ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ವಾಟರ್‌ ವೇ

ಫಲ್ಗುಣಿ ನದಿಯಲ್ಲಿ ಬಾರ್ಜ್‌ ಮೂಲಕ ವಾಹನ, ಪ್ರಯಾಣಿಕರ ಸಂಚಾರ

Team Udayavani, Sep 17, 2022, 7:10 AM IST

ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ವಾಟರ್‌ ವೇ

ಮಂಗಳೂರು: ಇದು ಜಿಲ್ಲೆಯ ನ್ಯಾಶ ನಲ್‌ ವಾಟರ್‌ ವೇ, ಹೆಸರು ಎನ್‌ಡಬ್ಲ್ಯು 43. ಈ ಮೂಲಕ ಜಿಲ್ಲೆಯಲ್ಲಿ ಪ್ರಥಮವಾಗಿ ಮಂಗಳೂರಿಗೆ ಜಲಮಾರ್ಗ ಲಭಿಸಿದಂತಾಗಿದೆ. ಸರಕು ಸಾಗಣೆ, ಪ್ರಯಾಣಿಕರ ಸಂಚಾರಕ್ಕೆ ನೆರವಾಗುವಂತೆ ಫಲ್ಗುಣಿ ನದಿಯಲ್ಲಿ ಬಾರ್ಜ್‌ ಸಂಚಾರ ಯೋಜನೆ ಅಂತಿಮಗೊಂಡಿದೆ.

ರಾಜ್ಯದ ಮೆರಿಟೈಂ ಮಂಡಳಿಯವರು ಸಿದ್ಧಪಡಿಸಿದ ಒಟ್ಟು 29.62 ಕೋಟಿ ರೂ. ವೆಚ್ಚದ ಯೋಜನೆಗೆ ಸಾಗರಮಾಲಾ ದಿಂದ ಅಂತಿಮ ಅನುಮೋ ದನೆ ಬಂದಿದ್ದು, ಶೀಘ್ರ ಕೆಲಸ ಆರಂಭವಾಗಲಿದೆ.

ದಕ್ಷಿಣಕ್ಕೆ ಹೊಯ್ಗೆ ಬಜಾರ್‌, ಉತ್ತರಕ್ಕೆ ಕೂಳೂರು -ಇವೆರಡು ಈ ಜಲಮಾರ್ಗದ ಕೊನೆಯ ಬಿಂದುಗಳು. ಈ ಯೋಜನೆ ಕಾರ್ಯ ರೂಪಕ್ಕೆ ಬಂದಾಗ ಮಂಗಳೂರು ನಗರವನ್ನು ಬೈಪಾಸ್‌ ಮಾಡಿ ಕೊಂಡು ಮುಖ್ಯವಾಗಿ ಸರಕು ಸಾಗಣೆ ಲಾರಿಗಳು ಬಂದರು ಕಡೆಯಿಂದ ಕೂಳೂರುವರೆಗೆ ಬಾರ್ಜ್‌ನಲ್ಲೇ ಸಾಗಬಹುದು. ಇದರಿಂದ ಡೀಸೆಲ್‌ ಉಳಿತಾಯ, ನಗರದಲ್ಲಿ ವಾಹನ ದಟ್ಟಣೆ ನಿಯಂ ತ್ರಣಕ್ಕೆ ಅನುಕೂಲವಾಗಲಿದೆ. ಪ್ರವಾಸೋದ್ಯಮ ದೃಷ್ಟಿಯಿಂದಲೂ ಒಳ್ಳೆಯದು ಎನ್ನಲಾಗಿದೆ.

ಏನೇನಿದೆ ಯೋಜನೆಯಲ್ಲಿ?
ಎನ್‌ಡಬ್ಲ್ಯು 43ರಲ್ಲಿ ಹೊಯ್ಗೆ ಬಜಾರ್‌ ಮತ್ತು ಕೂಳೂರು -ಈ ಎರಡು ಕಡೆ ಫಲ್ಗುಣಿ ನದಿಯಲ್ಲಿ ರ್‍ಯಾಂಪ್‌ ಜೆಟ್ಟಿ ನಿರ್ಮಾಣ ಮಾಡಲಾಗುತ್ತದೆ. ಲಾರಿಗಳು ಅಥವಾ ಪ್ರಯಾಣಿಕರ ವಾಹನಗಳು ಬಾರ್ಜ್‌ಗೆ ಏರಲು ಇದು ಸಹಾಯಕ.
ಮಂಗಳೂರಿನ ವಾಣಿಜ್ಯ ಕೇಂದ್ರವಾದ ಬಂದರಿಗೆ ಹಲವು ಸರಕು ಲಾರಿಗಳು, ಮೀನಿನ ಟ್ರಕ್‌ಗಳು ಬಂದು ಹೋಗುತ್ತಿರುತ್ತವೆ.

ಅವುಗಳ ಚಾಲಕರು ಬಾರ್ಜ್‌ಗೆ ಕನಿಷ್ಠ ದರ ತೆತ್ತು ಕೂಳೂರು ಸೇತುವೆ ಸಮೀಪ ಬಂದು ಸೇರಬಹುದು, ಅಲ್ಲಿಂದ ಹೆದ್ದಾರಿಯಲ್ಲಿ ಪ್ರಯಾಣ ಮುಂದುವರಿಸಬಹುದು.

