 ಕೋಟಿ ರೂ. ಖರ್ಚಾಗಿದೆ. ಅನುಮೋದಿತ 21.86 ಕೋ.ರೂ.ಗಳ ಪೈಕಿ 8.59 ಕೋ.ರೂ. ಬಳಕೆ ಮಾಡುವ ಮೂಲಕ ರಾಮನಗರ ಎರಡನೇ ಸ್ಥಾನದಲ್ಲಿದೆ. 26 ಕೋ. ರೂ. ಪೈಕಿ 10 ಕೋ.ರೂ.ಗಳನ್ನು ಬಳಸಿ ಉಡುಪಿ 9ನೇ ಸ್ಥಾನದಲ್ಲಿದೆ. ಅನುದಾನದ ಸದ್ಬಳಕೆಯಲ್ಲಿ ವಿಫಲವಾದ ಎಲ್ಲ 30 ಜಿಲ್ಲೆ ಮತ್ತು ಬಿಬಿಎಂಪಿಗೆ ಆರೋಗ್ಯ ಸಚಿವರು ಮೂರು ತಿಂಗಳ ಗಡುವು ನೀಡಿದ್ದಾರೆ.
ಅನುದಾನ ಸದ್ವಿನಿಯೋಗ
ವೇತನ, ಆರೋಗ್ಯ ಕೇಂದ್ರಗಳಿಗೆ ಮುಕ್ತ ನಿಧಿ ಅನುದಾನ, ಜನನಿ ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಯೋಜನೆ, ರಾಷ್ಟ್ರೀಯ ಔಷಧ ಅನುದಾನ, ಲ್ಯಾಬ್‌ಗಳಲ್ಲಿ ಉಚಿತ ಸೇವೆ, ಸಿಬಂದಿ ತರಬೇತಿ, ತಾಯಿ ಮಕ್ಕಳ ಅಭಿವೃದ್ಧಿ ಸಂಬಂಧಿ ಸೇರಿ ದಂತೆ ವಿವಿಧ ಕಾರ್ಯಕ್ರಮಗಳಿಗೆ ಈ ಅನುದಾನವನ್ನು ಬಳಕೆ ಮಾಡಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಗ್ಯ ಸಚಿವರ ಜಿಲ್ಲೆಗೆ ಕೊನೆ ಸ್ಥಾನ
ಆರೋಗ್ಯ ಸಚಿವ ಶ್ರೀರಾಮುಲು ಅವರ ತವರು ಜಿಲ್ಲೆಯಾದ ಬಳ್ಳಾರಿ ಅನುದಾನ ಸದ್ಬಳಕೆಯಲ್ಲಿ ಸದ್ಯ ಕೊನೆಯ ಸ್ಥಾನದಲ್ಲಿದೆ. ಮುಂದಿನ ಆರು ತಿಂಗಳುಗಳಲ್ಲಿ ಹೆಚ್ಚು ಅನುದಾನ ಬಳಕೆ ಮಾಡಿ ತನ್ನ ಜಿಲ್ಲೆಯಲ್ಲಿ ಪರಿಣಾಮಕಾರಿ ಆರೋಗ್ಯ ಸೇವೆ ನೀಡುವಂತೆ ಮಾಡುವ ಸವಾಲು ಆರೋಗ್ಯ ಸಚಿವರಿಗಿದೆ. ಅನುಮೋದಿತ 66.63 ಕೋ.ರೂ. ಪೈಕಿ 16.32 ಕೋ.ರೂ.ಗಳನ್ನು ಬಳ್ಳಾರಿ ಜಿಲ್ಲಾ ಆರೋಗ್ಯ ಇಲಾಖೆ ಬಳಸಿದೆ.
400 ಕೋ.ರೂ. ಬಾಕಿ!
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯ ಆರೋಗ್ಯ ಇಲಾಖೆಗೆ 2019-20ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ಒಟ್ಟು ಅನುದಾನದ ಪೈಕಿ ಸುಮಾರು 400 ಕೋ.ರೂ. ಬಳಕೆಯಾಗಿಲ್ಲ. ಬಳಕೆ ಮಾಡದೆ ಇದ್ದಲ್ಲಿ ಮುಂದಿನ ಬಾರಿ ಅನುದಾನ ಕೇಳುವುದು ಕಷ್ಟವಾಗುತ್ತದೆ. ದ.ಕ. ಜಿಲ್ಲೆಯವರು ಇತರರಿಗಿಂತ ಹೆಚ್ಚು ಖರ್ಚು ಮಾಡಿದ್ದು, ಮೊದಲ ರ್‍ಯಾಂಕಿಂಗ್ ನೀಡಲಾಗಿದೆ. ಆದರೂ ಜಿಲ್ಲೆಯಲ್ಲಿ ಅರ್ಧಕ್ಕೂ ಹೆಚ್ಚು ಹಣ ಖರ್ಚಾಗದೆ ಬಾಕಿಯಿದ್ದು, ಮುಂದಿನ ಮೂರು ತಿಂಗಳೊಳಗೆ ವಿನಿಯೋಗಿಸುವಂತೆ ಸೂಚಿಸಲಾಗಿದೆ ಎಂದು ಸಚಿವ ಶ್ರೀರಾಮುಲು “ಉದಯವಾಣಿ’ಗೆ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಅನುದಾನ ಸದ್ಬಳಕೆಯಲ್ಲಿ ಕೊನೆಯ ಸ್ಥಾನದಲ್ಲಿದೆ. ಉಳಿದ ಜಿಲ್ಲೆಗಳಲ್ಲಿಯೂ ಶೇ. 100 ಸಾಧನೆ ಆಗಿಲ್ಲದ ಕಾರಣ ಒಟ್ಟಾರೆ ಈ ಯೋಜನೆ ವಿನಿಯೋಗದಲ್ಲಿ ವಿಫಲವಾಗಿದೆ. ಬಳ್ಳಾರಿ ಸಹಿತ ಎಲ್ಲ ಜಿಲ್ಲೆಗಳ ಆರೋಗ್ಯಾಧಿಕಾರಿಗಳಿಗೆ ಮೂರು ತಿಂಗಳ ಟಾರ್ಗೆಟ್ ನೀಡಲಾಗಿದೆ. ಇಲ್ಲವಾದಲ್ಲಿ ಆಯಾ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು.
– ಶ್ರೀರಾಮುಲು, ಆರೋಗ್ಯ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.