ದಕ್ಷಿಣ ಕನ್ನಡ ಜಿಲ್ಲೆಯ 42 ಶಾಲೆಗಳಲ್ಲಿ ಶೂನ್ಯ ದಾಖಲಾತಿ
Team Udayavani, Sep 19, 2022, 12:27 PM IST
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ, ಅನುದಾನಿತ ಹಾಗೂ ಖಾಸಗಿ ಸಹಿತ ಒಟ್ಟು 42 ಶಾಲೆಗಳಲ್ಲಿ 2021-22 ಹಾಗೂ 2022-23ರಲ್ಲಿ ಶೂನ್ಯ ದಾಖಲಾತಿಯಾಗಿದೆ.
ಬಂಟ್ವಾಳ ವಲಯ ಶಿಕ್ಷಣಾಧಿಕಾರಿ ವ್ಯಾಪ್ತಿಯ 8, ಬೆಳ್ತಂಗಡಿಯ 2, ಮಂಗಳೂರಿನ 12, ಮಂಗಳೂರು ದಕ್ಷಿಣದ 9, ಮೂಡುಬಿದಿರೆಯ 6, ಪುತ್ತೂರಿನ 4 ಹಾಗೂ ಸುಳ್ಯದ 1 ಶಾಲೆಯಲ್ಲಿ ಶೂನ್ಯ ದಾಖಲಾತಿಯಾಗಿದೆ. ಪರಿಣಾಮವಾಗಿ ಈ ಶಾಲೆಗಳು ಬಾಗಿಲು ಹಾಕುವ ಸಾಧ್ಯತೆಗಳೇ ಅಧಿಕ ಎನ್ನಲಾಗುತ್ತಿದೆ.
ಶಾಲಾ ಶಿಕ್ಷಣ ಹಾಗೂ ಸಾಕ್ಷರತ ಇಲಾಖೆ ಉಪನಿರ್ದೇಶಕ (ಆಡಳಿತ) ಸುಧಾಕರ್ ಅವರು “ಉದಯವಾಣಿ’ ಜತೆಗೆ ಮಾತನಾಡಿ, ಮಕ್ಕಳ ಕೊರತೆಯ ಹಿನ್ನೆಲೆಯಲ್ಲಿ ವಿವಿಧ ಶಾಲೆಗಳಲ್ಲಿ ಕಳೆದ ಎರಡು ವರ್ಷಗಳಿಂದ ಶೂನ್ಯ ದಾಖಲಾತಿಯಾಗಿದೆ. ಅಂತಹ ಶಾಲೆಗಳಿಂದ ವಿವರಗಳನ್ನು ಪಡೆಯಲಾಗುತ್ತಿದೆ. ಪರ್ಯಾಯ ಕ್ರಮದ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳ ಜತೆಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಇದನ್ನೂ ಓದಿ : ನೆಚ್ಚಿನ ನಾಯಕನಿಂದಲೇ ಮಗಳ ನಾಮಕರಣ ಮಾಡಲು 9ವರ್ಷ ಕಾದ ದಂಪತಿ, ಕೊನೆಗೂ ಘಳಿಗೆ ಬಂದೇ ಬಿಟ್ಟಿತು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.