ಇಲಾಖೆಯಿಂದಲೇ ಬಾರ್ಜ್‌ ಯೋಜನೆಗೆ ಸಂಬಂಧಿಸಿ ಅಗತ್ಯ ವಿರುವ ಬಾರ್ಜ್‌ ಖರೀದಿಸ ಲಾಗು ತ್ತದೆ, ಇದಕ್ಕಾಗಿ 6.45 ಕೋಟಿ ರೂ. ಮೀಸಲಿರಿಸಲಾಗಿದೆ. ಆರಂಭದಲ್ಲಿ 4 ಟ್ರಕ್‌ ನಿಲ್ಲಬಲ್ಲಂತಹ ಬಾರ್ಜ್‌ ಬರಲಿದೆ. ಸ್ಪಂದನೆ ಉತ್ತಮವಾಗಿದ್ದು, ಬೇಡಿಕೆ ಇದ್ದಲ್ಲಿ ಬಾರ್ಜ್‌ ಗಳ ಸಂಖ್ಯೆ ಹೆಚ್ಚಿಸುವುದಕ್ಕೆ ಅವಕಾಶಗಳಿವೆ ಎಂದು ಮೂಲಗಳು ತಿಳಿಸಿವೆ.

ಸರಕು ವಾಹನಗಳಿಗೆ ಕನಿಷ್ಠ ದರಗಳನ್ನು ವಿಧಿಸಲಾಗುವುದು, ನಿರಂತರವಾಗಿ ಹೋಗುವ ವಾಹನಗಳು ಹೆಚ್ಚಿರುವ ಕಾರಣ ಬಾರ್ಜ್‌ ಅನ್ನು ಲಾಭದಾಯಕವಾಗಿ ನಿರ್ವಹಣೆ ಮಾಡಿಕೊಂಡು ಹೋಗುವುದು ಸಾಧ್ಯ ಎನ್ನುವುದು ಇಲಾಖೆಯ ಲೆಕ್ಕಾಚಾರ. ಸದ್ಯ ಬಂದರು ಭಾಗದ ಅಗಲ ಕಿರಿದಾದ ಮಾರ್ಗಗಳಲ್ಲಿ ಸರಕು ಲಾರಿಗಳ ಸಂಚಾರ ಕಷ್ಟಕರವಾಗಿದೆ. ಬಾರ್ಜ್‌ನಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಕೂಳೂರು ವರೆಗೆ ಸಾಗಿ ದರೆ ಮುಂದೆ ಪ್ರಯಾಣ ಸರಾಗವಾಗಲಿದೆ.

ಒಳನಾಡು ಜಲಸಾರಿಗೆ ಇಲಾಖೆಯ ಸದ್ಯದ ಮಾಹಿತಿ ಪ್ರಕಾರ ಬಾರ್ಜ್‌ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೂ ಉದ್ದೇಶಿಸಲಾಗಿದೆ.

ಯೋಜನೆಗೆ ಮರು ಜೀವ
ಭಾರತೀಯ ಒಳನಾಡು ಜಲಮಾರ್ಗ ಪ್ರಾಧಿಕಾರವು ರಾಜ್ಯದಲ್ಲಿ ಗುರುತಿಸಿರುವ 11 ವಾಟರ್‌ವೆàಗಳಲ್ಲಿ ಫಲ್ಗುಣಿ, ನೇತ್ರಾವತಿ ಸೇರಿದಂತೆ ಕಬಿನಿ, ಕಾಳಿ, ಶರಾವತಿ ನದಿಗಳನ್ನು ಸರಕು ಸಾಗಣೆಗಾಗಿ ಅಭಿವೃದ್ಧಿ ಪಡಿಸಲು 2016-17ನೇ ಸಾಲಿನಲ್ಲಿ “ಇನ್‌ಲ್ಯಾಂಡ್ ವಾಟರ್‌ವೆàಸ್‌ ಅಥಾರಿಟಿ ಆಫ್‌ ಇಂಡಿಯಾ’ (ಐಡಬ್ಲ್ಯುಎಐ)ವಿಸ್ತೃತ ಯೋಜನಾ ವರದಿ ಸಲ್ಲಿಸಿತ್ತು. ಆದರೆ ಸರಕು ಸಾಗಣೆಗೆ ಇವು ಅಷ್ಟಾಗಿ ಸೂಕ್ತವಲ್ಲ ಎಂಬ ವರದಿಯ ಹಿನ್ನೆಲೆ ಯಲ್ಲಿ ಯೋಜನೆಗೆ ಹಿನ್ನಡೆಯಾಗಿತ್ತು. ಈಗ ಮತ್ತೆ ಬಾರ್ಜ್‌ ಯೋಜನೆಗೆ ಜೀವ ಬಂದಿದೆ.

ಇದು ಕಾರ್ಯರೂಪಕ್ಕೆ ಬಂದಾಗ ಈ ಪ್ರದೇಶದ ಮೊದಲ ಯೋಜನೆ ಇದಾಗಲಿದೆ. ನಗರದಲ್ಲಿ ಸರಕು ಸಾಗಣೆ ವಾಹನಗಳು, ಪ್ರಯಾಣಿಕರ ವಾಹನಕ್ಕೆ ಅವಕಾ ಶವಿದೆ. ಯೋಜನೆ ಟೆಂಡರ್‌ ಹಂತದಲ್ಲಿದೆ.
– ಕ್ಯಾ| ಸಿ. ಸ್ವಾಮಿ
ಬಂದರು ಮತ್ತು ಒಳನಾಡು ಜಲಸಾರಿಗೆ ನಿರ್ದೇಶಕರು


-ವೇಣುವಿನೋದ್‌ ಕೆ.ಎಸ್‌.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.