Lok Sabha Election Results; ನೋಟಾದಲ್ಲೂ ದಕ್ಷಿಣ ಕನ್ನಡ ದಾಖಲೆ
Team Udayavani, Jun 5, 2024, 11:49 PM IST
ಕುಂದಾಪುರ: ರಾಜ್ಯದಲ್ಲಿ ಒಟ್ಟು ಚಲಾವಣೆಯಾದ ಮತಗಳ ಪೈಕಿ 0.56ರಷ್ಟು ಮತಗಳು ಈ ಬಾರಿ ನೋಟಾ (ಮೇಲಿನ ಯಾರೂ ಅಲ್ಲ) ಮತಗಳಾಗಿವೆ. ಚುನಾವಣೆಯಿಂದ ಚುನಾ ವಣೆಗೆ ನೋಟಾ ಮತದಲ್ಲಿ ವ್ಯತ್ಯಾಸ ಆಗುತ್ತಿರುವುದು ಗಮನಾರ್ಹ. ರಾಜ್ಯದಒಟ್ಟು ಮತದಾನದಲ್ಲಿ ಕಳೆದ ಬಾರಿಗಿಂತ ಈ ಬಾರಿ ನೋಟಾ ಸಂಖ್ಯೆ ಇಳಿದಿದೆ.
ದೇಶದಲ್ಲಿ ದಾಖಲೆ
ಮಧ್ಯಪ್ರದೇಶದ ಇಂದೋರ್ ಕ್ಷೇತ್ರ2ನೇ ಅತಿ ಹೆಚ್ಚು ನೋಟಾ ಮತ ಗಳಿಸಿದೆ. 2,18,674 ನೋಟಾ ಬಿದ್ದಿದ್ದು 2019ರ ಚುನಾವಣೆ ಯಲ್ಲಿ ಬಿಹಾರದ ಗೋಪಾಲ್‌ಗಂಜ್ ಕ್ಷೇತ್ರದ ನೋಟಾ ದಾಖಲೆಯನ್ನು ಇಂದೋರ್ ಮುರಿದಿದೆ.
ಕಳೆದ ಚುನಾವಣೆಯಲ್ಲಿ ಗೋಪಾಲ್‌ಗಂಜ್ ನಲ್ಲಿ 51,660 ನೋಟಾಗೆ ಮತ ಚಲಾವಣೆಯಾಗಿತ್ತು. ಇಂದೋರ್‌ನಲ್ಲಿ ಬಿಜೆಪಿಯ ಶಂಕರ್ ಲಾಲ್‌ವಾನಿ 12,26,751 ಮತಗಳನ್ನು ಪಡೆದು ಅಗ್ರ ಸ್ಥಾನದಲ್ಲಿದ್ದರೆ, ಉಳಿದ 13 ಅಭ್ಯರ್ಥಿಗಳು ನೋಟಾಕ್ಕಿಂತ ಕಡಿಮೆ ಮತ ಪಡೆದಿದ್ದಾರೆ.
