ದ.ಕ., ಉಡುಪಿ: ಸಾಂಗವಾಗಿ ನಡೆದ ನೀಟ್
Team Udayavani, May 6, 2019, 6:14 AM IST
ಮಂಗಳೂರು/ ಉಡುಪಿ: ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುವ 2019ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ರವಿವಾರ ಸುಗಮವಾಗಿ ನಡೆಯಿತು.
ದ.ಕ. ಜಿಲ್ಲೆಯಲ್ಲಿ ಮಂಗಳೂರಿನ ಸೈಂಟ್ ಅಲೋಶಿಯಸ್, ಶಾರದಾ ವಿದ್ಯಾಲಯ, ಕೆನರಾ ಪ್ರೌಢಶಾಲೆ, ಬಜಪೆ ಶ್ರೀದೇವಿ ಕಾಲೇಜು ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಮಧ್ಯಾಹ್ನ 2ರಿಂದ 5ರ ವರೆಗೆ ಪರೀಕ್ಷೆ ನಡೆಯಿತು.
ಮಧ್ಯಾಹ್ನ 12ರೊಳಗೆ ಹಾಜರಿರು ವುದು ಕಡ್ಡಾಯವಾಗಿದ್ದ ಹಿನ್ನೆಲೆಯಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿ ಗಳ ಉದ್ದನೆಯ ಕ್ಯೂ ಕಂಡುಬಂತು.
ಮಧ್ಯಾಹ್ನ 1.30ಕ್ಕೆ ಕೊಠಡಿಯ ಪ್ರವೇಶ ದ್ವಾರವನ್ನು ಬಂದ್ ಮಾಡಲಾ ಯಿತು. ಎಡ್ಮಿಟ್ ಕಾರ್ಡ್, ಗುರುತು ಚೀಟಿ ಕಡ್ಡಾಯವಾಗಿತ್ತು.
ನಿಯಮ ಪಾಲನೆ
ಅಭ್ಯರ್ಥಿಗಳು ತುಂಬು ತೋಳಿನ ಅಂಗಿ, ಶೂ ಧರಿಸುವುದಕ್ಕೆ ನಿಷೇಧ ವಿತ್ತು. ವಿದ್ಯಾರ್ಥಿನಿಯರೂ ಯಾವುದೇ ಆಭರಣ ತೊಡುವಂತಿರಲಿಲ್ಲ. ಈ ಬಗ್ಗೆ ಕಾಲೇಜಿನಲ್ಲಿಯೇ ಉಪನ್ಯಾಸಕರು ತಿಳಿಸಿದ್ದರಿಂದ ಗೊಂದಲಕ್ಕೆಡೆಯಾಗಲಿಲ್ಲ ಎಂದು ಪೋಷಕ ರೋರ್ವರು ತಿಳಿಸಿದರು.
ಸಂಚಾರ ದಟ್ಟಣೆ
ನಗರದ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ಬರೆದ ಮಕ್ಕಳನ್ನು ಕರೆದೊಯ್ಯಲು ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳಲ್ಲಿ ಪೋಷಕರು ಆಗಮಿಸಿದ್ದರು. ಅಲ್ಲದೆ ಕಾರುಗಳನ್ನು ಕಿರಿದಾದ ರಸ್ತೆಗಳಲ್ಲಿಯೇ ಪಾರ್ಕಿಂಗ್
ಮಾಡಿದ್ದರಿಂದ ಸಂಜೆ 4.45ರಿಂದ 5ರ ಅವಧಿಯಲ್ಲಿ ಉಳಿದ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು.
ಉಡುಪಿ: 2,673 ಹಾಜರು, 311 ಗೈರು
ಉಡುಪಿಯ ಪೂರ್ಣಪ್ರಜ್ಞ, ಕನ್ನರ್ಪಾಡಿಯ ಸೈಂಟ್ ಮೇರೀಸ್, ಮಣಿಪಾಲದ ಮಾಧವಕೃಪಾ, ಬ್ರಹ್ಮಾವರದ ಲಿಟ್ಲರಾಕ್, ಜಿ.ಎಂ. ವಿದ್ಯಾನಿಕೇತನ ಸಂಸ್ಥೆಗಳಲ್ಲಿ ಪರೀಕ್ಷೆ ನಡೆಯಿತು. 2,984 ವಿದ್ಯಾರ್ಥಿಗಳು ನೋಂದಾಯಿಸಿದ್ದು, 311 ಮಂದಿ ಗೈರುಹಾಜರಾಗಿದ್ದರು. ಬಿಗಿ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.