ರಾಜ್ಯದಲ್ಲಿ ದಾಖಲೆ
ರಾಜ್ಯದಲ್ಲಿ ಬಿಜೆಪಿ ಶೇ. 46.06, ಕಾಂಗ್ರೆಸ್ ಶೇ. 45.43, ಜೆಡಿಎಸ್ ಶೇ. 5.6 ಮತಗಳನ್ನು ಪಡೆದರೆ ಪಕ್ಷಗಳಾದ ಬಿಎಸ್‌ಪಿ (0.33), ಸಿಪಿಐ (0.01) ಗಳಿಸಿದ್ದಕ್ಕಿಂತ ಅಧಿಕ ಮತ ಶೇ. 0.56 ಮತ ನೋಟಾಗೆ ಬಿದ್ದಿದೆ. ಅತಿಹೆಚ್ಚು ನೋಟಾ ಮತ ಚಲಾವಣೆಯಾದುದು ದ.ಕ. ಜಿಲ್ಲೆಯಲ್ಲಿ. ಅನಂತರದ ಸ್ಥಾನ ಬೆಂಗಳೂರು ಉತ್ತರಕ್ಕೆ. ಉಳಿದಂತೆ 10 ಸಾವಿರಕ್ಕಿಂತ ಹೆಚ್ಚು ನೋಟಾ ಮತ ಬಿದ್ದ ಕ್ಷೇತ್ರಗಳೆಂದರೆ ಬೆಂಗಳೂರು ಸೆಂಟ್ರಲ್, ಬೆಂಗಳೂರು ಗ್ರಾಮಾಂತರ, ಹಾವೇರಿ, ಉಡುಪಿ ಚಿಕ್ಕಮಗಳೂರು, ಉತ್ತರಕನ್ನಡ. ಅತಿ ಕಡಿಮೆ ನೋಟಾ ಮತ ಚಲಾವಣೆಯಾದುದು ಚಿಕ್ಕೋಡಿಯಲ್ಲಿ.
ಕ್ಷೇತ್ರವಾರು ನೋಟಾಗೆ
ಬಿದ್ದ ಮತಗಳ ವಿವರ
ಬಾಗಲಕೋಟೆ 3,420, ಬೆಂಗಳೂರು ಸೆಂಟ್ರಲ್ 12,126, ಬೆಂಗಳೂರು ಉತ್ತರ 13,554, ಬೆಂ. ಗ್ರಾ. 10,649, ಬೆಂ. ದಕ್ಷಿಣ 7,857, ಬೆಳಗಾವಿ 5,726, ಬಳ್ಳಾರಿ 7,889, ಬೀದರ್ 4,686, ವಿಜಯಪುರ 7,502, ಚಾಮರಾಜನಗರ 8,143, ಚಿಕ್ಕಬಳ್ಳಾಪುರ 6,596, ಚಿಕ್ಕೋಡಿ 2,608, ಚಿತ್ರದುರ್ಗ 3,190, ದಕ್ಷಿಣ ಕನ್ನಡ 23,576, ದಾವಣಗೆರೆ 3,176, ಧಾರವಾಡ 6,147, ಗುಲ್ಬರ್ಗ 8,429, ಹಾಸನ 8,541, ಹಾವೇರಿ 10,865, ಕೋಲಾರ 5,831, ಕೊಪ್ಪಳ 3,519, ಮಂಡ್ಯ 7,736, ಮೈಸೂರು 4,490, ರಾಯಚೂರು 9,850, ಶಿವಮೊಗ್ಗ 4,332, ತುಮಕೂರು 6,460, ಉಡುಪಿ ಚಿಕ್ಕಮಗಳೂರು 11,269, ಉತ್ತರಕನ್ನಡ 10,176.
ಕಳೆದ ಬಾರಿ
2019ರಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಶೇ. 51.38, ಕಾಂಗ್ರೆಸ್‌ಗೆ ಶೇ. 31.88, ಜೆಡಿಎಸ್‌ಗೆ ಶೇ. 9.67, ಬಿಎಸ್‌ಪಿಗೆ ಶೇ. 1.17 ಮತ ಚಲಾವಣೆಯಾಗಿದ್ದರೆ ನೋಟಾ ಪ್ರಭಾವ ಶೇ. 71ರಷ್ಟಿತ್ತು. ಈ ಬಾರಿ ಪ್ರಮಾಣ ಇಳಿಕೆಯಾಗಿದೆ. ಕಳೆದ ಬಾರಿ ಸಿಪಿಐ ಹಾಗೂ ಸಿಪಿಎಂ ತಲಾ ಶೇ. 0.05ರಷ್ಟು ಮತಗಳಿಸಿದ್ದವು. ಕಳೆದ ಬಾರಿ ದ.ಕ.ದಲ್ಲಿ 7,380, ಉಡುಪಿಯಲ್ಲಿ 7,518 ನೋಟಾ ಮತ ಚಲಾವಣೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.