ಆ್ಯಂಬುಲೆನ್ಸ್‌ನಲ್ಲಿ ಬಂದು ಬರೆದಳು
ಉಡುಪಿ: ರಸ್ತೆ ಅವಘಡದಲ್ಲಿ ಗಾಯಗೊಂಡ ವಿದ್ಯಾರ್ಥಿನಿಯೊಬ್ಬಳು ರವಿವಾರದ ನೀಟ್ ಪರೀಕ್ಷೆಗೆ ಆ್ಯಂಬುಲೆನ್ಸ್‌ನಲ್ಲಿ ಬಂದು ಉತ್ತರಿಸಿದ್ದಾಳೆ.
ಬ್ರಹ್ಮಾವರ ಸಮೀಪದ ಚೇರ್ಕಾಡಿ ಗ್ರಾಮದ ಮುಂಡಿRನಜೆಡ್ಡುವಿನಲ್ಲಿ ಮೇ 1ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಹೊನ್ನಾವರ ಮೂಲದ ಸುಚೇತಾ ಮತ್ತು ಪರ್ಕಳದ ಅನಘಾ ಗಾಯಗೊಂಡಿದ್ದರು. ಸುಚೇತಾ ಕಾಲಿನ ಮೂಳೆಗೆ, ಅನಘಾ ತಲೆಗೆ ಪೆಟ್ಟಾಗಿತ್ತು. ಅನಘಾ ಶನಿವಾರ ಮಣಿಪಾಲ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಯವರ ಕಾರಿನಲ್ಲಿ ಮಣಿಪಾಲ ಮಾಧವಕೃಪಾ ಶಾಲೆಯಲ್ಲಿ ನಡೆದ ಪರೀಕ್ಷೆಗೆ ಹಾಜರಾದರು. ಸುಚೇತಾ ಅವರಿಗೆ ನಡೆಯಲು ಆಗುತ್ತಿರಲಿಲ್ಲ. ಅವರು ಪರೀಕ್ಷೆಗೆ ಬರೆಯಬೇಕೆಂದು ತಂದೆ, ಭಟ್ಕಳದ ಪ್ರೌಢ ಶಾಲೆಯ ಶಿಕ್ಷಕ ಸುರೇಶ ನಾಯಕ್ ಅವರು ವೈದ್ಯರಲ್ಲಿ ಮನವಿ ಮಾಡಿಕೊಂಡ ಮೇರೆಗೆ ವೈದ್ಯರು ಆ್ಯಂಬುಲೆನ್ಸ್‌ನಲ್ಲಿ ಕಳುಹಿಸಲು ಒಪ್ಪಿದರು. ಪರೀಕ್ಷೆ ಬರೆದ ಬಳಿಕ ಮರಳಿ ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಾದರು. ಇವರಿಬ್ಬರೂ ಕುಂದಾಪುರ ಎಕ್ಸಲೆಂಟ್ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು.
ನೀಟ್ ಪರೀಕ್ಷೆ ಸುಲಭವಾಗಿತ್ತು. ಯಾವುದೇ ಗೊಂದಲಗಳಿಲ್ಲದೆ ಪರೀಕ್ಷೆ ಬರೆದಿದ್ದೇನೆ. ಮುಂದೆ ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರಿಯುವ ಕನಸಿದೆ.
-ಮಂಥನ್, ಮಂಗಳೂರು
ಪರೀಕ್ಷೆ ಸುಲಭವಾಗಿತ್ತು. ಪರೀಕ್ಷಾ ಕೇಂದ್ರದವರು ಸಹಕಾರ ಕೊಟ್ಟರು.
ಬೆಡ್‌ನಲ್ಲಿ ಕುಳಿತುಕೊಂಡು ಪರೀಕ್ಷೆ ಬರೆದಿದ್ದೇನೆ.
– ಸುಚೇತಾ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.